ವಿಜೃಂಭಣೆಯಿಂದ ನಡೆದ ಕಿತ್ರೆ ದೇವಿ ಮನೆ ರಥೋತ್ಸವ

Source: so news | By MV Bhatkal | Published on 14th February 2019, 8:46 PM | Coastal News | Don't Miss |

ಭಟ್ಕಳ:ತಾಲ್ಲೂಕಿನ ಕಿತ್ರೆ ಮಾರುಕೇರಿ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವೂ ಗೋಕರ್ಣದ ಶಿಶಿಕಂಠ ಭಟ್ಟ ಅವರ ಮುಂದಾಳತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಲಂಬೋಧರ ಭಟ್ಟ ನೇತೃತ್ವದಲ್ಲಿ ಗುರುವಾರದಂದು ಸಹಸ್ರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.  
ಶಕ್ತಿಸ್ಥಳದಲ್ಲಿ ಒಂದಾದ ಶ್ರೀ ಕ್ಷೇತ್ರ ದೇವಿ ಮನೆ ಕಿತ್ರೆಯಲ್ಲಿ ಬುಧವಾರದಿಂದ ವರ್ಧಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತ್ತು. ಗುರುವಾರದ ಎರಡನೇ ದಿನದಂದು ಬೆಳಿಗ್ಗೆಯಿಂದಲೇ ದೇವಾಲಯದ ದೇವಸ್ಥಾನದ ಪ್ರಧಾನ ಅರ್ಚಕ ಲಂಬೋಧರ ಭಟ್ಟ ಬಾಲಚಂದ್ರ ಭಟ್ಟ ನೇತೃತ್ವದಲ್ಲಿ ಗಣೇಶ ಪೂಜೆ, ಪುಣ್ಯಾಹ ಶ್ರೀದೇವರಿಗೆ ಕಲಾವೃದ್ದೀಯಾದಿಹವನ, ವೀರಭದ್ರದೇವರ ಪ್ರೀತ್ಯರ್ಥ ರುದ್ರಹವನ, ಶ್ರೀದೇವರಿಗೆ ಕಲಾಭೀಶೇಕ, ಬಲಿ ರಥಸಂಪ್ರೋಕ್ಷಣೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2 ಗಂಟೆಗೆ ದೇವಾಲಯದ ಪ್ರಾಂಗಣದಲ್ಲಿ ನೆರೆದ ಸಹಸ್ರಾರು ಭಕ್ತ ಸಮೂಹದೊಂದಿಗೆ ಶ್ರೀ ದೇವರ ರಥಾರೋಹಣ ಮತ್ತೂ ಮಹಾರಥೋತ್ಸವವು ಜರುಗಿತು. ಅಲಂಕೃತಗೊಂಡ ಸುಂದರ ಚಿಕ್ಕ ರಥದಲ್ಲಿ ದೇವಿಯ ಬೆಳ್ಳಿ ಮೂರ್ತಿಯನ್ನು ಇರಿಸಿ ಭಕ್ತರೆಲ್ಲರು ಸೇರಿ ದೇವಿಯ ಜಯಘೋಷದೊಂದಿಗೆ ರಥವನ್ನು ಭಕ್ತಿಯಿಂದ ಎಳೆಯಲಾಯಿತು. 
ನಂತರ ದೇವಿಯ ತೀರ್ಥ ಪ್ರಸಾದ ವಿತರಣೆ ಹಾಗೂ ಬಂದಂತಹ ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ಸೇವೆ ನಡೆಯಿತು. 
ಈ ಸಂಧರ್ಭದಲ್ಲಿ ದೇವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷ ಶಿವಾನಂದ ಮುಲ್ಲೆಮಕ್ಕಿ, ಪ್ರಮುಖರಾದ ಗಣೇಶ ಹೆಬ್ಬಾರ, ಎಮ್. ಎಮ್.ಹೆಬ್ಬಾರ, ಗಣೇಶ ಹೆಬ್ಬಾರ, ಶಿವಾನಂದ ಹೆಬ್ಬಾರ, ದೇವಸ್ಥಾನ ಮೋಕ್ತೇಸರ ಉಮೇಶ ಹೆಗಡೆ, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರು, ಭವತಾರಿಣಿ ವಲಯ ಅಧ್ಯಕ್ಷರು, ವಲಯ ಪ್ರಮುಖರು, ಪಂಚಾಯತ ಜನಪ್ರತಿನಿಧಿಗಳು, ತಾಲೂಕಿನ ಪ್ರಮುಖ ರಾಜಕೀಯ ಮುಖಂಡರು ಮುಂತಾದ ಗಣ್ಯರು ದೇವಿಯ ದರ್ಶನ ಪಡೆದರು. 
ಸಂಜೆ ದೇವಾಯದಲ್ಲಿ ಶ್ರೀ ಸೂಕ್ತ ಪುರುಷಸೂಕ್ತ ಮಹಾಯಾಗ ಸಂಬಂಧಿ ಕುಂಡಸಂಸ್ಕಾರ, ಅಗ್ನಿ ಜನನ, ಅಗ್ನಿ ಸಂಸ್ಕಾರ, ಕಲಶಸ್ಥಾಪನೆ, ರಾಜೋಪಚಾರಪೂಜೆ, ಬಲಿ, ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸಂಜೆ 6.30ಕ್ಕೆ ಸ್ಥಳಿಯ ಕಲಾವಿದರಿಂದ ನಾದ ಸಮರ್ಪಣಾ ಕಾರ್ಯಕ್ರಮ, ಬಳಿಕ ರಾತ್ರಿ 8 ಗಂಟೆಗೆ ಲಹರಿ ಕಲಾರಂಘ ಮೂಡಗಿಳಿಯಾರು ಮಹಿಳಾ ಯಕ್ಷಗಾನ ಮಂಡಳಿಯಿಂದ ನಡೆದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಯಕ್ಷಗಾಭಿಮಾನಿಗಳನ್ನು ಮನಸೊರೆಗೊಳಿಸಿತು

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...