ಕೋಲಾರ:ರಾಜ್ಯದಲ್ಲೇ ಮೊದಲ ಬಾರಿಗೆ ಬಿಇಒ ಕಚೇರಿಯಲ್ಲಿ ಸಿಸಿ ಕ್ಯಾಮರಾ

Source: shabbir | By Arshad Koppa | Published on 19th August 2017, 7:53 AM | State News | Guest Editorial |

ತಾಲ್ಲೂಕು ಶಿಕ್ಷಣ ಇಲಾಖೆ ಸುಧಾರಣೆಗೆ ರಘುನಾಥರೆಡ್ಡಿ ದಿಟ್ಟಹೆಜ್ಜೆ

ಕೋಲಾರ:- ತರಗತಿ ಬಿಟ್ಟು ಶಿಕ್ಷಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಂಕಲ್ಪ ತೊಟ್ಟಿರುವ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ತಮ್ಮ ಕಚೇರಿ ಹಾಗೂ ಆವರಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಿಸಿ ಟಿವಿ ಅಳವಡಿಸುವ ಮೂಲಕ ಇಲಾಖೆಯ ಸುಧಾರಣೆಗೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದ ರಘುನಾಥರೆಡ್ಡಿ ಅವರು, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಮಾಡಿದ ಮೊದಲ ಕೆಲಸ ತಮ್ಮ ಕಚೇರಿ, ಸಿಬ್ಬಂದಿ ಇರುವ ಕೊಠಡಿ, ಕಚೇರಿ ಮುಂದಿನ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದು. 
ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲೂ ಅಳವಡಿಕೆಯಾಗದ ಸಿಸಿ ಕ್ಯಾಮರಾ ಬಿಇಒ ಕಚೇರಿಯಲ್ಲಿ ಅಳವಡಿಸಿದ್ದು, ಇದು ರಾಜ್ಯದ 176 ತಾಲ್ಲೂಕುಗಳಲ್ಲಿ ಮೊದಲನೆಯದು ಎನ್ನಲಾಗಿದೆ.  
ಅನೇಕ ಶಿಕ್ಷಕರು, ಕೆಲವರು ಸಂಘಟನೆ ಹೆಸರು ಹೇಳಿಕೊಂಡು, ಕಚೇರಿ ಕೆಲಸಕ್ಕೆಂದು ತರಗತಿ ವೇಳೆಯಲ್ಲಿ ಬಿಇಒ ಕಚೇರಿ ಆವರಣದಲ್ಲಿ ಮೊಕ್ಕಾಂ ಹೂಡುತ್ತಿದ್ದುದು ಸಾಮಾನ್ಯವಾಗಿತ್ತು.
ಇದೆಲ್ಲವನ್ನು ಗಮನಿಸಿದ ಬಿಇಒ ಅವರು, ಶಿಕ್ಷಕರು ಕಚೇರಿಯತ್ತ ಬರುವುದರಿಂದ ಮಕ್ಕಳ ಕಲಿಕೆಯಲ್ಲಿ ಆಗುತ್ತಿದ್ದ ಅನ್ಯಾಯ ತಪ್ಪಿಸಲು ದೃಢ ಸಂಕಲ್ಪ ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ತಾಲ್ಲೂಕು ಬಿಇಒ ಕಚೇರಿ ಹಾಗೂ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. 
ಇದರಿಂದ ಬಿಇಒ ಕಚೇರಿಯತ್ತ ವಿನಾಕಾರಣ ತರಗತಿ ವೇಳೆಯಲ್ಲಿ ಬರುತ್ತಿದ್ದ ಶಿಕ್ಷಕರ ಅಲೆದಾಟ ತಪ್ಪಿದೆ ಎನ್ನುವ ಅವರು, ಶಿಕ್ಷಕರ ಸಮಸ್ಯೆ ಇದ್ದರೆ ತರಗತಿ ಮುಗಿದ ನಂತರ ಬರಲಿ ಎನ್ನುತ್ತಾರೆ.
ಶಿಕ್ಷಕರ ವೇತನ ವಿಳಂಬಕ್ಕೆ ಆಸ್ಪದ ನೀಡದಂತೆ ಈಗಾಗಲೇ ಇಲಾಖೆಯ ಸಿಬ್ಬಂದಿಗೆ ಕಟ್ಟಪ್ಪಣೆ ನೀಡಿರುವ ಅವರು, ಸಿಬ್ಬಂದಿಯ ಕಾರ್ಯಚಟುವಟಿಕೆಗೂ ಚುರುಕು ಮುಟ್ಟಿಸಿದ್ದಾರೆ. 
ಅಪಾರ ಅನುಭವ
ಹೊಂದಿದ ಅಧಿಕಾರಿ
ಡಯಟ್ ಉಪನ್ಯಾಸಕರಾಗಿ, ಶಿಡ್ಲಘಟ್ಟ,ಚಿಂತಾಮಣಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಅನುಭವ ಹೊಂದಿರುವ ರಘುನಾಥರೆಡ್ಡಿ, ಜಿಡ್ಡುಗಟ್ಟಿದ್ದ ಕೋಲಾರ ತಾಲ್ಲೂಕು ಬಿಇಒ ಕಚೇರಿ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಕಚೇರಿಗೆ ಬಾರದೇ ಜನರ ಕೈಗೆ ಸಿಗದೇ ಹಲವು ಬಿಇಒಗಳು ಇಲ್ಲಿ ಕೆಲಸ ಮಾಡಿ ಹೋಗಿದ್ದಾರೆ, ಸದಾ ಖಾಸಗಿ ಶಾಲೆಗಳು,ಬಿಆರ್‍ಸಿಯಲ್ಲೇ ಕಾಲ ನೂಕುತ್ತಾ, ಸಂಜೆ 6 ಗಂಟೆ ನಂತರ ಕಚೇರಿಯತ್ತ ಬರುತ್ತಿದ್ದ ಬಿಇಒಗಳು ಇಲ್ಲಿ ಕೆಲಸ ಮಾಡಿ ಹೋಗಿರುವ ಇತಿಹಾಸವೂ ಇದೆ. 
ಆದರೆ ರಘುನಾಥರೆಡ್ಡಿಯವರು ಎಲ್ಲರ ಹಾಗಲ್ಲ, ಬೆಳಗ್ಗೆ 10 ಗಂಟೆಗೆ ಸಿಬ್ಬಂದಿಗೆ ಮುನ್ನವೇ ಕಚೇರಿಗೆ ಹಾಜರಾಗಿ ಹಾಜರಾತಿ ವಹಿ ಗಮನಿಸಿ, ಬಾಕಿ ಇರುವ ಕಡತಗಳ ವಿಲೇವಾರಿ ನಂತರವಷ್ಟೇ ಶಾಲೆಗಳತ್ತ ಸಾಗಿ ಅಲ್ಲಿನ ಚಟುವಟಿಕೆ ಗಮನಿಸುತ್ತಿದ್ದಾರೆ.
ಶಾಲೆಗಳಿಗೂ ದಿಢೀರ್
ದಾಳಿ ನಡೆಸುವ ಇಂಗಿತ
ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ತಾಲ್ಲೂಕಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿರುವ ಅವರು, ಶಿಕ್ಷಕರು ತರಗತಿಗೆ ಸರಿಯಾಗಿ ಬರುವ ಕುರಿತು ದಿಢೀರ್ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಬರುವ ಮಕ್ಕಳ ಋಣದಲ್ಲಿ ನಾವಿದ್ದೇವೆ, ಅವರಿಂದಲೇ ಇಲಾಖೆ ಇದೆ ಎಂಬುದನ್ನು ಶಿಕ್ಷಕರು,ಸಿಬ್ಬಂದಿ ಅರಿಯಬೇಕಾಗಿದೆ, ಆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಅಗತ್ಯವಾಗಿದೆ, ಎಸ್ಸೆಸ್ಸೆಲ್ಸಿಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆನ್ನುವುದು ನನ್ನ ಅನಿಸಿಕೆಯಾಗಿದೆ ಎನ್ನುತ್ತಾರೆ. 
ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಲು ಶಿಕ್ಷಕರ ಪರಿಶ್ರಮ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪರಿಶ್ರಮ ಶಿಕ್ಷಕರಿಂದಾಗಬೇಕು ಎನ್ನುವ ಅವರು, ಸಮಾನ ಶಿಕ್ಷಣಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳನ್ನು ಉಳಿಸುವ ಹೊಣೆಗಾರಿಕೆ ಇಲಾಖೆ ಮತ್ತು ಶಿಕ್ಷಕರ ಮೇಲಿದೆ ಎನ್ನುತ್ತಾರೆ.
ಬಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ, ಇಲಾಖೆ ನೀಡುವ ವೇತನ ಪಡೆಯುತ್ತಿದ್ದೇನೆ, ಈ ಋಣ ತೀರಿಸಲು ನನ್ನಕೈಲಾದಷ್ಟು ಶಕ್ತಿ ಮೀರಿ ಇಲಾಖೆಯ ಕೆಲಸ ಮಾಡುತ್ತೇನೆ ಎನ್ನುವ ಅವರು, ಶೈಕ್ಷಣಿಕ ಪ್ರಗತಿಗೆ ತಾಲ್ಲೂಕಿನ ಶಿಕ್ಷಕರ ಸಹಕಾರ ಕೋರಿದರು.

 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...