ಕಾರವಾರ:ಮಾನವನ ಆರೋಗ್ಯ ಕಾಪಾಡುವುದರಲ್ಲಿ ರಕ್ತ ಪ್ರಮುಖ ಪಾತ್ರ ವಹಿಸುತ್ತದೆ.

Source: shabbir | By Arshad Koppa | Published on 13th August 2017, 11:29 AM | State News |

ಕಾರವಾರ: ರಕ್ತವು ಮಾನವನ ದೇಹದಲ್ಲಿ ಹರಿಯುವ ಬಹು ಮುಖ್ಯವಾದ ವಸ್ತು. ದೇಹದ ಆರೋಗ್ಯವು ರಕ್ತವನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪಿನ ಬಗ್ಗೆ ಅರಿವು ಇರಬೇಕು. ಆಝಾದ್ ಯುಥ್ ಕ್ಲಬ್ ಇಂತಹ ರಕ್ತದ ಗುಂಪಿನ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಪ್ರೊಬೇಶನರಿ ಐ.ಎ.ಎಸ್.ಅಧಿಕಾರಿಗಳಾದ ಡಾ.ಕೆ.ಆನಂದರವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್‍ದವರು ಸಂಯುಕ್ತವಾಗಿ ಜಿನೀವಾ ಒಪ್ಪಂದದ ಸ್ಮರಣಾರ್ಥ ಶಿವಾಜಿ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಪಿ.ಯು.ಕಾಲೇಜು ಬಾಡದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ರಕ್ತದ ಗುಂಪು ತಪಾಸಣಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮ್ಕಕಳನ್ನು ಉದ್ದೇಶಿಸಿ ಮಾತನಾಡಿದರು. ಜೊತೆಗೆ ರೆಡ್ ಕ್ರಾಸ್ ಸಂಸ್ಥೆಯು ಇಂತಹ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜಿನೀವಾ ಒಪ್ಪಂದದ ಮೂಲಕ ಈ ಸಂಸ್ಥೆಯು ಪ್ರಾರಂಭವಾಗಿದ್ದು ಎಲ್ಲಾ ರಾಷ್ಟ್ರಗಳಲ್ಲಿಯೂ ಇದರ ಪಾತ್ರ ಮಹತ್ವದ್ದು ಎಂದು ಹೇಳಿದರು. 


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎ.ಜಿ.ಕೆರಳಿಕರ್‍ರವರು ಜಿನೇವಾ ಒಪ್ಪಂದದ ಬಗ್ಗೆ ಹಾಗೂ ರಕ್ತದ ಗುಂಪು ತಪಾಸಣೆಯ ಕುರಿತು ವಿವರವಾಗಿ ತಿಳಿಸಿದರು.  ಇನ್ನೋರ್ವ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್‍ರವರು ಉಪಸ್ಥಿತರಿದ್ದು ಯುವಜನರು ತಮ್ಮ ರಕ್ತದ ಗುಂಪನ್ನು ಮೊದಲೇ ತಿಳಿದುಕೊಂಡಿದ್ದಲ್ಲಿ ಮುಂದೆ ತುರ್ತುಪರಿಸ್ಥಿತಿಯಲ್ಲಿ ಸಹಾಯಕವಾಗುತ್ತದೆ. ಆದ್ದರಿಂದ ತಾವು ರಕ್ತದ ಗುಂಪನ್ನು ತಪಾಸಣೆಮಾಡುವ ಕಾರ್ಯಕ್ರಮಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಎಸ್.ರಾಣೆ ರವರು ವಿದ್ಯಾರ್ಥಿಗಳಿಗೆ ರಕ್ತದ ಗುಂಪಿನ ಬಗ್ಗೆ ತಿಳಿಸಿ, ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲು ತಿಳಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎ.ಜಿ.ಕೆರಳಿಕರ್‍ರವರು ಅಧ್ಯಕ್ಷತೆಯನ್ನು ವಹಿಸಿ ಜಿನೇವಾ ಒಪ್ಪಂದದ ಬಗ್ಗೆ ಹಾಗೂ ರಕ್ತದ ಗುಂಪು ತಪಾಸಣೆಯ ಕುರಿತು ವಿವರವಾಗಿ ತಿಳಿಸಿದರು. 
  ಇದೇ ಸಂದರ್ಭದಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಮಕ್ಕಳಿಗೆ ರಕ್ತದ ಗುಂಪು ತಪಾಸಣೆಯನ್ನು ಮಾಡಲಾಯಿತು. ಬ್ಲಡ್ ಟೆಕ್ನೀಶಿಯನ್ ಶೋಭಾ ಹಡಗಿನಮನೆ ಹಾಗೂ ಪ್ರಿಯಾಂಕಾ ಪೆಡ್ನೇಕರ್ ರವರು ರಕ್ತದ ಗುಂಪನ್ನು ತಪಾಸಣೆ ಮಾಡಿದರು. ಪ್ರಾರಂಭದಲ್ಲಿ ಪ್ರೊ.ಜ್ಯೋತ್ಸನಾ ರವರು ಸ್ವಾಗತಿಸಿದರು ಕುಮಾರಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ.ತಾರಾನಾಥ ಹರಿಕಂತ್ರರವರು ಉಪಸ್ಥಿತರಿದ್ದರು. ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಹಾಗೂ ಜಂಟಿ ಕಾರ್ಯದರ್ಶಿ ನೂತನ ಜೈನ್‍ರವರು ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.  

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...