ಡಯಾಲಿಸ್‌ನಿಂದ ಶೀಘ್ರ ಶಾಶ್ವತ ಮುಕ್ತಿ!

Source: S O News service | By Staff Correspondent | Published on 27th January 2017, 11:39 PM | National News | Special Report | Don't Miss |

ಚೆನ್ನೈ: ಕಿಡ್ನಿ ರೋಗಿಗಳಿಗೆ ಶುಭ ಸುದ್ದಿ. ಇನ್ನು ಜೀವನ ಪರ್ಯಂತ ಡಯಾಲಿಸಿಸ್ ಅವಲಂಬಿಸಬೇಕಾದ ಯಾತನೆ ಇಲ್ಲ. ಹಿಡಿ ಗಾತ್ರದ ಕೃತಕ ಕಿಡ್ನಿ ಈ ದಶಕದ ಅಂತ್ಯದ ಒಳಗಾಗಿ ಮಾರುಕಟ್ಟೆಗೆ ಬರಲಿದೆ. ಈ ಸಾಧನವನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸರಣಿಯಾಗಿ ಸುರಕ್ಷತೆ ಮತ್ತು ದಕ್ಷತೆಯ ಪರೀಕ್ಷಾರ್ಥ ಪ್ರಯೋಗಗಳು ನಡೆಯುತ್ತಿವೆ. ಅಮೆರಿಕದಲ್ಲಿ ಈಗಾಗಲೇ ನೂರಾರು ರೋಗಿಗಳ ಮೇಲೆ ಈ ಪ್ರಯೋಗ ನಡೆದಿದ್ದು, ಎಫ್‌ಡಿಎ ಕೂಡಾ ಇದನ್ನು ಅಂಗೀಕರಿಸಿದೆ ಎಂದು ಸಹ ಸಂಶೋಧಕ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡಾ.ಶುವೊ ರಾಯ್ ಅವರು ಟ್ಯಾಂಕರ್ ವಾರ್ಷಿಕ ದತ್ತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಕಟಿಸಿದರು.

 

ಈ ಸಾಧನವನ್ನು ಹೊಟ್ಟೆಯಲ್ಲಿ ಅಳವಡಿಸಲಾಗುವುದು ಹಾಗೂ ಇದಕ್ಕೆ ಪೂರಕವಾಗಿ ಹೃದಯವೇ ರಕ್ತವನ್ನು ಶುದ್ಧೀಕರಿಸುವಂತೆ ಮತ್ತು ಮೂತ್ರಪಿಂಡದ ಇತರ ಕೆಲಸಗಳನ್ನು ನಿರ್ವಹಿಸುವಂತೆ ಮಾಡಲಾಗುತ್ತದೆ. ಹಾರ್ಮೋನ್‌ಗಳ ಉತ್ಪಾದನೆ, ರಕ್ತದ ಒತ್ತಡದಲ್ಲಿ ಸಹಕರಿಸುವುದು ಮತ್ತಿತರ ಕಾರ್ಯಗಳನ್ನು ಹೃದಯವೇ ನಿರ್ವಹಿಸುತ್ತದೆ ಎಂದು ಅವರು ವಿವರ ನೀಡಿದರು. ಸಾಂಪ್ರದಾಯಿಕ ಹಿಮೊಡಯಾಲಿಸಿಸ್‌ಗಿಂತ ಭಿನ್ನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಹಿಮೊ ಡಯಾಲಿಸಿಸ್ ರಕ್ತದಿಂದ ವಿಷಕಾರಿ ಅಂಶವನ್ನಷ್ಟೇ ಶುದ್ಧೀಕರಿಸಿದರೆ, ಕೃತಕ ಕಿಡ್ನಿಯು, ರಕ್ತವನ್ನು ಶೋಧಿಸುವ ಮ್ಯಾಂಬ್ರೇನ್ ಹೊಂದಿರುತ್ತದೆ. ಜೀವಂತ ಕಿಡ್ನಿಯಲ್ಲಿ ಇರುವ ಕೋಶಗಳನ್ನು ಒಳಗೊಂಡ ಬಯೊ ರಿಯಾಕ್ಟರ್ ಕೂಡಾ ಕೃತಕ ಕಿಡ್ನಿಯಲ್ಲಿ ಇರುತ್ತದೆ. ಇದು ಡಯಾಲಿಸಿಸ್ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹಿಂದಿನ ಡಯಾಲಿಸಿಸ್ ವಿಧಾನಕ್ಕಿಂತ ಸಮಗ್ರವಾಗಿ ಇದು ಕಿಡ್ನಿಯ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಬಹಿರಂಗಪಡಿಸಿದರು.

ಕೊನೆ ಹಂತದ ಮೂತ್ರಪಿಂಡ ರೋಗ ಎನ್ನಲಾದ ತೀವ್ರತರ ರೋಗದಿಂದಾಗಿ ಮೂತ್ರಪಿಂಡವು ದೇಹದ ದ್ರವಗಳಿಂದ ತ್ಯಾಜ್ಯಗಳನ್ನು ಶುದ್ಧೀಕರಿಸಲು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ರಕ್ತವನ್ನು ಕೃತಕವಾಗಿ ಶುದ್ಧಪಡಿಸಲು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹೊಸ ಸಾಧನದಿಂದ ಈ ಎಲ್ಲ ಸಮಸ್ಯೆಗಳುಪರಿಹಾರವಾಗಲಿದೆ ಎಂದು ಹೇಳಲಾಗಿದೆ.

ಕೃಪೆ:ವಾರ್ತಾಭಾರತಿ

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...