ಶ್ರೀನಿವಾಸಪುರ:ಟೈಲರಿಂಗ್ ಮತ್ತು ಬ್ಯೂಟಿಷಿಯನ್‍ ತರಬೇತಿ ಉದ್ಘಾಟನೆ

Source: shabbir | By Arshad Koppa | Published on 2nd August 2017, 8:27 AM | State News | Guest Editorial |

ಶ್ರೀನಿವಾಸಪುರ:ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗೌನಿಪಲ್ಲಿಗ್ರಾಮದಲ್ಲಿ ದಿನಾಂಕ: 01.08.2017 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯೂಟಿಷಿಯನ್ ಮತ್ತುಟೈಲರಿಂಗ್‍ತರಬೇತಿಯಉದ್ಘಾಟನಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಗೌನಿಪಲ್ಲಿಗ್ರಾಮ ಪಂಚಾಯಿತಿಅಧ್ಯಕ್ಷರಾದ ಶ್ರೀಮತಿ ಸವಿತಾರವರು ಉದ್ಘಾಟಿಸಿದರು.
ತಾಲೂಕಿನಯೋಜನಾಧಿಕಾರಿಯಾದ ಶ್ರೀಯುತ ಸುರೇಶ್ ಶೆಟ್ಟಿರವರು ಟೈಲರಿಂಗ್‍ತರಬೇತಿ 3 ತಿಂಗಳ ಅವಧಿ ಹಾಗೂ ಬ್ಯೂಟಿಷಿಯನ್‍ತರಬೇತಿ 2 ತಿಂಗಳ ಅವಧಿಯ ತರಬೇತಿಯಾಗಿರುತ್ತದೆ. ಟೈಲರಿಂಗ್‍ತರಬೇತಿಯಲ್ಲಿ 40 ಸದಸ್ಯರ 2 ತಂಡ ಹಾಗೂ ಬ್ಯೂಟಿಷಿಯನ್‍ತರಬೇತಿಯಲ್ಲಿ 18 ಜನರ 2 ತಂಡಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿಯಅವಧಿಯಲ್ಲಿ ಸಮಯ ಪಾಲನೆ ಮತ್ತುಆಸಕ್ತಿಯಿಂದ ಸಕ್ರಿಯವಾಗಿ ಭಾಗವಹಿಸುವುದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಲ್ಲಿ ಬೇರೆ ಬೇರೆರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳಲು ಅವಕಾಶಗಳಿದ್ದು, ಆಸಕ್ತರು ಭಾಗವಹಿಸಬಹುದು ಮತ್ತುಆರ್ಥಿಕವಾಗಿ ಮುಂದುವರೆಯಲುಅವಕಾಶವಿದೆ ಹಾಗೂ ಯೋಜನೆಯಇತರ ಕಾರ್ಯಕ್ರಮಗಳ ಚಿತ್ರಣವನ್ನು ಸದಸ್ಯರಿಗೆ ತಿಳಿಯಪಡಿಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಕರಾದ ನಾಗರಾಜ್, ಒಕ್ಕೂಟದಅಧ್ಯಕ್ಷರಾದ ಪ್ರಮೀಳಮ್ಮ, ಟೈಲರಿಂಗ್ ಶಿಕ್ಷಕರಾದ ಉಮಾ, ಭಾಗ್ಯಮ್ಮ, ಬ್ಯೂಟಿಷಿಯನ್ ಶಿಕ್ಷಕಿ ಮಂಜುಳ, ಸೇವಾಪ್ರತಿನಿದಿಗಳಾದ ಮಹೇಶ್ವರಿ ಮತ್ತು ಶಿಲ್ಪ ಹಾಗೂ ಜ್ಞಾನ ವಿಕಾಸದ ಸಮನ್ವಯಾಧಿಕಾರಿಯಾದ ಶ್ರೀಮತಿ ಶಾಲಿನಿ ಶೆಟ್ಟಿರವರು ಉಪಸ್ಥಿತರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...