ಕೋಲಾರ:ಆಲೂಗಡ್ಡೆ ಬೆಳೆ ಬೆಳೆಯಲು ಸೂಕ್ತ ಕಾಲ

Source: shabbir | By Arshad Koppa | Published on 23rd November 2017, 8:30 AM | State News |


ಕೋಲಾರ, ಅಕ್ಟೋಬರ್ 21 :ಆಲೂಗಡ್ಡೆ ತಂಪು ವಾತಾವರಣ ಬಯಸುವ ಬೆಳೆಯಾಗಿದ್ದು ಗಡ್ಡೆ ಬೆಳವಣ ಗೆಯ ಸಮಯದಲ್ಲಿ 200 ಸೆಲ್ಷಿಯಸ್‍ಕ್ಕಿಂತ ಕಡಿಮೆ ಇದ್ದರೆ ಗಡ್ಡೆಗಳು ಚೆನ್ನಾಗಿ ಕಟ್ಟುತ್ತವೆ. ಈ ಹಂತದಲ್ಲಿ ಉಷ್ಣಾಂಶ 30 ಸೆಲ್ಷಿಯಸ್‍ಕ್ಕಿಂತ ಜಾಸ್ತಿ ಇದ್ದಲ್ಲಿ ಗಡ್ಡೆಯ ಬೆಳವಣ ಗೆ ಸಂಪೂರ್ಣ ನಿಂತು ಹೋಗುತ್ತದೆ. ಆಲೂಗಡ್ಡೆ ಬೆಳೆಯಲ್ಲಿ ದೀರ್ಘಾವಧಿ ಹಗಲು ಮತ್ತು ಗಡ್ಡೆಯಾಗುವ ಹಂತದಲ್ಲಿ ಅಲ್ಫಾವಧಿ ಹಗಲು ಇದ್ದರೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಬೆಳೆಯನ್ನು ನೀರಾವರಿ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಬಿತ್ತನೆಯನ್ನು ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಭೂಮಿಯಲ್ಲಿ ಉಷ್ಣಾಂಶ ಜಾಸ್ತಿ ಇದ್ದ ಸಮಯದಲ್ಲಿ ಬಿತ್ತನೆ ಮಾಡಿದರೆ  ಗಡ್ಡೆ ಕೊಳೆಯುವುದು ಜಾಸ್ತಿಯಾಗಿ, ಮೊಳಕೆ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ಆಲೂಗಡ್ಡೆ ಅಂಗಮಾರಿ ರೋಗಕ್ಕೆ ರೋಗ ನಿರೋಧಕ ತಳಿಗಳಾದ ಕುಫ್ರಿ ಪುಕಾರಾಜ್ (75 ರಿಂದ 90 ದಿನಗಳು), ಕುಫ್ರಿ ಜ್ಯೋತಿ(95 ರಿಂದ 100 ದಿನಗಳು) ಕೊಯ್ಲಿಗೆ ಬರುತ್ತವೆ.
ಆಲೂಗಡ್ಡೆ ಮುಖ್ಯವಾಗಿ ಗಡ್ಡೆಯಿಂದ ಸಸ್ಯಾಭಿವೃದ್ಧಿಯಾಗುವ ಬೆಳೆ. ಈ ಗಡ್ಡೆಗಳಿಂದ ಅನೇಕ ರೊಗಗಳು ಹರಡುವುದಾದರೂ ಅತಿ ಮುಖ್ಯವಾಗಿ ಎರಡು ರೋಗಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಅವುಗಳೆಂದರೆ ಎಲೆ ಮುದುಡು ರೋಗ ಮತ್ತು ಸೊರಗು ರೋಗ. ಈ ರೋಗಗಳು ಗಡ್ಡೆಗಳ ಮುಖಾಂತರ ಹರಡುವುದರಿಂದ, ಬಿತ್ತನೆ ಗಡ್ಡೆಗಳನ್ನು ರಾಷ್ಟ್ರೀಯ ಬೀಜ ನಿಗಮ, ರಾಜ್ಯ ಬೀಜ ನಿಗಮ ಇಲ್ಲವೆ ಸಹಕಾರಿ ಸಂಘ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಮೂಲಗಳಿಂದ ಪಡೆಯುವುದು ಒಳ್ಳೆಯದು. 
ಬಿತ್ತನೆ ಗಡ್ಡೆಗಳನ್ನು ಖರೀದಿಸಿದ ಮೇಲೆ ನೇರವಾಗಿ ನಾಟಿ ಮಾಡುವುದಕ್ಕೆ ಉಪಯೋಗಿಸದೆ ತಂಪಾಗಿರುವ ನೆರಳಿನ ಪ್ರದೇಶದಲ್ಲಿ ಗಾಳಿಯಾಡುವಂತೆ ಹರಡುವುದು, ನಂತರ ದಪ್ಪನಾದ ಉಬ್ಬಿದ ಕಣ್ಣುಗಳು ಮೂಡಿದಾಗ ಗಡ್ಡೆಗಳನ್ನು ಉದ್ದುದ್ದವಾಗಿ ಸುಮಾರು 35-40 ಗ್ರಾಂ ತೂಕದ್ದಾಗಿದ್ದು ಕನಿಷ್ಠ ಎರಡು ಕಣ್ಣುಗಳಿರುವಂತೆ ಕತ್ತರಿಸಬೇಕು. ಪ್ರತಿಸಲ ಗಡ್ಡೆಯನ್ನು ಕತ್ತರಿಸುವಾಗ ಕುಡುಗೋಲನ್ನು ಹಾಲ್ಕೋಹಾಲ್, ಸ್ಪಿರಿಟ್ ಅಥವಾ ಫಾರ್ಮಲಿನ್‍ನಲ್ಲಿ ಅದ್ದಬೇಕು. ನಂತರ ಬೀಜದ ಗಡ್ಡೆಗಳನ್ನು ಮ್ಯಾಂಕೋಜೆóಬ್ 2 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ 5 ನಿಮಿಷ ಅದ್ದಿ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.  
    ಭೂಮಿಯನ್ನು 2 ರಿಂದ 3 ಸಾರಿ ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು. ಗೆದ್ದಲಿನ ಸಮಸ್ಯೆ ಕಂಡು ಬಂದಲ್ಲಿ 3.3 ಮಿ.ಲೀ ಕ್ಲೋರೋಪೈರಿಫಾಸ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಹುತ್ತಕ್ಕೂ  ಸುರಿಯಬೇಕು.
      ಆಲೂಗಡ್ಡೆಯಲ್ಲಿ ಗಡ್ಡೆಯನ್ನು ಬಿತ್ತನೆ ಮಾಡಿದ 45 ದಿನಗಳ ನಂತರ ಸಸ್ಯವರ್ಧಕ ಮೆಪಿಕ್ವಾಟ್ ಕ್ಲೋರೈಡ್ 10 ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣ  ಸಂಖ್ಯೆ 7829512236 ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ, ಹಾರ್ಟಿಕ್ಲಿನಿಕ್, ಜಿಲ್ಲಾ ಪಂಚಾಯತ್, ಕೋಲಾರ ರವರನ್ನು ಸಂಪರ್ಕಿಸಬಹುದು.

ಕೋಲಾರ: ಸೇನಾ ನೇಮಕಾತಿ ಪೂರ್ವ ಸಿದ್ಧತೆ ತರಬೇತಿಗೆ ಅರ್ಜಿ ಅಹ್ವಾನ
ಕೋಲಾರ, ಅಕ್ಟೋಬರ್ 21 :
     ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು 2017-18ನೇ ಸಾಲಿಗೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅರ್ಜಿಗಳನ್ನು ಅಹ್ವಾನಿಸಿದೆ.
    ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು. ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ದಿನಾಂಕ: 05.12.2017 ರೊಳಗೆ ಅರ್ಜಿ ಸಲ್ಲಿಸಬೇಕು.
     ಸದರಿ ತರಬೇತಿಯನ್ನು 2018ರ ಜನವರಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ಸೈನಿಕ ರ್ಯಾಲಿಯನ್ನು ಗಮನದಲ್ಲಿಟ್ಟುಕೊಂಡು ನೀಡುತ್ತಿದ್ದು, ಬಾಗಲಕೋಟೆ ಜಿಲ್ಲೆಯು ಬೆಂಗಳೂರು ವಿಭಾಗದಡಿ ಬರುವುದರಿಂದ ಈ ವಿಭಾಗದಲ್ಲಿ ಬರುವ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಖಾಯಂ ನಿವಾಸಿಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ www.backwardclasses.kar.nic.in  ಅಥವಾ ದೂರವಾಣ  ಸಂಖ್ಯೆ 080-65970004 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

Read These Next