ಸಕಾಲದಲ್ಲಿ ಅನುದಾನ ಸದ್ಬಳಕೆಯಾಗಲಿ : ಜಯಶ್ರೀ ಮೋಗೇರ 

Source: sonews | By Staff Correspondent | Published on 11th December 2017, 6:39 PM | Coastal News | Don't Miss |

ಕಾರವಾರ: ಜಿಲ್ಲೆಗೆ ಮಂಜೂರಾಗಿರುವ ಅನುದಾನವನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಂಡು ಜಿಲ್ಲೆಯನ್ನು ಪ್ರಗತಿ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸದರು. 

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲಿಸಿ ಮಾತನಾಡಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ, ಉಳಿದ ಕಾಮಗಾರಿಗಳನ್ನು ಚುನಾವಣೆ ಅಧಿಸೂಚನೆ ಹೊರಡಿಸುವ ಮುನ್ನ ಪ್ರಾರಂಬಿಸಿ ಜಿಲ್ಲೆಗೆ ಹೊದಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಎಲ್ಲ ಇಲಾಖೆಗಳ ಅಧಿಕಾರಿಗಳು ಮಾರ್ಚ ಕೊನೆಯ ವಾರದೊಳಗೆ ತಮ್ಮ ತಮ್ಮ ಇಲಾಖೆಗಳಿಗೆ ಸಂ¨ಂಧಿಸಿದ ಖರ್ಚು- ವೆಚ್ಚಗಳ ವಿವರವನ್ನು ಜಿಲ್ಲಾ ಖಜಾನೆ ಇಲಾಖೆಗೆ ಸಲ್ಲಿಸಿ ಯಾವುದೇ ಅನುದಾನ ಹಿಂತುರಗದಂತೆ ಮಾಡಬೇಕು ಎಂದು ತಿಳಿಸಿದರು. 
 ಸಾರ್ವಜನಿಕ ಶಿಕ್ಷಣ ಇಲಾಖೆ ; ಪಿಠೋಪಕರಣಗಳಿಗೆ ಸಂಬಂಧಿಸಿದ ಕಳೆದ ವರ್ಷದ ಅನುದಾನ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನೂ ಬಳಕೆಯಾಗಿಲ್ಲ, ಶೀಘ್ರವಾಗಿ ಪಿಠೋಪಕರಣಗಳನ್ನು ಖರೀದಿಸಿ ಜನಪ್ರತಿನಿದಿಗಳ ಸಮುಮುಖದಲ್ಲಿ ವಿತರಿಸುವ ಕಾರ್ಯವನ್ನು ಮಾಡಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ತಿಪ್ಪಣ್ಣ ಪಾಟೀಲ ಅವರು ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗೆ ಹೇಳಿದರು. 
ಫಲಾನುಭವಿಗಳಿಗೆ ಮಾಹಿತಿ ನೀಡಲಿ : ಸರಕಾರದ ವಿವಿಧ ಯೋಜನೆಯಡಿ ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕುಗಳಿಗೆ ತೆರಳಿದಾಗ ಬ್ಯಾಂಕ ವ್ಯವಸ್ಥಾಪಕರು ಸೆಕ್ಯೂರಿಟಿ ಮತ್ತು ಇನ್ನಿತರ ದಾಖಲೆಗಳಿಗಾಗಿ ಬಡ ಫಲಾನುಭವಿಗಳನ್ನು ಅಲೆದಾಡಿಸುವದರಿಂದ ಎಲ್ಲಾ ಬ್ಯಾಂಕುಗಳು ಫಲಾನುಭವಿಗಳು ಎಲ್ಲಿಯವರೆಗೆ ಸಾಲ ಪಡೆಯಲು ಸೆಕ್ಯೂರಿಟಿ ಅವಶ್ಯಕತೆ ಇದೆ ಅಥವಾ ಇರುವದಿಲ್ಲ ಹಾಗೂ ಬೇಕಾಗುವ ದಾಖಲೆಗಳಾವವು ಎಂಬ ಮಾಹಿತಿಯನ್ನು ಬ್ಯಾಂಕುಗಳು ನೀಡಬೇಕು ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಹೇಳಿದರು. 
ಕೃಷಿ ಇಲಾಖೆ :ಜಿಲ್ಲೆಯಲ್ಲಿ  ಬೆಳೆ ವಿಮೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ರೈತರು ಹಿಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಡಿಸೆಂಬರ 31 ಕೊನೆಯ ದಿನವಾಗಿರುತ್ತದೆ. 35 ಕ್ವೀಂಟಾಲ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 3350 ರಸಗೊಬ್ಬರ ದಾಸ್ತಾನು ಇದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು. 
 ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಆಡಳಿತ) ಆರ್.ಜಿ.ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಲಕ್ಷಣ ಟಿ.ಪಾಟೀಲ, ಕನ್ನಡ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು  
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...