ರಾಯಲ್ಪಾಡು:ಗ್ರಾಮೀಣ ಬಾಗದ ಜನತೆಯ ಅಭ್ಯುದ್ಯಯಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿಯಲ್ಲಿ ಸಾಲಸತ್ಯನಾರಾಯಣ್

Source: shabbir | By Arshad Koppa | Published on 8th August 2017, 11:37 PM | State News | Guest Editorial |

ರಾಯಲ್ಪಾಡು:ಮೌಲ್ಯಯುತ ಜೀವನದಿಂದ ಮಾತ್ರ ಸಮಾಜದಲ್ಲಿ ಗೌರವದ ಜೊತೆಗೆ ಯಶಸ್ಸು ಸಾಧಿಸಲು ಸಾಧ್ಯವಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ್ ತಿಳಿಸಿದರು
ಗೌಪಲ್ಲಿಯ ಶ್ರೀ ಕಾಶಿವಿಶ್ವೇಶ್ವರ ದೇವಾಲಯದ ಆವರಣದಲ್ಲಿ ಸಹಾಕರ ಸಂಘದವತಿಯಿಂದ ಸವಿತಾ ಸಮಾಜದ ಬಡಕುಟುಂಬಗಳಿಗೆ ತಲಾ 15000ರೂ ಮೊತ್ತದ ಸಾಲವನ್ನು ವಿತರಿಸಿ ಮಾತನಾಡಿದರು.
ಕಳೆದ 10ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಬೆಳೆಯಾಗದೆ ಗ್ರಾಮೀಣ ಬಾಗದ ಜನತೆ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆಂದರು. ಮಾನ್ಯ ಜಿಲ್ಲಾ ಉಸ್ತವಾರಿ ಸಚಿವರು ಸರ್ಕಾರದ ಮೇಲೆ ಒತ್ತಡವನ್ನು ಏರಿ ಗ್ರಾಮೀಣ ಬಾಗದ ಜನತೆಯ ಅಭ್ಯುದ್ಯಯಕ್ಕಾಗಿ ಡಿಸಿಸಿ ಬ್ಯಾಂಕ್ ಮೂಲಕ ಬೀದಿವ್ಯಾಪರಸ್ಥರಿಗೆ, ಕೈಕಸುಬುದಾರರಿಗೆ , ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ನೀಡುತ್ತಿದ್ದಾರೆಂದರು.   
ಈ ಸಾಲವು ಮನ್ನಾ ಆಗುವ ಸಾಲವಲ್ಲ ಇದನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದರೆ ಮುಂದೆ ಇನ್ನು ಹೆಚ್ಚಿನ ಸಾಲವನ್ನು ಪಡೆಯಬಹುದು . ಆದ್ದರಿಂದ ಈಗ ಎಷ್ಟು ಮುತುವರ್ಜಿಯಿಂದ ತೆಗೆದುಕೊಂಡಿದ್ದರೋ , ಅಷ್ಟೇ ಮುತುವರ್ಜಿಯಿಂದ ಮರುಪಾವತಿ ಮಾಡಬೇಕೆಂದು ವಿವರಿಸಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾದಿಕಾರದ ನಿದೇರ್ಶಕರು ಹಾಗು ಸವಿತಾ ಸಮಾಜದ ಜಿಲ್ಲಾಧ್ಯಕ ಎಸ್.ಮಂಜುನಾಥ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಒಳ್ಳೇಯ ನಾದಸ್ವರ ವಿದ್ವಾಂಸರಿದ್ದು , ಅರ್ಥಿಕ ಸಂಕಷ್ಟದಿಂದ ತಮ್ಮಲ್ಲಿರುವ ಸಂಗೀತ ಜ್ಞಾನವು ಗ್ರಾಮೀಣ ಮಟ್ಟಕ್ಕೆ ಸೀಮಿತವಾಗಿದ್ದು , ಅಂತಹ ವಿದ್ವಾಂಸರಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಅಗತ್ಯವೆಂದರು. 
ಗೌನಿಪಲ್ಲಿಯ ನಿರ್ಮಾಣದ ಹಂತದಲ್ಲಿರುವ ಸಮುದಾಯಭವನಕ್ಕೆ ಹತ್ತುಸಾವಿರರೂ ದೇಣ ಗೆಯನ್ನು ಸಂಘದ ಪದಾಧಿಕಾರಿಗಳಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಟಿ.ಜಿ.ರಮೇಶ್‍ಬಾಬು, ಪಿ.ಟಿ.ಶಂಕರ್, ಅಶ್ವಥ್, ರೆಡ್ಡಪ್ಪ, ಮಂಜುನಾಥ್ , ಗ್ರಾಮದ ಮುಖಂಡರಾದ ಸೋಮಶೇಖರ್, ಸಲ್ಲಪ್ಪ, ನರೇಂದ್ರಬಾಬು, ರಹಮತ್ತುಲ್ಲಾ, ವಲ್ಲೀಬಾಷ, ನಾರಾಯಣಸ್ವಾಮಿ, ಸುಂದರ್‍ರಾಜ್, ರವಿ,  ಸವಿತಾ ಸಮಾಜದ ಜಿಲ್ಲಾ ಪ್ರದಾನ ಸಂಚಾಲಕ ಒಲಂಪಿಕ್ ಶಂಕರ್ ,ಕಾಂಗ್ರೆಸ್ ತಾಲೂಕು ಯುವಮೋರ್ಚಾ ಅಧ್ಯಕ್ಷ ಮಧುಸೂದನ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಜಾಮಕಾಯಿಲ ವೆಂಕಟೇಶ್ ಹಾಗು ತಾಲೂಕಿನ ಸವಿತಾ ಸಮಾಜದ ಪದಾಧಿಕಾರಿಗಳು ಬಾಗವಹಿಸಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...