ಕೋಲಾರ: ನಗರವ್ಯಾಪ್ತಿ 960 ಕುಟುಂಬಗಳಿಗೆ 2.34 ಕೋ.ರೂ ಸಾಲ ವಿತರಣೆ

Source: shabbir | By Arshad Koppa | Published on 1st August 2017, 7:41 AM | State News | Guest Editorial |

ಮಾರ್ಚ್ ಅಂತ್ಯದೊಳಗೆ 25 ಕೋ.ಸಾಲ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ದಿನದ ಬಡ್ಡಿ ಶೋಷಣೆಗೆ ಸಿಲುಕಿರುವ ನಗರದ ಸ್ವಾಭಿಮಾನಿ ಮಹಿಳೆಯರಿಗೆ ಮಾರ್ಚ್ ಅಂತ್ಯದೊಳಗೆ 25 ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಸೋಮವಾರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಅಲ್ಪಸಂಖ್ಯಾತ ಸಮುದಾಯದ 88 ಮಹಿಳಾ ಸಂಘಗಳ 960 ಕುಟುಂಬಗಳಿಗೆ ಸುಮಾರು 2.34 ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಾಲ ವಿತರಣೆ ಡಿ.ಸಿ.ಸಿ.ಬ್ಯಾಂಕಿನಲ್ಲಿ ನಿರಂತರವಾಗಿ ಹಂತ, ಹಂತವಾಗಿ ಸಾಗಲಿದೆ. ಪ್ರಾರಂಭದಲ್ಲಿ ಕಡಿಮೆ ಸಾಲ ನೀಡಿ ಮರು ಪಾವತಿಯ ನಂತರ ಎರಡು ಪಟ್ಟು ಸಾಲ ವಿತರಿಸಲಾಗುವುದು ಎಂದರು.
ನಗರದಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಸೇರಿದಂತೆ ಅನೇಕರು ಸ್ವಾಭಿಮಾನಿ ಬದುಕಿಗಾಗಿ ಬೀಡಿ ಕಟ್ಟುವಿಕೆ,ಹೊಲಿಗೆ, ಊದುಬತ್ತಿ ತಯಾರಿಕೆ ಮತ್ತಿತರ ವೃತ್ತಿಗಳನ್ನು ಕೈಗೊಂಡು ಬದುಕು ಸಾಗಿಸುತ್ತಿದ್ದಾರೆ ಎಂದರು.
ತಮ್ಮ ಬದುಕಿಗಾಗಿ ದಿನದ ಬಡ್ಡಿಗೆ ಸಾಲ ಪಡೆಯುವ ಮಹಿಳೆಯರು ಬಡ್ಡಿದಂಧೆಕೋರರಿಂದ ಶೋಷಣೆಗೆ ಒಳಗಾಗಿದ್ದಾರೆ, ಇವರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲು ಡಿಸಿಸಿ ಬ್ಯಾಂಕ್ ನಿರ್ಧರಿಸಿದ್ದು, ಅಗತ್ಯ ಪ್ರಮಾಣದ ಬಡ್ಡಿರಹಿತ ಸಾಲ ಒದಗಿಸಲಿದೆ ಎಂದರು.
ದುಡಿಮೆ,ಶ್ರಮದ ಜೀವನ ನಡೆಸುವ ನಗರದ ಮಹಿಳೆಯರು ಕಟ್ಟಿಕೊಂಡಿರುವ ಮಹಿಳಾ ಸಂಘಗಳ ಮೂಲಕ ಪ್ರತಿವಾರ ಸಭೆ ನಡೆಸಿ,ಸಂಘದ ಉಳಿತಾಯದ ಹಣ ಪ್ರತಿ ಮಾಹೆ ಬ್ಯಾಂಕಿಗೆ ಪಾವತಿಸಿ ಬಡ್ಡಿಯಿಂದ ಮುಕ್ತರಾಗಬೇಕು ಎಂದರು.
ಪ್ರತಿಯೊಂದು ಸಂಘವು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಲ್ಲಿ ಮುಂದಿನ ಸಾಲವನ್ನು ನಿಮ್ಮ ಮನೆ ಬಾಗಿಲಿಗೆ ಬಂದು ವಿತರಿಸುವುದಾಗಿ ಭರವಸೆ ನೀಡಿದರು.
ದಿನದ ಬಡ್ಡಿಶೋಷಣೆಗೆ
ಅಲ್ಪಸಂಖ್ಯಾತ ಮಹಿಳೆಯರು
ನಗರದಲ್ಲಿ ಶೇ 40 ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಬಹುತೇಕ ಮಂದಿ ಬಡತನದಲ್ಲಿದ್ದು ದಿನದ ಬಡ್ಡಿಯ ಮಾಫಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬರುತ್ತಿದೆ ಎಂದರು.
ಪ್ರಸ್ತುತ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು ನಿಗದಿತ ಅವಧಿಯಲ್ಲಿ ಕಂತುಗಳನ್ನು ಸ್ವಯಂ ಪಾವತಿಸುವ ಮೂಲಕ ನಂಬಿಕೆ,ವಿಶ್ವಾಸವನ್ನು ಉಳಿಸಿ ಕೊಳ್ಳುವಂತಾದರೆ ಮುಂದೆ ನಿಮಗೆ ಮನೆ ಬಾಗಿಲಲ್ಲಿ ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಸಾಲ  ಸೌಲಭ್ಯವನ್ನು ಕಲ್ಪಿಸಲಾಗುವುದು  ಎಂದು ಭರವಸೆ ನೀಡಿದರು.
ಸಾಲ ಪಡೆದ ಪ್ರತಿಯೊಂದು ಸಂಘದ ಎಲ್ಲಾ ಸದಸ್ಯರು ತಮ್ಮ ಉಳಿತಾಯದ ಹಣದಲ್ಲಿ ಇಪ್ಕೋ ಟೋಕಿಯೋ ವಿಮಾ ಕಂತು ಪಾವತಿಸಿ ಸಾಲಕ್ಕೆ ರಕ್ಷಣೆ ಪಡೆಯುವಂತೆ ಸಲಹೆ ನೀಡಿದರು. 


ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಬ್ಯಾಂಕಿನಿಂದ ಸಾಲ ಪಡೆಯಲು ಯಾವೂದೇ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ, ಯಾರಿಗೂ ಕಮೀಷನ್‍ಗಳು ನೀಡಬೇಕಾಗಿಲ್ಲ. ಎಂದರು
ರಂಜಾನ್ ಹಬ್ಬಕ್ಕೆ ಸಾಲ ವಿತರಿಸುವ ಸಿದ್ದತೆ ನಡೆಸಿದ್ದೆವು ಅದರೆ ಮಧ್ಯವರ್ತಿಗಳ ಮೂಲಕ ಕೆಲವು ಸಂಘಗಳು ಸಾಲ ಪಡೆಯಲು ಮುಂದಾಗಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ  ಸಾಲ ವಿತರಣೆಯನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಯಿತು ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ನಗರ ಭಾಗದಲ್ಲಿ ಕೇಳಿ ಬರುತ್ತಿದೆ. ಯಾರೂ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗಿಲ್ಲ,ಯಾರಿಗೂ ನಯಾ ಪೈಸೆ ನೀಡಬೇಕಾಗಿಲ್ಲ, ನೇರವಾಗಿ ಬ್ಯಾಂಕ್‍ನ್ನು ಸಂಪರ್ಕಿಸಿ, ನಿಯಮಾನುಸಾರ ಸಂಘ ರಚಿಸಿ 6 ತಿಂಗಳಾಗಿದ್ದರೆ ದಾಖಲೆ ಸಲ್ಲಿಸಿ ಸಾಲ ಪಡೆಯಬಹುದಾಗಿದೆ ಎಂದರು.
ಸಾಲ ವಿತರಣೆ ಬಗ್ಗೆ ಕೆಲವರು ಟೀಕೆಗಳು ಕೇಳಿ ಬರುತ್ತಿವೆ ಇದಕ್ಕೆ ಅಂಜಬೇಕಾಗಿಲ್ಲ, ಪ್ರಾಮಾಣಿಕವಾಗಿ ಸಾಲ ವಿತರಣೆ ಮಾಡಲಾಗುತ್ತಿದೆ. ಯಾವೂದೇ ಲೋಪ ದೋಷಗಳು ಇದ್ದರೆ ದಾಖಲಾತಿಯೊಂದಿಗೆ ನೇರವಾಗಿ ಬಂದು ಮಾತನಾಡಬೇಕೆ ಹೊರತು, ಅಂತೆ, ಕಂತೆಗಳು ಹೇಳಬಾರದು ಎಂದು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಮಹಿಳಾ ಸಂಘಗಳಿಗೆ ಸಾಲದ ಚೆಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ. ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ನರಸಿಂಹರೆಡ್ಡಿ, ಬ್ಯಾಂಕಿನ ವ್ಯವಸ್ಥಾಪಕ ದೊಡ್ಡಮುನಿ ಹುಸೇನ್, ಆಲ್ಪಸಂಖ್ಯಾತ ಮುಖಂಡ ಇರ್ಷದ್ ಆಹಮದ್,ಹುಳೇದೇನಹಳ್ಳಿ ಎಸ್‍ಎಫ್‍ಸಿಎಸ್ ಅಧ್ಯಕ್ಷ ಚಂದ್ರೇಗೌಡ ಮತ್ತಿತರರಿದ್ದರು. 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...