ವಿಶೇಷ ಲೇಖನ: ಚೈನಾ ಆ್ಯಸ್ಟರ್ ನ ಬೇಸಾಯ ಕ್ರಮಗಳು

Source: shabbir | By Arshad Koppa | Published on 24th August 2017, 8:29 AM | State News | Guest Editorial | Technology |

ಕೋಲಾರ, ಆಗಸ್ಟ್ 23 :ಆ್ಯಸ್ಟರ್ ಕರ್ನಾಟಕದಲ್ಲಿ ಬಟನ್ಸ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿರುವ ಕಡಿಮೆ ಅವಧಿಯ ಹೂವಿನ ಬೆಳೆ. ಇದು ದೊಡ್ಡ ರೈತರಿಗಲ್ಲದೆ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಲಾಭದಾಯಕವಾಗಿದ್ದು, ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಆ್ಯಸ್ಟರ್‍ನ ಬಿಡಿ ಹೂ ಹಾಗೂ ಕಾಂಡಸಹಿತ ಹೂಗಳು ಬಳಕೆಯಲ್ಲಿವೆ. ನಮ್ಮ ರಾಜ್ಯದಲ್ಲಿ ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬೆಳೆಯಲಾಗುತ್ತಿದೆ.


ಮಣ್ಣು ಮತ್ತು ಹವಾಗುಣ: ಈ ಬೆಳೆಗೆ ಫಲವತ್ತಾದ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತ. ಆ್ಯಸ್ಟರ್ ಬೆಳೆಯ ಬೇಸಾಯವನ್ನು ವರ್ಷವಿಡಿ ಮಾಡಬಹುದಾದರೂ, ಈ ಬೆಳೆಗೆ ತಂಪಾದ ವಾತಾವರಣ (ಚಳಿಗಾಲ) ತುಂಬಾ ಸೂಕ್ತವಾಗಿದ್ದು, ಮೇ-ಜೂನ್‍ನಲ್ಲಿ ನಾಟಿ ಮಾಡಿದ ಬೆಳೆಯಿಂದ ಅತ್ಯುತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.
ತಳಿಗಳು: ರೈತರ ಅನುಕೂಲಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಚ್ಚು ಇಳುವರಿ ನೀಡುವ ಕಾಮಿನಿ, ಪೂಣ ್ಮಾ, ವೈಲೆಟ್‍ಕುಷನ್, ಶಶಾಂಕ್, ಅರ್ಕಾಆಧ್ಯ ಮತ್ತು ಅರ್ಕಾ ಅರ್ಚನ ತಳಿಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಫುಲೆಗಣೇಶ ವೈಟ್, ಫುಲೆಗಣೇಶ ಪಿಂಕ್, ಫುಲೆಗಣೇಶ ಪರ್ಪಲ್, ಫುಲೆಗಣೇಶ ವೈಲೆಟ್ ತಳಿಗಳನ್ನು ಸಹ ಬೆಳೆಯಬಹುದಾಗಿದೆ.
ಸಸ್ಯಾಭಿವೃದ್ಧಿ:- ಒಂದು ಹೆಕ್ಟೇರ್‍ಗೆ 750 ಗ್ರಾಂ ಬೀಜ ಬೇಕಾಗುತ್ತದೆ. ಸಸಿಗಳನ್ನು ಬೆಳೆಸಲು ಏರು ಮಡಗಳನ್ನು ತಯಾರಿಸಬೇಕು. ಒಂದು ಹೆಕ್ಟೇರ್‍ಗೆ ಬೇಕಾಗುವ ಸಸಿಗಳನ್ನು 7.5 ಮೀ, ಉದ್ದ, 1.2ಮೀ ಅಗಲ ಮತ್ತು 30ಸೆಂ.ಮೀ. ಎತ್ತರದ 4 ಏರು ಮಡಿಗಳಲ್ಲಿ ಬೆಳೆಸಬಹುದು. ಏರು ಮಡಿಗಳನ್ನು ಶೇ.0.2 ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. ಬೀಜವನ್ನು ತೆಳುವಾಗಿ  (0.6ಮೀ ಆಳಕ್ಕೆ) ಹಾಕಿದ ನಂತರ, ಸಣ್ಣ ಗಾತ್ರದ ಮರಳು ಅಥವಾ ತೆಂಗಿನ ಒಟ್ಟಿನಿಂದ ಮುಚ್ಚಿ ನೀರನ್ನು ಸಿಂಪಡಿಸಬೇಕು. ಸಸಿಗಳು 4 ರಿಂದ 6 ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.
ಬೇಸಾಯ ಕ್ರಮಗಳು:- ಚೈನಾ ಆ್ಯಸ್ಟರ್ ಹೂವನ್ನು ಬೆಳೆಯಲು ಆಯ್ಕೆ ಮಾಡಿರುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಒಂದು ಹೆಕ್ಟೇರಿಗೆ 20 ಟನ್ ಕೊಟ್ಟಿಗೆಗೊಬ್ಬರ, 9ಕೆ.ಜಿ. ಸಾರಜನಕ, 120ಕೆ.ಜಿ, ರಂಜಕ ಮತ್ತು 60ಕೆ.ಜಿ. ಪೊಟ್ಯಾಷ್ ಸತ್ವವುಳ್ಳ ರಾಸಾಯನಿಕ ಗೊಬ್ಬರವನ್ನು ಮಣ ್ಣಗೆ ಸೇರಿಸಿ ಭುಮಿಯನ್ನು ಹದ ಮಾಡಿಕೊಂಡು 30ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ಒಂದು ತಿಂಗಳ ನಂತರ ಕುಡಿ ಚಿವುಟಿ ಹೆಕ್ಟೇರಿಗೆ 9ಕೆ.ಜಿ. ಸಾರಜನಕವನ್ನು ಮೇಲು ಗೊಬ್ಬರವಾಗಿ ಮಣ ್ಣಗೆ ಸೇರಿಸಬೇಕು. ಮಣ್ಣು ಮತ್ತು ಹವಾಗುಣದ ಅನುಗುಣವಾಗಿ 5 ರಿಂದ 7 ದಿನ ಅಂತರದಲ್ಲಿ ನೀರು ಹಾಯಿಸಬೇಕು. 
ಕೊಯ್ಲು ಮತ್ತು ಇಳುವರಿ:- ನಾಟಿಯಾದ ಮೂರುವರೆ ಅಥವಾ ನಾಲ್ಕು ತಿಂಗಳಲ್ಲಿ ಹೂ ಕೊಯ್ಲಿಗೆ ಬರುತ್ತದೆ. ಒಂದು ಹೆಕ್ಟೇರಿಗೆ 10 ರಿಂದ 12.5 ಟನ್ ಹೂವಿನ ಇಳುವರಿಯನ್ನು ಪಡೆಯಬಹುದು. ಒಂದು ಹೆಕ್ಟೇರಿಗೆ ಸುಮಾರು ರೂ.18000/- ದಿಂದ 20000/- ವರೆಗೆ ಖರ್ಚು ತಗಲಬಹುದು. ಪೂರ್ತಿ ಅರಳಿದ ಹೂಗಳನ್ನು ತೊಟ್ಟು ಸಹಿತ ಅಥವಾ ತೊಟ್ಟು ರಹಿತವಾಗಿ ಕೊಯ್ಲು ಮಾಡಬಹುದು. ಇಡೀ ಸಸ್ಯವನ್ನು ಕಿತ್ತಾಗ ಕೆಳಗಿನ ಹಾಗೂ ಹಾಳಾದ ಎಲೆಗಳನ್ನು ತೆಗೆದು ಸ್ವಚ್ಛ ನೀರಿರುವ ಬಕೇಟ್‍ನಲ್ಲಿ ತಕ್ಷಣವೇ ಇರಿಸಬೇಕು.
ಸಸ್ಯ ಸಂರಕ್ಷಣ ಕ್ರಮಗಳು :- ಹೇನು, ಥ್ರಿಪ್ಸ್, ಎಲೆ ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಸೊರಗು ರೋಗ ಮತ್ತು ಹೂ ಅಂಗಮಾರಿ ರೋಗ (ನಂಜು ರೋಗ) ಇವು ಚೈನಾ ಆ್ಯಸ್ಟರ್‍ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೀಟ ಮತ್ತು ರೋಗಗಳು.
ಹತೋಟಿ ವಿಧಾನ:- ಚೆನ್ನಾಗಿ ನೀರು ಬಸಿದು ಹೋಗುವಂತೆ ಮಾಡಿ ಬೆಳೆಯನ್ನು ಸೊರಗು ರೋಗದಿಂದ ರಕ್ಷಿಸಬೇಕು. ಸೊರಗು ರೋಗದ ನಿಯಂತ್ರಣಕ್ಕಾಗಿ 1 ಗ್ರಾಂ ಕಾರ್ಬೆಂಡೇಜಿಂ ಪ್ರತಿ ಲೀಟರ್ ನೀರಿಗೆ ಬೆರೆಸಿ ತೋಯಿಸಬೇಕು. ಕೀಟಗಳಾದ ಹೇನು, ಥ್ರಿಪ್ಸ್ ಹಾಗೂ ರೋಗಬಾಧೆ (ಎಲೆ ಚುಕ್ಕೆ ರೋಗ) ಕಂಡುಬಂದಾಗ ಬೆಳಗ್ಗೆ 2 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ ಮತ್ತು 2 ಗ್ರಾಂ ಮ್ಯಾಂಕೋಜೆಬ್‍ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೆಕು. ಬೇವಿನ ಬೀಜದ ಕಷಾಯ (ಶೇ.4ರ) ಅಥವಾ 1 ಮಿ.ಲೀ.ಆಕ್ಸಿಡೆಮಿಟಾನ್ ಮಿಥೈಲ್ ಅನ್ನು ಪ್ರತಿ ಲೀಟರ್ ನೀರಿನಲ್ಲೆ ಬೆರೆಸಿ ಸಿಂಪಡಿಸುವುದರಿಂದ ಹೂವು ಮತ್ತು ಕಾಯಿ ಕೊರಕ ಹುಳುಗಳನ್ನು ನಿಯಂತ್ರಿಸಬಹುದು. ಹೂಗಳು ಸಂಪೂರ್ಣವಾಗಿ ಎಲೆಗಳಾಗಿ ಪರಿವರ್ತನೆಯಾಗುವ ಅಂಗಮಾರಿ ರೋಗವು ಬಹಳಷ್ಟು ಆರ್ಥಿಕ ನಷ್ಟವುಂಟು ಮಾಡುತ್ತದೆ. ರೋಗ ಕಾಣ ಇಕೊಂಡ ಗಿಡಗಳನ್ನು ಕಿತ್ತೊಗೆದು ಇತರೆ ಗಿಡಗಳಿಗೆ ಹರಡದಂತೆ ಅಂತರವ್ಯಾಪಿ ಕೀಟನಾಶಕ ಮಾನೊಕ್ರೋಟೋಪಾಸ್ 2ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ರವರನ್ನು ದೂ:7829512236 ಮೂಲಕ ಸಂಪರ್ಕಿಸಬಹುದು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...