ಕೋಲಾರ: ಡಿ.ಕೆ.ರವಿ ಅಭಿಮಾನಿಗಳ ಸಂಘದ ವತಿಯಿಂದ ಉಚಿತ ಕುಡಿಯುವ ನೀರಿನ ಬಾಟಲ್ ವಿತರಣೆ

Source: shabbir, | By Arshad Koppa | Published on 14th November 2017, 8:21 AM | State News |

ಕೋಲಾರ,ನ.13: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಸಮಸ್ತ ಕೋಲಾರ ಜನತೆಗೆ ರಾಜ್ಯ ಡಿ.ಕೆ.ರವಿ ಅಭಿಮಾನಿಗಳ ಸಂಘದ ವತಿಯಿಂದ ಅಂತರಗಂಗೆ ಮತ್ತು ಸೀತಿ ಬೆಟ್ಟದಲ್ಲಿ 5000 ಸಾವಿರ ಉಚಿತ ಕುಡಿಯುವ ನೀರಿನ ಬಾಟಲ್‍ಗಳನ್ನು ವಿತರಿಸಲಾಯಿತು.


    ಅತಿ ಶೀಘ್ರದಲ್ಲಿ ಬೃಹತ್ ಸಮಾವೇಶವನ್ನು ಮಾಡಿ ಡಿ.ಕೆ.ರವಿ ರವರ ತಂದೆ ತಾಯಿ ರವರ ಸಮ್ಮುಖದಲ್ಲಿ ಡಿ.ಕೆ.ಆರ್.ಪಕ್ಷದ ಚಿನ್ಹೆ ಮತ್ತು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ವರ್ಧಿಸಲು ಮುಂದಾಗುವುದಾಗಿ ರಾಜ್ಯ ಡಿ.ಕೆ.ರವಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಮುರಳಿ ತಿಳಿಸಿದರು.
    ಈ ಸಂದರ್ಭದಲ್ಲಿ ಡಾ.ಡಿ.ಕೆ ರಮೇಶ್, ವೇಮಗಲ್ ಮಂಜುನಾಥ್, ಬಾಬು, ಮುರಳಿ, ಪವನ್ ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next