ಮಂಗಳುರು: ಬೈಕಂಪಾಡಿ ಜುಮಾಮಸಿದಿಯಿಂದ ಕೇರಳ ಸಂತೃಸ್ತರಿಗ ನೆರವು

Source: sonews | By sub editor | Published on 29th August 2018, 11:55 PM | Coastal News | Don't Miss |

ಮಂಗಳೂರು: ಬೈಕಂಪಾಡಿಯ ಮೊಹಿಯುದ್ದಿನ್ ಜುಮ್ಮಾ ಮಸ್ಜಿದ್‌ನಿಂದ ಕೇರಳ ಪ್ರವಾಹ ಪೀಡಿತರಿಗಾಗಿ ಆಹಾರ ಸಾಮಗ್ರಿ ಹಾಗೂ ದಿನ ಬಳಕೆಯ ಸಾಮಗ್ರಿಗಳನ್ನು ಒಳಗೊಂಡ ಪರಿಹಾರ ಕಿಟ್‌ಗಳನ್ನು ಮಸೀದಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ನೇತೃತ್ವದಲ್ಲಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಅಜಯ್ ಕುಮಾರ್, ಡಿಆರ್‌ಯುಸಿಸಿ ಸದಸ್ಯ ಎಂ.ಅಹ್ಮದ್ ಬಾವ, ಮಸೀದಿ ಪ್ರಧಾನ ಕಾರ್ಯದರ್ಶಿ ಸೈದುದ್ದೀನ್, ಸದಸ್ಯರಾದ ಇಲ್ಯಾಸ್ ಅಂಗರಗುಂಡಿ, ಕಬೀರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.

Read These Next