ಕೋಲಾರ:ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶೋಕ-ರಾಷ್ಟ್ರನಾಯಕರ ಆದರ್ಶ ಸಾರುವ ಚಿತ್ರಗಳು ಮೂಡಿಬರಲಿ

Source: shabbir | By Arshad Koppa | Published on 19th August 2017, 7:49 AM | State News | Guest Editorial |

ಕೋಲಾರ:- ಮಕ್ಕಳಿಗೆ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ವೀರಯೋಧರು ಹಾಗೂ ರಾಷ್ಟ್ರನಾಯಕರ ಆದರ್ಶ ಸಾರುವ ಚಲನಚಿತ್ರಗಳನ್ನು ತೋರಿಸುವ ಮೂಲಕ ಅವರ ಮನಸ್ಸಿನಲ್ಲಿ ದೇಶಪ್ರೇಮ ತುಂಬಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಸಿ.ಆರ್.ಆಶೋಕ್ ಅಭಿಪ್ರಾಯಪಟ್ಟರು.
ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಚಲನಚಿತ್ರೋತ್ಸವ ಸಮಿತಿ ವತಿಯಿಂದ ನಗರದ ಪ್ರಭಾತ್ ಚಿತ್ರಮಂದಿರದಲ್ಲಿ 2017-18ನೇ ಸಾಲಿನ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸುಶೀಕ್ಷಿತರೇ ಇಂದು ದೇಶದ್ರೋಹ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುತ್ತಿರುವುದು ವಿಷಾದದ ಸಂಗತಿ ಎಂದ ಅವರು, ಈ ಹಿನ್ನಲೆಯಲ್ಲಿ ಇಂದಿನ ಶಿಕ್ಷಣದಲ್ಲಿ ಸಂಸ್ಕಾರ,ದೇಶಪ್ರೇಮದ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕುಟುಂಬ ಸಮೇತ ನೋಡುವ ಚಿತ್ರಗಳ ಕೊರತೆ ಕಾಡುತ್ತಿದೆ, ಕೇವಲ ಮನರಂಜನೆ ಮತ್ತು ಹಣಗಳಿಕೆಯ ಉದ್ದೇಶದಿಂದ ಮಾತ್ರವೇ ಚಿತ್ರ ನಿರ್ಮಿಸುವ ಮನೋಭಾವ ಹೆಚ್ಚುತ್ತಿದೆ ಎಂದರು.
ಟಿವಿ,ಮೊಬೈಲ್ ವ್ಯಾಮೋಹಕ್ಕೆ ಸಿಲುಕಿರುವ ಮಕ್ಕಳನ್ನು ಮಕ್ಕಳ ಧೈರ್ಯ,ಸಾಹಸ ಗಾಥೆಯನ್ನು ಒಳಗೊಂಡ ಹಾಗೂ ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಚರಿತ್ರೆಯನ್ನು ಒಳಗೊಂಡ ಚಿತ್ರಗಳನ್ನು ನೋಡಲು ಪ್ರೇರೇಪಿಸಬೇಕು ಎಂದರು.
ದೇಶಪ್ರೇಮ, ನಮ್ಮ ರಾಷ್ಟ್ರಧ್ವಜ,ಹಿರಿಯರನ್ನು ಗೌರವಿಸುವ ಪ್ರವೃತ್ತಿ ಬಲಗೊಳ್ಳಲು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಉತ್ತಮ ಚಲನಚಿತ್ರಗಳ ಅಗತ್ಯವಿದೆ ಎಂದರು.
ಶಿಕ್ಷಣ ಸಂಯೋಜಕ ಕೆಂಪೇಗೌಡ, ಶಿಕ್ಷಣ ಇಲಾಖೆಯಿಂದ ತಾಲ್ಲೂಕಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಗೆ ಆ.19 ರಿಂದ 24 ರವರೆಗೂ ಆರು ದಿನಗಳ ಕಾಲ ಈ ಚಲನಚಿತ್ರೋತ್ಸವ ನಡೆಸಲಾಗುತ್ತಿದೆ ಎಂದರು.
ನಗರದ ಪ್ರಭಾತ್, ಶಾರದಾ, ಭವಾನಿ, ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಮಕ್ಕಳಿಗಾಗಿ `ಅರಿವು' ಚಿತ್ರಪ್ರದರ್ಶನ ನಡೆಸುತ್ತಿರುವುದಾಗಿ ತಿಳಿಸಿದರು.
ಪ್ರತಿ ನಿತ್ಯ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮಕ್ಕಳು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾತ್ ಚಿತ್ರಮಂದಿರ ಮಾಲೀಕ ಅಶ್ವಥ್, ವ್ಯವಸ್ಥಾಪಕ ರವಿಶಂಕರ್, ನಾರಾಯಣಸ್ವಾಮಿ, ಪೋಷಕರಾದ ತನ್ವೀರ್,  ಪಿಯು ಶಿಕ್ಷಣ ಇಲಾಕೆಯ ಗೋಪಿನಾಥ್, ಮತ್ತಿತರರು ಹಾಜರಿದ್ದರು. 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...