ಕೋಲಾರ: ಎಲ್ಲ ಕಾಮಗಾರಿಗಳ ಟೆಂಡರ್ ಮತ್ತು ಕಾರ್ಯಾದೇಶ ಪ್ರಕ್ರಿಯೆ ಡಿ.15ರೊಳಗಾಗಿ ಪೂರ್ಣಗೊಳಿಸಿ -ಬಿ. ಬಿ. ಕಾವೇರಿ

Source: shabbir, | By Arshad Koppa | Published on 15th November 2017, 8:25 AM | State News |


    ಎಲ್ಲ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಹಾಗೂ ಕಾರ್ಯಾದೇಶ ನೀಡುವ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಡಿಸೆಂಬರ್ 15ರೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಬಿ ಬಿ ಕಾವೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಮ್ಮ ಆನಂದರೆಡ್ಡಿ ಅವರ ಅಧ್ಯಕ್ಷತೆ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. 2017-18 ನೇ ಸಾಲಿನ ಅರ್ಧದಷ್ಟು ಅವಧಿ ಮುಗಿದಿದ್ದರೂ ಬಹುತೇಕ ಕಾಮಗಾರಿಗಳ ಕಾರ್ಯ ಪ್ರಾರಂಭಗೊಳ್ಳದಿರುವ ಹಿನ್ನಲೆಯಲ್ಲಿ ಅಸಮಧಾನಗೊಂಡ ಅವರು ಈ ಬಾರಿ ಚುನಾವಣಾ ವರ್ಷವಾದ್ದರಿಂದ ಕಾಮಾಗಾರಿಗಳ ಕೆಲಸವನ್ನು ಪ್ರಾರಂಭಿಸಲು ಆರ್ಥಿಕ ವರ್ಷದ ಅಂತ್ಯದವರೆಗೆ ಕಾಯಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಅಲ್ಲದೇ ಕಾಮಗಾರಿ ಪ್ರಾರಂಭಿಸಿರುವ ಇಲಾಖೆಗಳು ಅನುಷ್ಠಾನ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ಸುಮ್ಮನೆ ಇರದೇ, ಕಾಮಗಾರಿ ಸರಿಯಾದ ರೀತಿಯಲ್ಲಿ ಸಕಾಲದಲ್ಲಿ ಪೂರ್ಣಗೊಳ್ಳುವವರೆಗೆ ಮೇಲುಸ್ತುವಾರಿ ಮಾಡಬೇಕು ಎಂದು ಸೂಚಿಸಿದರು. 
ಕೇವಲ ಅಂಕಿ ಅಂಶಗಳನ್ನು ನೀಡದೇ ಗುಣಮಟ್ಟದ ಕೆಲಸಕ್ಕೆ ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು, ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಟೀಕೆ ಟಿಪ್ಪಣ ಗಳಿಗೆ ಕೂಡಲೇ ಸ್ಪಂದಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸೇರಿದಂತೆ ಅಗತ್ಯವಿದ್ದಲ್ಲಿ ಸ್ಪಷ್ಟೀಕರಣ ನೀಡುವಂತೆ ಸಲಹೆ ನೀಡಿದರು. 
ಪ.ಜಾ/ಪ.ಪಂ ವಿಶೇಷ ಘಟಕ ಯೋಜನೆಗಳ ಅಡಿ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು. ಅಲ್ಲದೇ ಎಲ್ಲ ಕಾಮಗಾರಿಗಳಲ್ಲೂ ಪ.ಜಾ/ಪ.ಪಂದ ಸಮುದಾಯದ ಫಲಾನುಭವಿಗಳಿಗೆ ನಿಯಮಾನುಸಾರ ಮೀಸಲಾತಿ ಒದಗಿಸಬೇಕು ಎಂದು ಅವರು ತಿಳಿಸಿದರು.
ಮುಂದಿನ 15 ದಿನದೊಳಗಾಗಿ ಎಲ್ಲ ಇಲಾಖೆಗಳೂ ಹೆಚ್ಚುವರಿ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಿ ಸಲ್ಲಿಸಬೇಕು. ಅದಕ್ಕೆ ಪೂರಕವಾಗಿ ಪ್ರಸ್ತುತ ಜಾರಿ ಇರುವ ಕಾರ್ಯಕ್ರಮಗಳ ಆರ್ಥಿಕ ಹಾಗೂ ಭೌತಿಕ ಪ್ರಗತಿ ಸಾಧಿಸಬೇಕು. ಹಾಗಾದಲ್ಲಿ ಮಾತ್ರ ಹೆಚ್ಚುವರಿ ಅನುದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ಉತ್ತಮ ಮಳೆಯಿಂದಾಗಿ ಕೃಷಿ ಆಧಾರಿತ ಎಲ್ಲ ಇಲಾಖೆಗಳಲ್ಲೂ ಉತ್ತಮ ಪ್ರಗತಿಯಾಗಿದೆ ಎಂದು ಅಧಿಕಾರಿಗಳ ವರದಿಗಳಿಂದ ತಿಳಿದು ಬಂತು. ಕೇಷಿ ಇಲಾಖೆಯು ನೆಲಗಡಲೆ ಹಾಗೂ ರಾಗಿ ಬೆಳೆಗಳಲ್ಲಿ ಕಳೆದ 7-8 ವರ್ಷಗಳಲ್ಲಿ ಕಾಣದ ಉತ್ತಮ ಇಳುವರಿ ಕಂಡಿದ್ದು, ರೈತರಲ್ಲಿ ಸಮಾಧಾನ ತಂದಿದೆ ಎಂದು ಕೃಷಿ ಜಂಟಿ ನಿರ್ದೇಶಕ ಶಿವಕುಮಾರ್ ತಿಳಿಸಿದರು. ಪ್ರತಿ ವರ್ಷ ಸರಾಸರಿ 362 ಮಿಮಿ ಮಳೆಯಾಗುವ ವಾಡಿಕೆಯಿದ್ದು, ಈ ಬಾರಿ 476.06 ಮಿಮಿ ಮಳೆಯಾಗಿದ್ದು, ಶೇ. 31.51 ಮಿಮಿ ಮುಂಗಾರು ಹಂಗಾಮಿನಲ್ಲಿ ಹೆಚ್ಚುವರಿ ಮಳೆಯಾಗಿದೆ ಎಂದವರು ಸಭೆಗೆ ಮಾಹಿತಿ ನೀಡಿದರು.
ಹೈನುಗಾರಿಕೆಯಲ್ಲೂ ಕಳೆದ ಸಾಲಿಗಿಂತ ಈ ಬಾರಿ ಮಳೆಯಿಂದಾಗಿ ಉತ್ತಮ ಉತ್ಪಾದನೆ ಕಂಡುಬಂದಿದೆ. ಹಸಿರು ಮೇವು ಕೂಡ ಸಾಕಷ್ಟು ಲಭ್ಯವಿದೆ ಎಂದು ಹಾಲು ಒಕ್ಕೂಟದ ಅಧಿಕಾರಿಗಳು ತಿಳಿಸಿದರು.
ಉತ್ತಮ ಮಳೆಯಿಂದಾಗಿ ಬಹುತೇಕ ಎಲ್ಲ ಕೆರೆಗಳೂ ತುಂಬಿದ್ದು, ಮೀನುಗಾರಿಕೆಗೆ ಉತ್ತಮ ಬೇಡಿಕೆ ಬಂದಿದ್ದು, ಮೀನುಮರಿಗಳನ್ನು ಒದಗಿಸುವಲ್ಲಿ ಕೊರತೆಯಾಘಿದೆ. ಹೆಚ್ಚುವರಿ ಮೀನುಮರಿಗಳನ್ನು ಕೊಲ್ಕತ್ತಾದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದರು. ಕಳೆದ ಸಾಲಿಗಿಂತ ಈ ಬಾರಿ ದುಪ್ಪಟ್ಟು ಉತ್ಪಾದನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಶಿಕ್ಷಣದಲ್ಲಿ ಹಿಂದುಳಿದ 3708 ಮಕ್ಕಳನ್ನು ಗುರುತಿಸಲಾಗಿದ್ದು ಅವರಿಗೆ ನುರಿತ ಶಿಕ್ಷಕರಿಂದ ಭೋಧನೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಪೂರ್ವ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗಿದ್ದು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತಿಳಿಸಿದರು. ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಲಾಗಿದ್ದು. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣಕ್ಕೆ ನೀಡಲು ಮುಖ್ಯವಾಗಿ ಗಣ ತ. ಸಮಾಜ. ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ತಿಳಿಸಿದರು.
ವಸತಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಪೂರ್ವ ಪರೀಕ್ಷೆ ಮೂಲಕ ಆಯ್ಕೆಯಾಗಿರುತ್ತಾರೆ. ಆದ್ದರಿಂದ, ಅವರ ಫಲಿತಂಶ ಅತ್ಯುತ್ತಮವಾಗಿರಬೇಕು. ಆದರೆ, ಈಗಿನ ವಸತಿ ಶಾಲೆಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬರುತ್ತಿದೆಯೆ ಹೊರತು ಡಿಸ್ಟಿಂಕ್‍ಷನ್ ಬರುತ್ತಿಲ್ಲ. ಹಾಗಾಗಿ, ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಹೆಚ್ಚುವರಿ ತರಗತಿಗಳನ್ನು ನಡೆಸಿ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಸಹಾಯಕವಾಗುವಂತೆ ಕ್ರಮ ವಹಿಸಲು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ವಿಕಯ್ ಕುಮಾರ್ ಮಾತನಾಡುತ್ತಾ ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ನೂತನ ಮುಳಬಾಗಿಲು ಹಾಗೂ ತಾಯಲೂರಲ್ಲಿ  ತಾಲ್ಲೂಕು ಆಸ್ಪತ್ರೆಗಲ್ಲಿ ಸ್ವಚ್ಚತೆಯನ್ನು ಕಾಪಾಡಲು ಸೂಕ್ತ ಕ್ರಮವನ್ನು ಕೈಂಗೊಡಿದ್ದೇವೆ ಅಂತ ಹೇಳಿದರು. ಕುರುಡುಮಲೆಯಲ್ಲಿ ಉತ್ತಮವಾಗಿರುವ ಆಸ್ಪತ್ರೆಯನ್ನು ಕಟ್ಟಿದ್ದು ಅದಕ್ಕೆ ಸೂಕ್ತವಾಗಿರುವ ಕಾಂಪೌಡ್ ನಿರ್ಮಾಣ ಮಾಡಬೇಕಾಗಿದೆ ಎಂದ ಅಧ್ಯಕ್ಷರು, ಇತರೆ ತಾಲ್ಲೂಕಿನ ಆಸ್ಪತ್ರೆಗಳನ್ನೂ ಇದೇ ರೀತಿ ಸೇವೆಯನ್ನು ಉತ್ತಮ ಪಡಿಸಲು ಸೂಚಿಸಿದರು. ಇಲ್ಲಿಗೆ ಅಕ್ಕಪಕ್ಕದ ರಾಜ್ಯಗಳಿಂದಲ್ಲೂ ಚಿಕಿತ್ಸೆಗಾಗಿ ರೋಗಿಗಗಳು ಬರುತ್ತಿದ್ದು ಇಲ್ಲಿ ರಾತ್ರಿ ಸಮಯದಲ್ಲೂ ವೈದ್ಯರನ್ನು ನೇಮಿಸಲು ಆದೇಶ ಮಾಡಲಾಗಿದೆ ಎಂದು ಡಾ: ವಿಜಯ್ ಕುಮಾರ್ ತಿಳಿಸಿದರು. 


ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...