ಕೋಲಾರ: ಆಂತರಿಕ ಅಸ್ಪರ್ಶ್ಯತೆ ಹೋಗಿಲ್ಲ. ಅದು ನಶಿಸಬೇಕಾದರೆ ಮಾನಸಿಕ ಪರಿವರ್ತನೆ ಅನಿವಾರ್ಯ-ಸೂಲೂರು ಅಂಜಿನಪ್ಪ

Source: shabbir | By Arshad Koppa | Published on 24th March 2017, 7:30 PM | State News |

ಕೋಲಾರ.ಮಾ,24 :ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ, ವೇಮಗಲ್ ಗ್ರಾಮದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕಛೇರಿ, ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಮತ್ತು ಪಾರಮಿತ ಅಧ್ಯಾಯನ ಕೇಂದ್ರದ ಸಂಯುಕ್ತಾಶ್ರಯಲ್ಲಿ 2016-2017 ಸಾಲಿನ ಪರಿಶಿಷ್ಟ ಜಾತಿ, ಪಂಗಡ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪರ್ಶ್ಯತಾ ನಿವಾರಣೆಯ ಬಗ್ಗೆ ಕಾರ್ಯಗಾರ, ವಿಚಾರ ಸಂಕೀರಣ, ಮತ್ತು ಬೀದಿ ನಾಟಕ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಆಂಜಿನಪ್ಪ ಉದ್ಘಾಟಿಸಿ ಮಾತ್ನಾಡಿ ಸಮಾಜದಲ್ಲಿ ಬಾಹ್ಯ ಅಸ್ಪರ್ಶ್ಯತೆ ಕಾನೂನಿನ ಭಯದಿಂದ ಕಾಣದಂತಾಗಿದ್ದರೂ, ಆಂತರಿಕ ಅಸ್ಪರ್ಶ್ಯತೆ  ಹೋಗಿಲ್ಲ. ಅದು ನಶಿಸಬೇಕಾದರೆ ಮಾನಸಿಕ ಪರಿವರ್ತನೆ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ..
ಪರಿಶಿಷ್ಟ ಜಾತಿ, ಪಂಗಡ ಜನರ ಮೇಲಿನ ದೌರ್ಜನ್ಯ, ಪುನರ್ವಸತಿ, ಸರ್ಕಾರಿ ನೌಕರಿ, ಭೂಮಿ ಮಂಜುರಾತಿ, ನೊಂದವರ ಪರವಾಗಿ ನ್ಯಾಯಾಲಯದಲ್ಲಿ ಸಹಾಯ ಮಾಡಲಾಗುತ್ತದೆ ಅದನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡು ಹಿಂಸೆಯಿಂದ ಹೊರಬರಬಹುದು ಮತ್ತು ಪರಿಶಿಷ್ಟ ಜಾತಿ, ಪಂಗಡ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸರ್ಕಾರ ನಡೆಸುವ ಸಭೆಗಳಿಗೆ ಮೇಲ್ಜಾತಿಯವರನ್ನು ಕರೆದು ಅರಿವು ಮೂಡಿಸಬೇಕು ಮತ್ತು ಪ್ರತಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಯುವಜನತೆ ಕರೆ ನೀಡಿದರು.


ವಿಚಾರವಾದಿ ಪಿ.ವಿಜಯ್‍ಕುಮಾರ್ ವಿಚಾರ ಮಂಡಿಸುತ್ತಾ ಅಸ್ಪರ್ಶ್ಯತೆ  ಆಚರಣೆ ಕಾನೂನು ರೀತಿಯ ಅಪರಾಧವಾಗಿದೆ. ಪ್ರತಿ ಹಳ್ಳಿಯಲ್ಲೂ ಅಸ್ಪರ್ಶ್ಯತೆ  ಜೀವಂತವಾಗಿರುವುದು ಮುಂದುವರೆದ ಸಮಾಜ ತಲೆ ತಗ್ಗಿಸಬೇಕಾಗಿದೆ ಬಂಧುಗಳೇ ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರು ಇನ್ನೂ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುತ್ತಿಲ್ಲ. ಕೆಲವೇ ಕೆಲವು ಮಂದಿ ನಾಯಕರು  ಮಾತ್ರ ಅರಿವು ಪಡೆದುಕೊಂಡು ನನಗೆ ಮತ್ತು ನನ್ನ ಸಮುದಾಯಕ್ಕೆ ಯಾವುದೆ ಸಂಬಂದವಿಲ್ಲವೆಂದು ಸಮುದಾಯಗಳಿಗೆ ತಪ್ಪು ಮಾಹಿತಿ ನೀಡಿ ದೌರ್ಜಜ್ಯಗಳಿಗೆ ಇನ್ನಷ್ಟು ದಾರಿ ಮಾಡಿಕೊಡುತ್ತಿದ್ದಾರೆ ಅದರಿಂದ ಅಂಬೇಡ್ಕರ್ ಆಶಯದ ಸಂವಿಧಾನ ಮಾದರಿಯಾಗಿ ಸಮಸಮಾಜದ ದಿಕ್ಕಿನಲ್ಲಿ ಇದೆ. ಅದರ ಆಶಯದಂತೆ ಶೊಷಿತ ಸಮುದಾಯಗಳು ಒಂದಾಗಿ ಅಸ್ಪರ್ಶ್ಯತೆ  ನಿವಾರಣೆಗೆ ಮುಂದಾಗಬೇಕಾಗಿದೆಂದು ತಿಳಿಸಿದರು. ಅದೆ ರೀತಿ ಸರ್ಕಾರದಿಂದ  ಪರಿಶಿಷ್ಟ ಜಾತಿ, ಪಂಗಡ ಜನರ ಅಭಿವೃದ್ದಿಗಾಗಿ ಪುನರ್ವಸತಿ, ಸರ್ಕಾರಿ ನೌಕರಿ, ಭೂಮಿ ಮಂಜುರಾತಿ, ನೊಂದವರ ಪರವಾಗಿ ನ್ಯಾಯಾಲಯ, ಅಂತರ್‍ಜಾತಿ ವಿವಾಹ, ಸಮುದಾಯ ಭವನ,ಪ್ರತ್ಯಕ ಸ್ಮಶಾನ ಭೂಮಿ,ವಿದ್ಯಾರ್ಥಿ ವೇತನ, ವಸತಿ ಶಾಲೆ,ಕಾಲೇಜು ಸೌಲಭ್ಯಗಳನ್ನು ಕೊಡುತ್ತಿದ್ದು ಇದನ್ನು ಬಳಸಿಕೊಂಡು ಅಭಿವೃದ್ದಿಯೊಂದಬೇಕೆಂದು ಕಾರ್ಯಗಾರದ ಯುವವಿದ್ಯಾರ್ಥಿ,ಮಹಿಳೆಯರಿಗೆ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತ್ನಾಡಿ ವಿ.ಬಾಬುರವರು ಸಮಾಜದಲ್ಲಿ ಪ್ರತಿಯೊಬ್ಬರು ಮನ ಪರಿರ್ವತನೆ ಮಾಡಿಕೊಂಡರೆ ಕಂಡಿತವಾಗಿ ಅಸ್ಪರ್ಶ್ಯತೆ ನಾಶಮಾಡಬಹುದು. ಎಲ್ಲಾರೂ ಮನಸ್ಸು ಮಾಡಿ ಅನಿಷ್ಟ ಪದ್ದತಿಯನ್ನು ಬುಡಸಮ್ಮೆತ ನಿರ್ನಾಮ ಮಾಡಬೇಕಾಗಿದೆದು ನುಡಿದರು.
ಈ ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಮಜಿ ಅಧ್ಯಕ್ಷರಾದ ಉದಯಶಂಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಾಲಾಜಿ, ಉಪತಹಶೀಲ್ದಾರಾದ ಹೇಮಾಲತಾ, ಪೋಲಿಸ್ ಇಲಾಖೆಯ ರಾಮಚಂದ್ರಪ್ಪ, ಪ್ರಾಸ್ತವಿಕ ಮಾತ್ನಾಡಿದ ಸಂಸ್ಥೆಯ ಅಧ್ಯಕ್ಷರಾದ ಎ,ನಾಗರಾಜ್, ವೇಮಗಲ್ ಲೋಕೇಶ್, ರಾಮುಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಿಕಾ, ನಾಗರತ್ನಮ್ಮ, ಅಸೀನಾಬೇಗಂ ಸಂಘದ ಹಾರ್ಜೇನಹಳ್ಳಿ ಕೃಷ್ಣಪ್ಪ, ಶಾರದ, ಇಂಚರ ನಾರಾಯಣಸ್ವಾಮಿ, ಜಿಂಕೆ ರಾಮು, ನಾಗಸೇನಾ ಕಲಾತಂಡದಿಂದ ಕ್ರಾಂತಿಗೀತೆಗಳಿಂದ ಪ್ರಾರ್ಥಿಸಿ, ಪ್ರವೀಣ್‍ಚಕ್ರವರ್ತಿ ನಿರೂಪಿಸಿ, ಸುನೀಲ್ ಸ್ವಾಗತಿಸಿ, ಮದು ವಂದಿಸಿದರು.

 
ನಾಗಸೇನಾ ಕಲಾತಂಡದಿಂದ ಮಾನವರಾಗೋಣವೆಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು,

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...