ಕೋಲಾರ: ಹೊನ್ನಮ್ಮನ ಕೆರೆಕೋಡಿ ಕಾಲುವೆಯ ಚೆಕ್ ಡ್ಯಾಂ ನಾಶ - ರೈತಸಂಘದಿಂದ ಪರಿಹಾರಕ್ಕೆ ಮನವಿ

Source: shabbir | By Arshad Koppa | Published on 18th July 2017, 8:21 AM | State News |

ಕೋಲಾರ.ಜು.17: ಹೋಳೂರು ಹೋಬಳಿ ನಾಯಕರಹಳ್ಳಿ ಗ್ರಾಮದ ಹೊನ್ನಮ್ಮನ ಕೆರೆಕೋಡಿ ಕಾಲುವೆಯಲ್ಲಿ ಕೆಲವು ವರ್ಷಗಳಿಂದೆ ಸುಜಲ ಯೋಜನೆಯಡಿ  ನಿರ್ಮಿಸಿದ್ದ ಚೆಕ್‍ಡ್ಯಾಂನ್ನು ಸಂಪೂರ್ಣ ನಾಶ ಮಾಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಆ ಚೆಕ್‍ಡ್ಯಾಂಗೆ ಆಗಿರುವ ಹಣವನ್ನು ಅವರಿಂದ ತುಂಬಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂ ಮನವಿ ನೀಡಲಾಯಿತು.
ನಾಯಕರಹಳ್ಳಿ ಬಳಿ 4ವರ್ಷಗಳಿಂದೆ ಸುಜಲಾಜಲಾಯನ ಯೋಜನೆಯಡಿಯಲ್ಲಿ ನಿರ್ಮಿಸಿದ್ದ, ಸುಭದ್ರವಾಗಿದ್ದ ಚೆಕ್‍ಡ್ಯಾಂನ್ನು 4 ಜುಲೈ 2017 ರಂದು ಗ್ರಾಮಪಂಚಾಯಿತಿ ಸದಸ್ಯರಾದ ಚಿಲಪನಹಳ್ಳಿ ನಾರಾಯಣಸ್ವಾಮಿ ಎಂಬುವರ ಈ ಚೆಕ್‍ಡ್ಯಾಂನ್ನು ಕೆಡವಿ ನಾಶಗೊಳಿಸಿದ್ದಾರೆ.  ಪ್ರಬಾವಿ ರಾಜಕಾರಿಣ  ಹಿಂಬಾಲಕರು ಈ ಜಾಗದಲ್ಲಿ ಭೂ ಸೇನಾ ನಿಗಮದಿಂದ 50ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ಚೆಕ್ ಡ್ಯಾಂ ನಿರ್ಮಿಸಲು ಕ್ರೀಯಾ ಯೋಜನೆ ರೂಪಿಸಿ ಗುತ್ತಿಗೆದಾರರು ಮತ್ತು ಭೂ ಸೇನಾ ನಿಗಮದ ಆಧಿಕಾರಿಗಳು ಈ ಚೆಕ್ ಡ್ಯಾಂನ್ನು ದ್ವಂಸಗೊಳಿಸಿ ಹೊಸ ಚೆಕ್‍ಡ್ಯಾಂ ನಿರ್ಮಿಸಿ ಹಣ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ರಾಜಕಾರಣ ಗಳ ಬೆಂಬಲವಿದೆ ಎಂದು ಆರೋಪಿಸಿದರು.


 ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸ್ಥಳಕ್ಕೆ ಜುಲೈ 15ರಂದು  ಉಪ ವಿಭಾಗಾಧಿಕಾರಿ ಬೇಟಿ ನೀಡಿ ಜಾಗ ಪರೀಶೀಲಿಸಿದ್ದು, ದ್ವಂಸಗೊಂಡಿರುವುದು ಅವರ ಗಮನಕ್ಕೆ ಬಂದಿದೆ. ಚೆಕ್‍ಡ್ಯಾಂನ್ನು ನಾಶ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಆದರೂ ಭೂಸೇನೆ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಾಜಕೀಯ ಪ್ರಭಾವ ಹೊಂದಿರುವುದರಿಂದ ಈ ಯೋಜನೆಯ ಹಿಂದೆ ಭಾರಿ ಹಣಕಾಸಿನ ಅವ್ಯವಹಾರ ಇರುವುದರಿಂದ  ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಜೋರಾಗಿ ನಡೆದಿದೆ.  ಆದ್ದರಿಂದ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ಚೆಕ್‍ಡ್ಯಾಂಗೆ ಖರ್ಚಾಗಿರುವ ಹಣವನ್ನು ಇವರಿಂದ ವಸೂಲಿ ಮಾಡಬೇಕೆಂದು ರೈತ ಸಂಘದಿಂದ ಆಗ್ರಹಿಸಲಾಯಿತು. 
ಈ ಮನವಿ ನೀಡುವಾಗ ಜಿಲ್ಲಾಧ್ಯಕ್ಷೆ. ಎ.ನಳಿನಿ, ಉಮಾಗೌಡ, ಮರಗಲ್ ಶ್ರೀನಿವಾಸ್, ರಂಜೀತ್‍ಕುಮಾರ್, ಪಾರುಕ್‍ಪಾಷಾ, ಆನಂದ್‍ರೆಡ್ಡಿ, ಈಕಂಬಳ್ಳಿ ಮಂಜು, ಸಾಗರ್, ಹೊಸಹಳ್ಳಿ ವೆಂಕಟೇಶ್, ಹರ್ಷ, ಮಾವೆ ಪ್ರಕಾಶ್, ಕೆಂಬೋಡಿ ಕೃಷ್ಣೇಗೌಡ, ಹೊಸಹಳ್ಳಿ ಚಂದ್ರಪ್ಪ, ಕ್ಯಾಸಾಂಬಳ್ಳಿ ಪ್ರತಾಪ್, ಬೇತಮಂಗಲ ಮಂಜು ಮುಂತಾದವರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...