ಕೋಲಾರ:ಪಿಯು ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಭಾಷಾಮಾಧ್ಯಮ ಕಡ್ಡಾಯ ವಿರೋಧಿಸಿದ ಎಬಿವಿಪಿ

Source: shabbir | By Arshad Koppa | Published on 19th September 2017, 8:24 AM | State News |

ಕೋಲಾರ,ಸೆ.18: ಪಿಯು ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಭಾಷಾಮಾಧ್ಯಮವನ್ನು ಕಡ್ಡಾಯ ಮಾಡುತಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಮದ ಅಪರ ಜಿಲ್ಲಾಧಿಕಾರಿಗಳ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
    
ಪದವಿ ಪೂರ್ವ ಕಾಲೇಜು ಮಂಡಳಿ ವಿಧ್ಯಾರ್ಥಿಗಳಿಗೆ ಅಂಕ ಪಟ್ಟಿಯಲ್ಲಿ ಭಾಷಮಾಧ್ಯಮ ಮುದ್ರಿಸುವ ಸಲುವಾಗಿ ವಿಧ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುವಂತ ನಿರ್ಧಾರವನ್ನು ಕೈಗೊಂಡಿದೆ. ಆದೇಶಸಂಖ್ಯೆ ಶೈ. ಶಾ-4/ಮಾಧ್ಯಮ-2/2017-18 ಆದೇಶದಂತೆ ಪಿಯು ಕಾಲೇಜಿಗೆ ನೊಂದಣಿ ಬಯಸುವ ವಿಧ್ಯಾರ್ಥಿ ತಾವು ಯಾವ ಭಾಷಮಾಧ್ಯಮದಲ್ಲಿ ವ್ಯಾಸಂಗ ನಡೆಸಬೇಕೆಂಬುದು ಮೊದಲೆ ನೊಂದಾಹಿಸಬೇಕು ಪರೀಕ್ಷ ಸಂಧರ್ಭದಲ್ಲಿ ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕೆಂಬುದು ನಿರ್ಧರಿಸಬೇಕಾಗಿದೆ. ಇದು ವಿಧ್ಯಾರ್ಥಿ ವಿರೋಧಿ ನೀತಿಯಾಗಿದ್ದು ಅತಿಹೆಚ್ಚು ವಾಣಿಜ್ಯ ವಿಭಾಗದ ವಿಧ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಾರೆ ಏಕೆಂದರೆ  ವಾಣಿಜ್ಯ ವಿಭಾಗದ ವಿಧ್ಯಾರ್ಥಿಗಳು ತಮ್ಮ ಎಲ್ಲಾ ವಿಷಯಗಳುನ್ನು ಕನ್ನಡ ಅಥವಾ ಆಂಗ್ಲದಲ್ಲಿ ಭಾಷೆಯಲ್ಲಿ ಬರೆದರು ಲೆಕ್ಕಶಾಸ್ತ್ರ ಮಾತ್ರ ಆಂಗ್ಲದಲ್ಲೆ ಬರೆಯಬೇಕಾಗಿರುತ್ತದೆ. ಆದ್ದರಿಂದ ವಿಧ್ಯಾರ್ಥಿಗಳು ಮಾನಸಿಕ ಕಿರುಕುಳ ಅನುಭವಿಸುತ್ತಾರೆ.
    
ಬಹುತೇಕ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸಾವಿರಾರು ಉಪನ್ಯಾಸಕರ ಕೊರತೆ ಇದ್ದು ಪಲಿತಾಂಶವು ಕಡಿಮೆ ಬರುತ್ತಿದ್ದು ಕಾಲೇಜು ಪ್ರಾರಂಭ ವಾಗುವ ಮೊದಲೇ ವಿಧ್ಯಾರ್ಥಿಗಳು ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗಿದ್ದು ಸರ್ಕಾರಿ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಕೇವಲ ಕನ್ನಡದಲ್ಲಿ ಪಾಠ ನಡೆಯುತ್ತಿದು ಆಂಗ್ಲದಲ್ಲಿ SSLC ವರೆಗೂ ವ್ಯಾಸಂಗ ನಡೆಸಿದವರಿಗೆ ತೊದರೆಯಾಗುತ್ತದೆ ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕು ಇಲ್ಲವಾದರೇ ಉಗ್ರ ಹೋರಾಟ ನಡೆಸುವುದಾಗಿ ಹೆಚ್ಚರಿಕೆನೀಡುತ್ತೇವೆ.


    ನಿಯೋಗದಲ್ಲಿ ಎಬಿವಿಪಿ ಕೋಲಾರ ತಾಲೂಕು ಸಂಚಾಲಕ್ ಕೆ.ಹೆಚ್. ನವೀನ್,  ಅರುಣ್, ಕೀರ್ತಿ, ಆರ್.ಅರುಣ್, ನಾಗೇಶ್ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...