ಕೋಲಾರ:ಜಿಲ್ಲಾ ಭಾರತ ಸೇವಾದಳ ಕಛೇರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ

Source: shabbir | By Arshad Koppa | Published on 30th April 2017, 2:12 AM | State News |

ಕೋಲಾರ ಏ. 29 : ಬಸವಣ್ಣ ವಚನಗಳ ಭಾಷಾಂತರ ಕೇವಲ ದೇಶಕ್ಕೆ ಸೀಮಿತವಾಗಿಲ್ಲ  ಇದು ಇಡೀ ವಿಶ್ವಕ್ಕೆ ಸಮರ್ಪಣೆಯಾಗಿದೆ. ಬಸವಣ್ಣನವರು ಕೇವಲ ತತ್ವಜ್ಞಾನಿ ಮಾತ್ರ ಆಗಿರಲಿಲ್ಲ. ಸಮಾಜ ಸುಧಾರಕರಾಗಿದ್ದರು. ಅಂತರ್ ಜಾತಿ ವಿವಾಹದ ಮೂಲಕ ಕ್ರಾಂತಿ ಆರಂಭಿಸಿದರು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮುದುವಾಡಿ ಮಂಜುನಾಥ್ ತಿಳಿಸಿದರು.
    
ನಗರದ ಜಿಲ್ಲಾ ಭಾರತ ಸೇವಾದಳ ಕಛೇರಿಯಲ್ಲಿಂದು ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 
ಬಸವಣ್ಣನವರಿಗೆ ಜಾತಿ ನಿರ್ಮೂಲನೆಯೇ ಶ್ರೇಷ್ಠಕಾರ್ಯವಾಗಿತ್ತು. ಈಗ ನಾವು ಭಾರತವೆಂಬ ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಳಿಗೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದೇವೆ. ಅಷ್ಟೇ ಅಲ್ಲ ಜಾತಿಗೊಂದು ಮಠ, ಪೀಠ ಕಟ್ಟುತ್ತಿದ್ದೇವೆ. ಬಸವಣ್ಣವನರು ಅನುಭವ ಮಂಟಪ ಕಟ್ಟಿದರೆ ಹೊರತು ಜಾತಿಗೊಂದು ಮಠ, ಪೀಠಗಳನ್ನು ಕಟ್ಟಲಿಲ್ಲ. ಈಗಾಗಿ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ ಎಂತಹ ಬಡವನಾದರೂ ಸರಿಯೇ ಕಾಯಕ ಮಾಡಿ ಹೆಮ್ಮೆಯಿಂದ ಬದುಕು ಸಾಗಿಸಬೇಕೆಂಬುದು ಬಸವಣ್ಣವರ ಕಟ್ಟಪ್ಪಣೆಯಾಗಿತ್ತು. ಬಸವಣ್ಣನವರು ಲೋಕದ ದೋಶಗಳನ್ನು ಕಂಡು ಮರುಗಿದ್ದು ಮಾತ್ರವಲ್ಲ ಅವುಗಳಿಗೆ ಸೂಕ್ತ ಪರಿಹಾರವನ್ನು ಹುಡುಕಿದರು. ಧರ್ಮ ದೇವರುಗಳಿಗೆ ಹೊಸ ವ್ಯಾಖ್ಯಾನ ನೀಡಿದರು. ಭಯವೇ ಧರ್ಮ ಬಸವಣ್ಣವರು ಹೇಳಿದ್ದು ದಯವೇ ಧರ್ಮದ ಮೂಲ ಎಂದು ಹೇಳಿದ್ದು ಸಮಾಜದಲ್ಲಿ ಬಸವ ತತ್ವದಂತೆ ಬಾಳುವ ಸಂಕಲ್ಪ ಮಾಡಿದರೆ ವ್ಯಕ್ತಿ ಕಲ್ಯಾಣ ಆಗುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಮಾತನಾಡಿ ಬಸವ ಜಯಂತಿಯ ಆಚರಣೆ ಮಾಡುವುದು ಎಂದರೆ ಕೇವಲ ಬಸವಣ್ಣವರ ಭಾವಚಿತ್ರ ಮೆರವಣ ಗೆ ಮಾಡುವುದಲ್ಲ. ಅವರ ವಿಚಾರಗಳ ಮೆರವಣ ಗೆ ಆಗಬೇಕು. ಆ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆ ಕಂದರಾಗಿ ಅವತರಿಸಿ ಲೋಕಕ್ಕೆ ಹೊಸ ಧರ್ಮವನ್ನು ಕೊಟ್ಟ ಮಹಾನ್ ವ್ಯಕ್ತಿಯಾಗಿದ್ದರು. 5 ಮತ್ತು 100 ರೂಪಾಯಿ ನಾಣ್ಯದ ಮೇಲೆ ಅವರ ಚಿತ್ರವನ್ನು ಮುದ್ರಿಸಲ್ಪಟ್ಟ ಪ್ರಥಮ ಕನ್ನಡಿಗರು ಎಂಬ ಗೌರವಕ್ಕೆ ಪಾತ್ರರಾದಾದರು ಎಂದು ಬಣ್ಣಿಸಿದರು 

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಈ ಸಂದರ್ಭದಲ್ಲಿ ಜಿಲ್ಲಾ ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸನ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್, ವಾಸವಿ ಸಮಿತಿಯ ಅಧ್ಯಕ್ಷ ವಿ.ಪಿ. ಸೋಮಶೇಖರ್, ಕಾರ್ಯದರ್ಶಿ ಓಂ ಪ್ರಕಾಶ್, ಮನೋಹರ್, ಚಾಂದ್‍ಪಾಷ, ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಮತ್ತಿರರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...