ವಿಶೇಷ ಲೇಖನ: ವಿಶ್ವ ಕಾರ್ಮಿಕ ದಿನಾಚರಣೆ

Source: jadish vaddina | By Arshad Koppa | Published on 29th April 2017, 10:59 AM | Special Report | Don't Miss |

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ 1889 ಮೇ 1 ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. 1889 ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1 ನೇಯ ದಿನಾಂಕವನ್ನು ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು.
    ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20 ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿಸಿದಾಗಿನಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣ ಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚಿಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳು ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927 ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಿಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲಿಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934 ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರು ಅನೇಕ ಮುಷ್ಕರಗಳು ನಡೆದವು. ಎರಡನೇಯ ಮಹಾಯುದ್ಧದ ನಂತರ ಆದಿನವನ್ನು ಹೆಚ್ಚು ವ್ಯಾಪಕವಾಗಿ, ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರು ಕಾರ್ಮಿಕ ಸಂಘಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969 ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳು ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣ ಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣ ಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.

ಕಾರ್ಮಿಕ ಸಂಘಗಳ ಕಲಾಪಗಳು
ಚಳವಳಿ:- ಕಾರ್ಮಿಕರಿಗೆ ತಕ್ಕ ಕೂಲಿಯನ್ನು ದೊರಕಿಸಿಕೊಡುವುದು. ಕಾರ್ಮಿಕರು ಉತ್ತಮ ರೀತಿಯಲ್ಲಿ ಕೆಲಸಮಾಡಲು ಬೇಕಾದ ಉತ್ತಮ ವಾತಾವರಣವನ್ನು ಉದ್ಯೋಗದಾತರು ಕಲ್ಪಸಿಕೊಡುವಂತೆ ಮಾಡುವುದು. 2) ಭ್ರಾತೃತ್ವ ಕಲಾಪಗಳು:- ತಮ್ಮ ಸದಸ್ಯರಿಂದ ಕೊಡಿಸಿ ನಿಧಿಯನ್ನು ಕಾರ್ಮಿಕ ಸಂಘಗಳು ಕಾರ್ಮಿಕರ ಸಹಾಯಾರ್ಥ ಉಪಯೋಗಿಸುತ್ತವೆ. ಕಾರ್ಮಿಕರು ಬೇನೆ ಬಿದ್ದಾಗ ಮತ್ತು ಆಕಸ್ಮಿಕಕ್ಕೆ ಒಳಗಾದಾಗ ಧನಸಹಾಯ ನೀಡಲಾಗುತ್ತದೆ. 3) ರಾಜಕೀಯ ಚಟುವಟಿಕೆಗಳು:- ಅನೇಕ ಕಾರ್ಮಿಕ ಸಂಘಗಳು ಇಂದು ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿವೆ. ರಾಷ್ಟ್ರದ ಆಡಳಿತದ ಮೇಲೆ ಪ್ರಭಾವ ಬೀರಬೇಕೆಂದು ಸಾಧ್ಯವಾದರೆ ಅದನ್ನು ವಶಪಡಿಸಿಕೊಳ್ಳಬೇಕೆಂದು ಇವು ಬಯಸುತ್ತವೆ. ಭಾರತದಲ್ಲಿ ಕಾರ್ಮಿಕ ಸಂಘಗಳ ಇಂಥ ಕಲಾಪಗಳು ತುಂಬ ಮಹತ್ವದವು. 4) ಪ್ರಚಾರ ಮತ್ತು ಶೈಕ್ಷಣ ಕ ಕಲಾಪಗಳು:- ಸ್ವದೇಶಾಭಿಮಾನ ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ದೃಷ್ಟಿ ಬೆಳೆಸಲು ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸಿವುದು. ಉದ್ಯೋಗ ದಕ್ಷತೆಯನ್ನು ಹೆಚ್ಚಿಸಲು ಶಿಕ್ಷಣ ನೀಡುವುದು. 5) ಕಾರ್ಮಿಕರಿಗಾಗಿ ವಿಮಾಯೋಜನೆ:- ಮುಪ್ಪು, ಕಾಯಿಲೆ, ವಿಕಲಾಂಗ ಮುಂತಾದ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಸಹಾಯ ನೀಡಲು ಯೋಜನೆಗಳನ್ನು ಜಾರಿಗೆ ತರುವಂತೆ ಮಾಡುವುದು. 6) ಮಹಿಳಾ ಕಾರ್ಮಿಕರ ಕಲ್ಯಾಣ ಸಾಧನೆ:- ಕಾರ್ಮಿಕ ಸಂಘಗಳ ವಿವಿದ ಮಟ್ಟಗಳಲ್ಲಿ ರಕ್ಷಣೆ ಮತ್ತು ಭದ್ರತೆ, ಸ್ತ್ರೀ ಕಾರ್ಮಿಕರ ಸಮಸ್ಯೆಗಳನ್ನು ಮತ್ತು ಅವಶ್ಯಕತೆಗಳನ್ನು ಅರಿಯಲು ಸ್ತ್ರೀ ಕಾರ್ಮಿಕರೊಂದಿಗೆ ಸಮಾಲೋಚನೆ. 7) ಉತ್ಪಾದನಾ ಕಲಾಪಗಳು:- ಸಮಾಜವಾದಿ ಸಮಾಜದಲ್ಲಿ ಉತ್ಪಾದನೆಯೊಂದೇ ಅಂತಿಮ ಗುರಿಯಲ್ಲ. ಜನರ ವಾಸ್ತವಿಕ ಮತ್ತು ಸಾಂಸ್ಕøತಿಕ ಮಟ್ಟಗಳನ್ನು ಹೆಚ್ಚಿಸುವುದು ಅಗತ್ಯ. 8) ಹಣಕಾಸು:- ಸದಸ್ಯರ ಚಂದಾ ಕ್ರೀಡೆಗಳನ್ನು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಂಪಾದನೆ. 9) ಜನೋಪಯೋಗಿ ಕಲಾಪಗಳು:- ಕಾರ್ಮಿಕ ಸಂಘಗಳು ಇಂದು ಸಾಮಾನ್ಯ ಜನರ ಉಪಯೋಗಕ್ಕಾಗಿ ಅನೇಕ ಉದ್ಯಮಗಳನ್ನು ಸಂಘಟಿಸುತ್ತಿವೆ.


ಕಾರ್ಮಿಕ ಕಾಯಿದೆ ಕಾನೂನುಗಳು:- ಇತರರ ಅಧೀನದಲ್ಲಿ, ಎಂದರೆ ತಮ್ಮ ನೇಮಕದಾರರ, ಉದ್ಯೋಗದಾತರ, ಧಣ ಗಳ ಅಥವಾ ಯಜಮಾನರ ಕೈಕೆಳಗೆ, ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಎಲ್ಲ ಕಾನೂನುಗಳು (ಲೇಬರ್ ಲಾಸ್). ಇವನ್ನು ಕೈಗಾರಿಕಾ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದು ಕರೆಯುವುದುಂಟು. ಕಾರ್ಮಿಕ ಕಾನೂನುಗಳು ನಿಷ್ಪಕ್ಷದೃಷ್ಟಿ, ನೀತಿಪಾಲನೆ, ಅಂತರಾಷ್ಟ್ರೀಯ ಏಕರೂಪತೆ,  ಜನತೆಯ ಆರ್ಥಿಕ, ಆಡಳಿತ ಇವು ಕಾರ್ಮಿಕ ಕಾನೂನುಗಳಿಗೆ ಆಧಾರಭೂತವಾದ ತತ್ವಗಳು.
    1881 ರಲ್ಲಿ ಜಾರಿಗೆ ಬಂದ ಭಾರತೀಯ ಕಾರ್ಖಾನೆಗಳ ಕಾಯಿದೆ ಅತ್ಯಂತ ಪ್ರಾಚೀನವಾದದ್ದು. 1948 ರಲ್ಲಿ ಜಾರಿಗೆ ಬಂದ ಕಾರ್ಖಾನೆಗಳ ಕಾಯಿದೆ ಅತ್ಯಂತ ವ್ಯಾಪಕವಾಗಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಆರೋಗ್ಯ, ಸುರಕ್ಷಣೆ, ಕಲ್ಯಾಣ, ವಯಸ್ಕರ ಕೆಲಸದ ಅವಧಿ, ಕಿರಿಯರ ನೇಮಕ ಕೂಲಿಸಹಿತ ರಜಾ ನೀಡಿಕೆ ಮುಂತಾದ ನಾನಾ ವಿಚಾರಗಳನ್ನು ಕುರಿತು ನಿಬಂಧನೆಗಳಿವೆ.
    ಕಾರ್ಮಿಕರ ನಷ್ಟ ಪರಿಹಾರ ಕಾಯಿದೆ :- 1923 ರಲ್ಲಿ ಕಾರ್ಮಿಕನಿಗೆ ತೊಂದರೆಯಾಗದಂತೆ ನೆಮ್ಮದಿ ಭಂಗವಾಗದಂತೆ, ಅವನ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಕಾರ್ಖಾನೆಯ ಕಾಯಿದೆ ಮತ್ತು ಅಂಥ ಇತರ ಕಾಯಿದೆಗಳ ಉದ್ದೇಶ.
    ಕೂಲಿ ಪಾವತಿ ಕಾಯಿದೆ : 1936 ರಲ್ಲಿ ಕಾರ್ಖಾನೆಗಳ ಅಥವಾ ರೈಲ್ವೆಗಳ ಉದ್ಯೋಗಿಗಳಿಗೆ ಕೂಲಿ ಪಾವತಿ ಮಾಡಬೇಕಾದ ಸಮಯ ಮತ್ತು ವಿಧಾನಗಳನ್ನು ನಿಬಂಧಿಸುವುದು ಇದರ ಉದ್ದೇಶ. 
ಕನಿಷ್ಠ ಕೂಲಿ ಕಾಯಿದೆ:- 1948 ರಲ್ಲಿ ವಿವಿಧ ಉದ್ಯೋಗಗಳಲ್ಲಿ ಪಾವತಿ ಮಾಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿ ಮಾಡಲು ಈ ಕಾಯಿದೆಯಿಂದ ರಾಜ್ಯ ಸರ್ಕಾರಗಳಿಗೆ ಅಧಿಕಾರ ದತ್ತವಾಗಿದೆ.
ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ:- 1948 ರಲ್ಲಿ ಉದ್ಯೋಗಿಗಳ ಕಾಯಿಲೆ, ಪ್ರಸೂತಿ, ಅಂಗಹಾನಿ, ಅವಲಂಬಿಗಳು, ವೈದ್ಯಕೀಯ ಪರೀಕ್ಷಣ ಮುಂತಾದವಕ್ಕಾಗಿ ಸೌಲಭ್ಯ ನೀಡುವುದು.
ಉದ್ಯೋಗಿಗಳ ಭವಿಷ್ಯನಿಧಿಗಳ ಕಾಯಿದೆ:- 1952 ರಲ್ಲಿ ಯಾವುದೇ ಸ್ಥಾಪನದ ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಪ್ರಾರಂಬಿಸುವುದು.
ಕೈಗಾರಿಕಾ ವಿವಾದಗಳ ಕಾಯಿದೆ:- 1947 ರಲ್ಲಿ ನೇಮಕದಾರರಿಗೂ ಉದ್ಯೋಗಿಗಳಿಗೂ ನಡುವೆ ವಿವಾದ ಉದ್ಭವಿಸದಂತೆ ತಡೆಯುವುದು ಒಂದು ವೇಳೆ ಉದ್ಭವಿಸಿದರೆ ಅದನ್ನು ಇತ್ಯರ್ಥಪಡಿಸುವುದು ಈ ಕಾಯಿದೆಯ ಉದ್ದೇಶ.
ಭಾರತದಲ್ಲಿ ಕಾರ್ಮಿಕ ಸಂಘಗಳ ಕೆಲವು ನ್ಯೂನತೆಗಳು:-
ಹೊರಗಿನವರ ಪ್ರಭಾವ, 2) ರಾಜಕೀಯ ಸಂಘಟನೆ, 3) ಕಾರ್ಮಿಕ ಸಂಘಗಳಲ್ಲಿ ಸಂಖ್ಯಾ ಬಾಹುಳ್ಯ ಮತ್ತು ಸ್ಪರ್ಧೆ  4) ಕಲ್ಯಾಣ ಕಾರ್ಯಕ್ರಮಗಳ ಕೊರತೆ, 5) ಸಾಮೂಹಿಕ ಚೌಕಸಿಯ ದೌರ್ಬಲ್ಯ, 6) ಹಣದ ಅಭಾವ 7) ಸದಸ್ಯತ್ವದ ಅವ್ಯವಸ್ಥೆ, 8) ಸಡಿಲವಾದ ಸಂಘಟನೆ, 9) ಔದ್ಯೋಗಿಕ ಸಂಭಂಧಗಳ ವಿಷಯದಲ್ಲಿ ಸರ್ಕಾರದ ಮೇಲೆ ಹೆಚ್ಚಾಗಿ ಅವಲಂಬನೆ.
ಈ ತೊಡಕುಗಳಿಗೆ ಮುಖ್ಯ ಕಾರಣಗಳೆಂದರೆ ಕಾರ್ಮಿಕರ ಅಜ್ಞಾನ ಮತ್ತು ದಾರಿದ್ರ್ಯ, ಭಾರತದ ಕಾರ್ಮಿಕ ಸಂಘಗಳ ಅಧಿಕ ಸಂಖ್ಯಾತರು ಅನಕ್ಷರಸ್ಥರು, ಬಡವರು.
ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋಧÀನ ಮತ್ತು ನಮ್ಮ ದೇಶದ ಬೆನ್ನೆಲುಬಾಗಿ ಅನ್ನದಾತನ ಗೌರವ ಪ್ರತಿಷ್ಠೆಗಳನ್ನು “ಜೈ ಜವಾನ, ಜೈ ಕಿಸಾನ್” ಘೋಷಣೆಯ ಮೂಲಕ ಅವರಲ್ಲಿ ಆತ್ಮ ಗೌರವವನ್ನು ಹೆಚ್ಚಿಸಿದ ವiಹಾನ್ ಚೇತನ ಲಾಲ್ ಬಹಾದ್ದೂರ್ ಶಾಸ್ತ್ರಿ. ಆದರೆ ಈಗ ನಮ್ಮ ದೇಶ ಔದ್ಯಮೀಕರಣ ಆಗಿದ್ದರಿಂದ ಕಾರ್ಮಿಕರಲ್ಲಿ ಗೌರವ ಪ್ರತಿಷ್ಠೆಗಳನ್ನು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ “ಜೈ ಜವಾನ್, ಜೈ ಕಿಸಾನ್, ಜೈ ಮಜದೂರ” ಎಂದರೆ ತಪ್ಪಿಲ್ಲ. 

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊಬೈಲ್: 9632332185

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...