ಕೋಲಾರ: ಡಾ|| ಬಿ.ಆರ್. ಅಂಬೇಡ್ಕರ್ ರವರ 126ನೇ ಜಯಂತೋತ್ಸವ-ಪ್ರತಿಮೆಗೆ ಮಾಲಾರ್ಪಣೆ

Source: shabbir | By Arshad Koppa | Published on 17th April 2017, 8:29 AM | State News |

ಕೋಲಾರ ಏ.14: ಡಾ|| ಬಿ.ಆರ್. ಅಂಬೇಡ್ಕರ್ ರವರ 126ನೇ ಜಯಂತೋತ್ಸವದ ಸಂದರ್ಭದಲ್ಲಿ ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಡಾ|| ಡಿ.ಕೆ. ರಮೇಶ್‍ರವರು ಮಾಲಾರ್ಪಣೆ ಮಾಡಿದರು. 
    ನಂತರ ಡಾ|| ಡಿ.ಕೆ. ರಮೇಶ್ ನಮ್ಮ ನಡೆ ಕೂಡಿ ಬಾಳೋಣ ಕಡೆ ಕಾರ್ಯಕ್ರಮದಲ್ಲಿ ದಲಿತ ಮುಖಂಡರೊಂದಿಗೆ ತಿಂಡಿ ಸಮಿಯುತ್ತಾ ಮಾತನಾಡಿದ ಅವರು ದೇಶಕ್ಕೆ ಸಂವಿಧಾನ ರಚಿಸಿದಂತಹ ಮಹಾನ್ ಪುರುಷ ಮಾನವತಾ ವಾದಿ, ಯುಗ ಪುರುಷ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ರವರು ಈ ದೇಶದಲ್ಲಿ ಸಮಾನತೆ ಸಾರಬೇಕೆಂಬ ಉದ್ದೇಶದಿಂದಲೇ ಎಲ್ಲರಿಗೂ ಸಮನಾಗಿ ಸಂವಿಧಾನದಲ್ಲಿ ಮೀಸಲಾತಿಯನ್ನು ಮಾಡಿದ ಪರಿಣಾಮ ಇಂದು ಎಲ್ಲರೂ ಅಧಿಕಾರ ಪಡೆಯುವಂತಾಗಿದೆ ರಾಷ್ಟ್ರ ಮತ್ತು ರಾಜ್ಯದಲ್ಲಿ ದಲಿತರಿಗೆ ರಾಷ್ಟ್ರಪತಿ, ರಾಜ್ಯಪಾಲರಂತಹ ಉನ್ನತ ಹುದ್ದೆಗಳಲ್ಲಿಯೂ ಅಧಿಕಾರ ಸಿಕ್ಕಿದಾಗ ಮಾತ್ರ ಅಂಬೇಡ್ಕರ್ ಆಶಯ ನೆರವೇರಿದಂತೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪಿ.ವಿ.ಸಿ. ಕೃಷ್ಣಪ್ಪ, ಡಿ.ಪಿ.ಎಸ್. ಮುನಿರಾಜು, ನರಸಾಪುರ ನಾರಾಯಣಸ್ವಾಮಿ, ಮಂಗಳಮುಖಿಯರ ಸಂಘದ ಅಧ್ಯಕ್ಷೆ ಅಶ್ವಿನಿ ರಾಜನ್, ಮಾರ್ಜೆನಹಳ್ಳಿ ಮುನಿರಾಜು, ನೀರಾವರಿ ಸಂಚಾಲಕ ವಿ.ಕೆ.ರಾಜೇಶ್, ಕಲ್ವಮಂಜಲಿ ಶಿವಣ್ಣ, ಕವಿ ನಾರಾಯಣಸ್ವಾಮಿ, ಖಾದ್ರಿಪುರ ಬಾಬು ಮುಂತಾದವರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...