ಕೊಡಗು: ಜಲಪ್ರಳಯ ಬಾಧಿತ ವಿವಿಧ ಪ್ರದೇಶ  ಹಾಗೂ ನಿರಾಶ್ರಿತ ಶಿಬಿರಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಭೇಟಿ

Source: sonews | By Staff Correspondent | Published on 28th August 2018, 12:17 AM | Coastal News | State News | Don't Miss |

ಕೊಡಗುಜಲಪ್ರಳಯ ಬಾಧಿತ ವಿವಿಧ ಪ್ರದೇಶಗಳಿಗೆ ಹಾಗೂ ನಿರಾಶ್ರಿತ ಶಿಬಿರಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಅಥರುಲ್ಲಾ ಶರೀಫ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಕೊಡಗು ಜಲಪ್ರಳಯ ಬಾಧಿತ ವಿವಿಧ ಪ್ರದೇಶಗಳಿಗೆ ಹಾಗೂ ನಿರಾಶ್ರಿತ ಶಿಬಿರಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಅಥರುಲ್ಲಾ ಶರೀಫ್ ಹಾಗೂ ಶಾಂತಿಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸಂತ್ರಸ್ತರಿಗೆ ಸಹಾಯ ಸಹಕಾರ ಹಾಗೂ ಸಂತ್ರಸ್ತರ ದಾಖಲೆಗಳನ್ನು ಸರಿ ಪಡಿಸಲು, ಕಾನೂನಿನ ಸಲಹೆ, ಸರಕಾರದಿಂದ ಸಿಗಬೇಕಾದ ಪರಿಹಾರ ಸಿಗುವಂತೆ ಮಾಡಲು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು *ಕೊಡಗು ರಿಲೀಫ್ ಸೆಲ್* ಕಛೇರಿಯನ್ನು ರಾಜ್ಯಾಧ್ಯಕ್ಷರಾದ ಅಥರುಲ್ಲಾ ಶರೀಫ್ ಉದ್ಘಾಟನೆ ಗೊಳಿಸಿದರು.

ಸಂತ್ರಸ್ತರ ಹಾಗೂ ಬಾಧಿತ ಪ್ರದೇಶಗಳ ನಾಶ ನಷ್ಟ ಸರ್ವೇಯ ಕಾರ್ಯ ಮುಂದುವರೆಯಿತು.

 

Read These Next