ಕೋಲಾರ: ತಾಯಿ ಆರೋಗ್ಯಕರವಾಗಿದ್ದರೇ ಮಾತ್ರ ಆರೋಗ್ಯಕರ ಮಕ್ಕಳು ಹುಟ್ಟಲು ಸಾಧ್ಯ-ಡಿ.ಎಂ.ರತ್ನಮ್ಮ 

Source: shabbir | By Arshad Koppa | Published on 23rd November 2017, 8:27 AM | State News |

ಕೋಲಾರ, ಅಕ್ಟೋಬರ್ 21:    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಾತೃ ಪೂರ್ಣ ಯೋಜನೆ ಅಡಿ ಪ್ರತಿ ಗರ್ಭಿಣ - ಬಾಣಂತಿಯರಿಗೆ 1 ದಿನಕ್ಕೆ 21 ರೂ ವ್ಯಯ ಮಾಡುತ್ತಿದ್ದು,  ಮಾಲೂರು ತಾಲ್ಲೂಕಿನಲ್ಲಿ 4200 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.  ತಾಯಿ ಆರೋಗ್ಯವಾಗಿದ್ರೆ ಮಾತ್ರ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ. ಹಾಗಾಗಿ, ಗರ್ಭಿಣಿ ಹಾಗೂ ಬಾಣಂತಿಯರು ಯಾವುದೇ ಮುಜುಗರವಿಲ್ಲದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೌಷ್ಠಿಕ ಆಹಾರ ಸೇವಿಸಿ, ಆರೋಗ್ಯವಂತರಾಗಬೇಕು ಎಂದು ಮಾಲೂರು ತಾಲ್ಲೂಕಿನ ಮಕ್ಕಳ ಅಭಿವೃದ್ಧಿ ಅಧಿಕಾರಿ ಡಿ.ಎಂ.ರತ್ನಮ್ಮ ಅವರು ಸಲಹೆ ನೀಡಿದರು.
    ಇಂದು ಮಾಲೂರು ಪಟ್ಟಣದ ಜೆ.ಎಸ್.ಎಸ್ ಗಾಯಿತ್ರಿ ಪ್ರೌಢಶಾಲೆ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೋಲಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ, ಮಾಲೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಪರಿಪೂರ್ಣ ಬೆಳವಣ ಗೆಗಾಗಿ ಮಾತೃಪೂರ್ಣ’ ಕುರಿತು ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
    ಈ ಹಿಂದೆ ಸಬಲ ಎಂಬ ಯೋಜನೆಯಡಿ ಗರ್ಭಿಣ  - ಬಾಣಂತಿಯರಿಗೆ ಪೌಷ್ಠಿಕಯುಕ್ತ ಆಹಾರ ಸಾಮಗ್ರಿಗಳನ್ನು ಕಿಟ್ ಮೂಲಕ ಅವರವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಇತ್ತು. ಆದರೆ ಆ ವ್ಯವಸ್ಥೆಯಿಂದ ಸುಧಾರಣೆ ಕಾಣದಿರುವುದು ಹಾಗೂ ಪೌಷ್ಠಿಕತೆ ಪ್ರಮಾಣ ಏರುಮುಖವಾಗದಿರುವುದರಿಂದ ಆ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. 
ನಿಶಕ್ತಿ, ಕಡಿಮೆ ತೂಕ, ರಕ್ತ ಹೀನತೆ ಸೇರಿದಂತೆ ದೈಹಿಕ ದುರ್ಬಲತೆಯಿಂದ ಬಳಲುತ್ತಿರುವ ತಾಯಿಯ  ಅಪೌಷ್ಠಿಕತೆ ನೀಗಿಸಲು ಅಂಗನವಾಡಿ ಕೇಂದ್ರಗಳಲ್ಲಿಯೇ ಗರ್ಭಿಣ  - ಬಾಣಂತಿಯರಿಗೆ ಹಾಲು, ಮೊಟ್ಟೆ, ಚಿಕ್ಕಿ, ಅನ್ನ ಸಾಂಬರ್, ದಾಲ್ ಸಹಿತ ಪೌಷ್ಠಿಕಯುಕ್ತ ಆಹಾರ ನೀಡಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಈ ಯೋಜನೆಯ ಲಾಭ ಪಡೆಯುತ್ತಿರುವ ಗರ್ಭಿಣ  - ಬಾಣಂತಿಯರ ಆರೋಗ್ಯದಲ್ಲಿ ಅತ್ಯುತ್ತಮ ರೀತಿಯ ಸುಧಾರಣೆ ಕಂಡು ಬರುತ್ತಿರುವುದು ಹರ್ಷದಾಯಕ ಸಂಗತಿ ಎಂದು ತಿಳಿಸಿದರು.
ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣ  ಹಾಗೂ ಬಾಣಂತಿಯರನ್ನು ಅಂಗನವಾಡಿ ಕೇಂದ್ರಗಳಿಗೆ ತರಬೇಕು ಎಂದು ಕರೆ ಕೊಟ್ಟರು. 
    ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ವಿಚಾರ ಸಂಕಿರಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯವಂತ ಮಕ್ಕಳು ದೇಶದ ಆಸ್ತಿಯಾಗುತ್ತಾರೆ. ಅಂತಹ ಆರೋಗ್ಯವಂತ ಮಕ್ಕಳನ್ನು ನೀಡಲು ನಾಡಿನ ಮಾತೆಯರಿಗೆ ‘ಮಾತೃಪೂರ್ಣ’ ಯೋಜನೆ ನೆರವಾಗಿದೆ ಎಂದರು.
ಮಾತೃ ಮರಣ ಪ್ರಮಾಣ ಹಾಗೂ ಶಿಶು ಮರಣ ಪ್ರಕರಣಗಳಲ್ಲಿ ಬಹುತೇಕ ಅಪೌಷ್ಠಿಕತೆಯೇ ಕಾರಣ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಅನೇಕ ಗರ್ಭಿಣ  ಹಾಗೂ ಬಾಣಂತಿಯರಿಂದಾಗಿ ಬೆಳೆಯುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣ ಗೆಯಲ್ಲಿ ತೊಂದರೆಗಳಾಗುತ್ತಿದ್ದು, ಇದಕ್ಕೆ ಆರ್ಥಿಕ ದೌರ್ಬಲ್ಯವೂ ಒಂದು ಕಾರಣವಾಗಿದೆ. ತಾಯಿ ಹಾಗೂ ನವಜಾತ ಶಿಶುವಿನ ಸಾವಿನ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರ್ಕಾರ ಮಾತೃ ಪೂರ್ಣ ಯೋಜನೆ ಮೂಲಕ ಪ್ರತಿನಿತ್ಯ ನೇರವಾಗಿ ಗರ್ಭಿಣ ಯರಿಗೆ ಹಾಗೂ ಬಾಣಂತಿಯರಿಗೆ ಸಮಗ್ರ ಪೌಷ್ಠಿಕ ಆಹಾರವನ್ನು ನೀಡಿ ಅಪೌಷ್ಠಿಕತೆಯನ್ನು ತೊಲಗಿಸಲು ಮುಂದಾಗಿದೆ. ಆದ್ದರಿಂದ ಗರ್ಭಿಣ  ಹಾಗೂ ಬಾಣಂತಿಯರು ಅಂಗನವಾಡಿ ಕೇಂದ್ರಗಳಲ್ಲಿ ದೊರೆಯುವ ಪೌಷ್ಠಿಕ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಬೇಕು ಎಂದು ಹೇಳಿದರು. ಗರ್ಭಾವಸ್ಥೆಯಿಂದಲೇ ಮಗುವಿನ ಸದೃಡ ಆರೋಗ್ಯ ಸುಧಾರಣೆಗೆ ಪಣ ತೊಡಬೇಕು ಎಂದು ಗರ್ಭಿಣ ಯರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಾದ ಝಾನ್ಸಿ, ಹರ್ಷಿತಾ ಹಾಗೂ ಪ್ರೇಮಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಯೋಜನೆ ಪ್ರಯೋಜನ ಪಡೆದು ತಮ್ಮ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದ್ದು, ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿದೆ ಹಾಗೂ ತೂಕ ಉತ್ತಮವಾಗಿದೆ. ಅಂಗನವಾಡಿಯಲ್ಲಿ ಉಪಯುಕ್ತ ಮಾಹಿತಿ ಕಲಿತುಕೊಳ್ಳಲು ಅವಕಾಶವಾಗಿದೆ ಅಲ್ಲದೇ, ಪುಟ್ಟ ಮಕ್ಕಳೊಂದಿಗೆ ಕೆಲ ಸಮಯ ಕಳೆಯುವುದು ಮನಸ್ಸಿಗೆ ಹಿತವನ್ನೂ ನೀಡಿದೆ ಎಂದರು.
      ಕಾರ್ಯಕ್ರಮದಲ್ಲಿ  ವಕೀಲರಾದ ಕೆ.ಮಂಜುನಾಥ್, ಬಿ.ಸರಸ್ವತಮ್ಮ, ಜೆ.ಎಸ್.ಎಸ್ ಗಾಯಿತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಶಿವಶಂಕರ, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಜೆ.ಎಸ್.ಎಸ್ ಗಾಯಿತ್ರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...