ಪಾಲಕ್ಕಾಡ್: ಮಿತಿಮೀರಿದ ಬೀದಿನಾಯಿ ಹಾವಳಿ, ಆರು ತಿಂಗಳ ಹಸುಳೆಯ ಸಹಿತ ಮೂವರ ಮೇಲೆ ಧಾಳಿ

Source: so english | By Arshad Koppa | Published on 28th August 2016, 8:11 AM | National News |

ಪಾಲಕ್ಕಾಡ್, ಆ ೨೮: ಬೀದಿನಾಯಿಗಳ ಧಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಮೂವರಿಗೆ ಗಾಯಗಳಾಗಿವೆ. ಒಂದು ಮಗು ಇನ್ನೂ ಕೇವಲ ಆರು ತಿಂಗಳ ಹಸುಳೆಯಾಗಿದೆ. ಪಾಲಕ್ಕಾಡ್ ಜಿಲ್ಲೆಯ ಗ್ರಾಮದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಇತ್ತೀಚಿನ ದಿನಗಳಲ್ಲಿ ಜೀವನವೇ ದುಸ್ತರವಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. 

ಮಗುವಿನ ಸ್ನಾನ ಮಾಡಿಸುತ್ತಿದ್ದ ವೇಳೆಯಲ್ಲಿ ಏಕಾಏಕಿ ನಾಯಿಯೊಂದು ಮಗುವನ್ನು ಕಚ್ಚಿದೆ. ಕುಥುಂಬಲ್ಲಿ ಎಂಬ ನೇಕಾರರೇ ಹೆಚ್ಚಿರುವ ಗ್ರಾಮದಲ್ಲಿ ಮೂರು ವರ್ಷದ ಮಗುವನ್ನೂ ನಾಯಿಗಳು ಕಚ್ಚಿವೆ. 

ಇದೇ ಗ್ರಾಮದಲ್ಲಿ ನಲವತ್ತೈದು ವರ್ಷದ ನಾಗರಿಕರೊಬ್ಬರನ್ನೂ ನಾಯಿ ಕಚ್ಚಿದೆ. ಕಳೆದ ಆಗಸ್ಟ್ ೧೦ರಂದು ತಿರುವನಂತಪುರಂ ಬಳಿ ಅರವತ್ತೈದು ವರ್ಷದ ವೃದ್ದೆಯೊಬ್ಬರನ್ನು ನಾಯಿಗಳು ಕಚ್ಚಿ ಸಾವಿಗೆ ಕಾರಣವಾದ ಬಳಿಕ ನಾಯಿಕಾಟದ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಲಾಗಿತ್ತು. 

ಅಂದಿನಿಂದ ಇದುವರೆಗೆ ಕನಿಷ್ಟ ಏಳು ವ್ಯಕ್ತಿಗಳು ನಾಯಿಕಡಿತಕ್ಕೆ ಒಳಗಾಗಿದ್ದು ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಬೀದಿನಾಯಿಗಳ ನಿರ್ಮೂಲನೆ ಹಾಗೂ ಸಾಕು ನಾಯಿಗಳನ್ನು ಮನೆಯೊಳಗೇ ಕಟ್ಟಿರುವಂತೆ ಮನೆಯ ಮಾಲಿಕರಿಗೆ ತಿಳಿಸುವುದು ಇತ್ಯಾದಿಗಳಾಗಿವೆ. 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...