ಕೋಲಾರ:ಅಂಗನವಾಡಿ ಕೇಂದ್ರಗಳು ಪೂರ್ವಪ್ರಾಥಮಿಕ ಶಾಲೆಗಳಾಗಿ ಪರಿವರ್ತನೆ

Source: shabbir | By Arshad Koppa | Published on 24th May 2017, 8:53 AM | State News |

ಕೋಲಾರ:- ತಾಲೂಕಿನ ಅಂಗನವಾಡಿ ಕೇಂದ್ರಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪೂರ್ವಪ್ರಾಥಮಿಕ ಶಾಲೆಗಳಾಗಿ (ನರ್ಸರಿ) ಮಾರ್ಪಡಿಸಿ ಇಂಗ್ಲೀಷ್ ಬೋಧನೆಗೆ ಅವಕಾಶ ಕಲ್ಪಿಸಲು ಸಂಕಲ್ಪ ತೊಡಲಾಗಿದ್ದು, ಈ ಕಾರ್ಯಕ್ಕೆ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಬೇಕೆಂದು ತಾಲೂಕು ಪಂಚಾಯತ್ ಅಧ್ಯಕ್ಷ ಸೂಲೂರು ಆಂಜಿನಪ್ಪ  ಹೇಳಿದರು.


ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ತಾಲೂಕು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ತಾವು ಅಧಿಕಾರ ಸ್ಪೀಕರಿಸಿ ಒಂದು ವರ್ಷವಾಗಿದ್ದು ಇದರ ಸಂದರ್ಭದಲ್ಲಿ ಸಂಭ್ರಮ ಪಡದೆ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪತೊ ಡುತ್ತಿರುವುದಾಗಿ ಘೋಷಿಸಿದರು.
ಇಡೀ ರಾಜ್ಯದಲ್ಲಿಯೇ ಮಾದರಿಯಾಗಿ ಅಂಗನವಾಡಿ ಕೇಂದ್ರಗಳನ್ನು ನರ್ಸರಿಗಳಾಗಿ ಮಾರ್ಪಡಿಸಿ ಅಲ್ಲಿ ಆಂಗ್ಲ ಭಾಷೆ ಸೇರಿದಂತೆ ನರ್ಸರಿ ಸಿಲಬಸ್ ಶೈಕ್ಷಣಿಕ  ಬೋಧನೆ ಆರಂಭಿಸುವ ಮೂಲಕ ಮಕ್ಕಳನ್ನು ಅಂಗನವಾಡಿಕೇಂದ್ರಗಳಲ್ಲಿಯೇ ಹಿಡಿದಿಟ್ಟುಕೊಳ್ಳುವ ಜೊತೆಗೆ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಾಡುವ ಉದ್ದೇಶವಿದೆಯೆಂದರು.
ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಬೇಕೆಂದು ಸರಕಾರವನ್ನು ಕೋರಿದ ಅವರು, ಕೋಲಾರ ತಾಲೂಕಿನಿಂದ ಆರಂಭವಾಗುವ ಬದಲಾವಣೆ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆಯೆಂದು ಅಭಿಪ್ರಾಯಪಟ್ಟರು.
ಅಂಗನವಾಡಿ ಕೇಂದ್ರಗಳ ಯಾವುದೇ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಶಾಲಾಭಿವೃದ್ಧಿ ಸಮಿತಿಗಳ ಮಾದರಿಯಲ್ಲಿ ಕ್ಲಸ್ಟರ್ ಸಮಿತಿಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗುವುದು, ಈ ಸಮಿತಿಯು ಪೆÇೀಷಕರು ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಲಿದೆಯೆಂದು ವಿವರಿಸಿದರು.
ಮುಂದಿನ ಒಂದು ತಿಂಗಳಿನಲ್ಲಿ ಕೋಲಾರ ತಾಲೂಕಿನಲ್ಲಿ 52 ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು, ಅಂಗನವಾಡಿ ಕೇಂದ್ರಗಳಲ್ಲಿ ವರ್ಷದಲ್ಲಿ ಮೂರು ಬಾರಿ ಕ್ರೀಡಾ ಸಾಂಸ್ಕøತಿಕ ಉತ್ಸವವನ್ನು ನಡೆಸಬೇಕು, ಉರ್ದು ಭಾಷಿಕರು ಹೆಚ್ಚಾಗಿರುವ ಕೇಂದ್ರಗಳಲ್ಲಿ ಕನ್ನಡವನ್ನು ಬೋಧಿಸಬೇಕೆಂದು ಕಿವಿ ಮಾತು ಹೇಳಿದರು.
ಈ ವಿಚಾರದಲ್ಲಿ ಅಂಗನವಾಡಿ ಕಾರ್ಯಕರ್ತ ಬೆನ್ನುಲುಬಾಗಿ ತಾವು ನಿಲ್ಲಲಿದ್ದು, ಕಾರ್ಯಕರ್ತೆಯರು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು, ಯಾವುದೇ ಲೋಪದೋಷ ಕಂಡು ಬಂದಲ್ಲಿ ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆಯಲು ಶಿಫಾರಸ್ಸು ಮಾಡಬೇಕಾಗುತ್ತದೆಯೆಂದು ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗಳಿಂದ ಅಂಗ್ಲ ಬೋಧನೆ ಕುರಿತು ತರಬೇತಿ ಕೊಡಿಸಲಾಗುವುದು ಎಂದು ಅವರು ಪ್ರಕಟಿಸಿದರು.


ಸಿಡಿಪಿಓ ಕಿರಣ್‍ಕುಮಾರ್ ಮಾತನಾಡಿ, ದೇಶದಲ್ಲಿ ಸತತವಾಗಿ 42 ವರ್ಷಗಳಿಂದಲೂ ಸಮಗ್ರ ಶಿಕ್ಷಣ ಅಭಿವೃದ್ಧಿ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯಿಂದಾಗಿ ಮಕ್ಕಳ ತಾಯಂದಿರ ಅಪೌಷ್ಠಿಕತೆ ಸಮಸ್ಯೆ, ಶಿಶು ಹೆರಿಗೆ ಮರಣ ಪ್ರಮಾಣಗಳು ಗಣನೀಯವಾಗಿ ಕಡಿಮೆಯಾಗಿದೆ. ಆರು ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಿಸುವ ಕಾರ್ಯಕ್ರಮ ಈ ಯೋಜನೆಯಡಿ ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದೆಯೆಂದು ವಿವರಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಮುನಿರಾಮಾಂಜಿನಮ್ಮ ಇತರರು ಮಾತನಾಡಿ, ಅಂಗನವಾಡಿ ಕೇಂದ್ರಗಳ  ಖಾಸಗೀಕರಣಗೊಳಿಸುವ ಪ್ರಯತ್ನವನ್ನು ಸರಕಾರಗಳು ಕೈಬಿಡಬೇಕು, ಕೇಂದ್ರಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳಲು ಸಹಕಾರಿಯಾಗುವ  ಉದ್ದೇಶದಿಂದ ಆಂಗ್ಲ ಬೋಧನೆಗೆ ಕಾರ್ಯಕರ್ತೆಯರ ಒಪ್ಪಿಗೆ ಇದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ಇಲಾಖೆಯ ತಿಮ್ಮಸಂದ್ರ ನಾಗರಾಜ್, ಗೋವಿಂದರಾಜು ಭಾಗವಹಿಸಿದ್ದರು.

ಕೋಲಾರ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಮಾತನಾಡುತ್ತಿರುವ ತಾಲೂಕು ಪಂಚಾಯತ್ ಅಧ್ಯಕ್ಷ ಸೂಲೂರು ಆಂಜಿನಪ್ಪ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...