ಕೋಲಾರ: ಡಾ.ಹೆಚ್.ಸಿ.ಮಂಜುನಾಥ್/ಎನ್.ಸೌಮ್ಯ ರವರ ಲೇಖನಕ್ಕೆ ಬೆಸ್ಟ್ ರೀಸರ್ಚ್ ಪೇಪರ್ ಅವಾರ್ಡ್ ಗೌರವ 

Source: shabbir | By Arshad Koppa | Published on 24th March 2017, 7:39 PM | State News |

ಕೋಲಾರ:- ಬಾಂಬೆಯ ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ `ನ್ಯೂಕ್ಲಿಯರ್ ಅಂಡ್ ರೇಡಿಯೋ ಕೆಮಿಸ್ಟ್ರಿ' ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಹೆಚ್.ಸಿ.ಮಂಜುನಾಥ್ ಮತ್ತು ಎನ್.ಸೌಮ್ಯ ರವರು ಮಂಡಿಸಿದ್ದ ಸಂಶೋಧನಾ ಲೇಖನಕ್ಕೆ ಬೆಸ್ಟ್ ರೀಸರ್ಚ್ ಪೇಪರ್ ಅವಾರ್ಡ್ ಲಭಿಸಿದೆ.

ಇಂಡಿಯನ್ ಅಸೋಸಿಯೇಷನ್ ಆಫ್ ನ್ಯೂಕ್ಲಿಯರ್ ಕೆಮಿಸ್ಟ್ ಅಲೈಡ್ ಸೈನ್ಸನ್ಸ್ ಹಾಗೂ ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್‍ಗಳ ಸಂಯುಕ್ತಾಶ್ರಯದಲ್ಲಿ ಒರಿಸ್ಸಾದ ಭುವನೇಶ್ವರದ ಕೆಐಟಿ ವಿವಿಯಲ್ಲಿ ಕಳೆದ ಮಂಡಿಸಲಾಗಿದ್ದ ಅವರ ಸಂಶೋಧನಾ ಪ್ರಬಂಧಕ್ಕೆ ಈ ಗೌರವ ದೊರೆತಿದೆ.
ಅಣುಭೌತಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗೆ ಸಂಬಂಧಿಸಿದ ಈ ಲೇಖನವನ್ನು  ಡಾ.ಹೆಚ್.ಸಿ.ಮಂಜುನಾಥ್ ಮತ್ತು ಎನ್.ಸೌಮ್ಯ ಜಂಟಿಯಾಗಿ ಮಂಡಿಸಿದ್ದರು. ಬಾಂಬೆಯ ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್‍ನ ವಿಜ್ಞಾನಿಗಳ ಸಮಿತಿ ಈ ಲೇಖನಗಳ ಆಯ್ಕೆ ನಡೆಸಿ ಈ ಆಯ್ಕೆ ಪ್ರಕಟಿಸಿದೆ. 
ಈಗಾಗಲೇ ಡಾ.ಹೆಚ್.ಸಿ.ಮಂಜುನಾಥ್ ಅಂತರರಾಷ್ಟ್ರೀಯ ಜರ್ನಲ್‍ಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.
ಬೆಸ್ಟ್ ರೀಸರ್ಚ್ ಪೇಪರ್ ಅವಾರ್ಡ್ ಗೌರವಕ್ಕೆ ಪಾತ್ರರಾಗಿರುವ ಡಾ.ಹೆಚ್.ಸಿ.ಮಂಜುನಾಥ್ ಹಾಗೂ ಎನ್.ಸೌಮ್ಯ ಅವರಿಗೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಜಯರಾಮರೆಡ್ಡಿ, ಪ್ರಾಧ್ಯಾಪಕರಾದ ಸೀನಾನಾಯಕ್, ಎಲ್.ಸೀನಪ್ಪ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ. 

ಎನ್.ಸೌಮ್ಯ. 
 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...