ಕೋಲಾರ:ಜಯಕರ್ನಾಟಕ ವತಿಯಿಂದ ಕಾಯಕ ಯೋಗಿ ಬಸವಣ್ಣನವರ 883ನೇ ಜಯಂತಿ ಆಚರಣೆ

Source: shabbir | By Arshad Koppa | Published on 30th April 2017, 2:06 AM | State News |

ಕೋಲಾರ,ಏ.29: ಕೋಲಾರ ಜಿಲ್ಲಾ ಜಯಕರ್ನಾಟಕ ವತಿಯಿಂದ ಕಾಯಕ ಯೋಗಿ ಬಸವಣ್ಣನವರ 883ನೇ ಜಯಂತಿಯನ್ನು ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
    ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕøತ ಹಾಗೂ ಕೋಲಾರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿರುವ ಮೆಹಬೂಬ್ ಪಾಷ ರವರನ್ನು ಸನ್ಮಾನಿಸಲಾಯಿತು.
    ವಾಗ್ಮಿ ಹಾಗೂ ಕುಮಾರವ್ಯಾಸ ಪ್ರಶಸ್ತಿ ವಿಜೇತ ಎನ್.ಆರ್. ಜ್ಞಾನಮೂರ್ತಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಕಾಯಕವೇ ಕೈಲಾಸ ಹಾಗೂ ಬನಸವಣ್ಣನವರು ಹೇಳಿದಂತೆ ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡೆಬೇಡ, ಎನ್ನ ಬಣ್ಣಿಸಬೇಡ ಎಂಬ ತತ್ವಗಳನ್ನು ಸಾರಿದವರು ಎಂದರು.
    ಮೆಹಬೂಬ್ ಪಾಷ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದಂತಹ ಮಹಾನ್ ನಾಯಕರು ಅವರ ತತ್ವಗಳು, ವಿಚಾರವನ್ನು, ಸಾಮಾಜಿಕ ವರ್ಗಕ್ಕೆ ವಚನಗಳ ಮೂಲಕ ಮಾನವ ಕುಲಕ್ಕೆ ಸಂದೇಶವನ್ನು ನೀಡಿರುವಂತಹ ಮಹಾನುಭಾವರು. ಭಾರತ ದೇಶದಲ್ಲಿ ನೆಲೆಸಿರುವಂತಹ ವಿವಿಧ ಧರ್ಮ, ಭಾಷೆಗಳ ಬಗ್ಗೆ ತಮ್ಮ ಅನುಭವಗಳ ಮೂಲಕ ಅನುಭವಿಸಿ ನಾವೆಲ್ಲರೂ ಕೂಡ ಒಂದೇ ಎಂಬ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿ ಎಂದರು. 
    ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಮಾತನಾಡುತ್ತಾ ನಾವೆಲ್ಲಾ ಒಂದೇ ಭಾರತಾಂಭೆಯ ಹಾಗೂ ಕರ್ನಾಟಕ ತಾಯಿಯ ಮಕ್ಕಳು. ಯಾರೇ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಲಿ ಅವರನ್ನು ಪ್ರತಿ ವರ್ಷ ಸನ್ಮಾನಿಸುತ್ತಾ ಬರುತ್ತಿದ್ದೇವೆ. ಜಯ ಕರ್ನಾಟಕ ಸಂಘಟನೆಯು ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿಕೊಂಡು ಬಂದಿದ್ದು ಇದರ ಜೊತೆಗೆ ಕರ್ನಾಟಕದ ನೆಲೆ, ಜಲ, ನಾಡು, ನುಡಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ನಮ್ಮ ಕನ್ನಡ ನಾಡು ನುಡಿ ಜನಕ್ಕಾಗಿ ದುಡಿದಿರುವಂತಹ ಎಲ್ಲಾ ಮಹಾನುಭಾವರ ಜಯಂತಿಗಳನ್ನು ಪ್ರತಿ ವರ್ಷವೂ ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದರು.


    ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್.ಮಂಜುನಾಥ್, ಉಪಾಧ್ಯಕ್ಷರುಗಳಾದ ಸಿ.ಆರ್.ಪಿ.ವೆಂಕಟೇಶ್, ಕೀಲುಕೋಟೆ ಆಂಜಿನಪ್ಪ, ಸಂಚಾಲಕ ಪಿ.ವಿಠೋಭ, ಮುಂಖಡರುಗಳಾದ ಪಿ.ನಾರಾಯಣಪ್ಪ, ಮುರಳಿಮೋಹನ್, ವೇಮಗಲ್ ಪ್ರಸಾದ್, ನಾದಸ್ವರ ಶ್ರೀಮಂಜುನಾಥ್, ಸವಿತಾ ಸಮಾಜದ ಸುಬ್ರಮಣಿ, ಅಮ್ಮೇರಹಳ್ಳಿ ಮುನಿರಾಜು, ಮಾಲೂರು ನಾಗೇಶ್, ಹರೀಶ್, ಯಶ್ವಂತ್, ಪುನೀತ್ ಕುಮಾರ್, ಸಂಜಯ್ ಇನ್ನಿತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...