ಕೋಲಾರ:ಸರ್ಕಾರಿ ಆಸ್ಪತ್ರೆಯ ಶವಗಾರ ಕಟ್ಟಡ ಸ್ಥಳಾಂತರಕ್ಕೆ ವೀರಶೈವ ಮಂಡಳಿ ಆಗ್ರಹ

Source: shabbir | By Arshad Koppa | Published on 19th September 2017, 8:20 AM | State News |

ಕೋಲಾರ ಸೆ,18- ಬಂಗಾರಪೇಟೆ ಪಟ್ಟಣದ ಮಾದಯ್ಯ ರಸ್ತೆಯಲ್ಲಿನ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸರ್ಕಾರಿ ಆಸ್ಪತ್ರೆಯ ಶವಗಾರ ಕಟ್ಟಡವನ್ನು ಸ್ಥಳಾಂತರಿಸ ಬೇಕೆಂದು ವೀರಶೈವ ಮಂಡಳಿಯ ನಿಯೋಗವು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.


ಈ ಸಂದರ್ಭದಲ್ಲಿ ವೀರಶೈವ ಮಂಡಳಿಯ ಅಧ್ಯಕ್ಷ ಸದಾಶಿವಯ್ಯ ಮಾತನಾಡಿ ಬಸವೇಶ್ವರ ದೇವಾಸ್ಥಾನವು ಸುಮಾರು 90 ವರ್ಷಗಳ ಇತಿಹಾಸ ಹೊಂದಿದ್ದು, ಧಾರ್ಮಿಕ, ವಧಿ ವಿಧಾನಗಳನ್ನು ಪುಜಾ ಕೈಂಕಾರ್ಯಗಳನ್ನು ನೆರವೇರಿಸಿ ಕೊಂಡು ಬರುತ್ತಿದೆ. ದೇವಾಲಯದ ಹಿಂಭಾಗದಲ್ಲಿ  ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಷಾಯ ತಿಳಿದು ಗುತ್ತಿಗೆದಾರರನ್ನು ವಿಚಾರಿಸಿದಾಗ ಮೊದಲು ಫಾರ್ಮಸಿ, ನಂತರ ಸಂಗ್ರಹಾಗಾರ ಕೊಠಡಿ ಎಂದು ನಂತರ ಅಧಿಕೃತವಾಗಿ ಶವಗಾರ ಎಂದು ತಿಳಿದು ಬಂದ ಹಿನ್ನಲೆಯಲ್ಲಿ ಶವಾಗಾರವನ್ನು ಸ್ಥಳಾಂತರಿಸ ಬೇಕೆಂದು ಮನವಿ ಮಾಡುತ್ತಿದ್ದೇವೆಂದು ತಿಳಿಸಿದರು
ದೇವಾಲಯ ಹಿಂಭಾಗದಲ್ಲೇ ಶವಗಾರ ನಿರ್ಮಿಸುತ್ತಿರುವುದು ಸೂಕ್ತವಲ್ಲ ಭಕ್ತಾಧಿಗಳ ಪಾವಿತ್ರತೆಗೆ ಧಕ್ಕೆಯಾಗಲಿದೆ , ಅಲ್ಲದೆ ರಸ್ತೆ ಪಕ್ಕದಲ್ಲೇ ಕಟ್ಟಡ ಇರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ ಎಂದು ವಿವರಿಸಿದಾಗ ಅಧಿಕಾರಿಗಳು ಸಿ.ಎಂ.ಕಾರ್ಯಕ್ರಮದ ನಂತರ ಈ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಕೆ.ಬಿ. ಬೈಲಪ್ಪ, ಕಾರ್ಯದರ್ಶಿ ವಿಜಯಕುಮಾರ್, ಖಜಾಂಜಿ ನಂಜಪ್ಪ ಮುಂತಾದವರು ಹಾಜರಿದ್ದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...