ಕೋಲಾರ:ತ್ರಿಚಕ್ರ ವಾಹನ ಚಾಲಕರ ಸಂಘ ಸಹಿತ ಇತರ ಸಂಘಟನೆಗಳ ಸಹಯೋಗದಲ್ಲಿ ಸ್ವತಂತ್ರ ದಿನಾಚರಣೆ

Source: shabbir | By Arshad Koppa | Published on 16th August 2017, 8:04 AM | State News | Guest Editorial |


ಕೋಲಾರ,ಆ.15: ತ್ರಿಚಕ್ರ ವಾಹನ ಚಾಲಕರ ಸಂಘ, ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಅಡುಗೆ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಮತ್ತು ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು. 
    ತ್ಯಾಗ, ಬಲಿದಾನ, ಮತ್ತು ಸ್ವಾಭಿಮಾನ ಬದುಕಿಗಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು, ಮಹಾತ್ಮ ಗಾಂಧಿ, ಸುಭಾಷ್‍ಚಂದ್ರಬೋಸ್, ಆಜಾದ್, ರಾಜಗುರುಗಳ ಸ್ಮರಣೆಯನ್ನು ಮಾಡಲಾಯಿತು.
    ಈ ಸಂದರ್ಭದಲ್ಲಿ ಮುಖಂಡರಾದ ಕೆ.ವಿ ಸುರೇಶ್‍ಕುಮಾರ್, ಕೆ.ನಾರಾಯಣಸ್ವಾಮಿ, ರಮೇಶ್‍ಬಾಬು, ನಜೀಬುನ್ನೀಸಾ, ಸಮೀಮ್ ಉನ್ನೀಸಾ, ಶ್ರೀನಿವಾಸಗೌಡ, ವೇಣುಗೋಪಾಲ್, ಶ್ರೀನಿವಾಸ, ಚೋಟಾಸಾಬ್, ಅಮ್ಜದ್ ಪಾಷ, ಗೋಪಾಲಪ್ಪ ಉಪಸ್ಥಿತರಿದ್ದರು.

ನಗರದ ಟೇಕಲ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ
  
ಕೋಲಾರ,ಆ.15: ನಗರದ ಟೇಕಲ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾಜಪ ಪಕ್ಷದ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಧ್ವಜಾರೋಹಣವನ್ನು ನರವೇರಿಸಿದರು. ಈ ಸಂದಬ್ದಲ್ಲಿ ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯುವ ಮೂಲಕ ಅವರ ಆದರ್ಶಗಳನ್ನು ನಾವು ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
    ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ನಗರ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಾವೀದ್‍ಪಾಷ, ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ತಿಮ್ಮರಾಯಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ದೇವಿಕ ಪ್ರಕಾಶ್‍ನಾಯಡು, ನಗರ ಮಹಿಳಾ ಅಧ್ಯಕ್ಷೆ ಅರುಣಮ್ಮ, ರಾಜೇಶ್ವರಿ, ಜಿಲ್ಲಾ ಉಪಾಧ್ಯಕ್ಷೆ ರತ್ನಮ್ಮ, ವಿಜಯಲಕ್ಷ್ಮಿ, ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷ ಯಾರಬ್‍ಬಾಬಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶುಂ, ಗಂಗಮ್ಮನಪಾಳ್ಯ ಮುನಿರಾಜು, ನಗರ ಉಪಾಧ್ಯಕ್ಷ ಬಾಬು, ಓಬಿಸಿ ಅಧ್ಯಕ್ಷ ಹರಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು- ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಷಾ

ಶ್ರೀನಿವಾಸಪುರ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...