ಗ್ರಾಹಕ ರಕ್ಷಣಾ ಕಾಯಿದೆ ಸದ್ಬಳಕೆಯಾಗಲಿ : ಚಂದ್ರಶೇಖರ ನಾಯಕ 

Source: S O News service | By Staff Correspondent | Published on 22nd March 2017, 6:08 PM | Coastal News | Don't Miss |

ಕಾರವಾರ: ಗ್ರಾಹಕರ ಹಿತರಕ್ಷಣಾ ಕಾಯಿದೆ ೧೯೮೬ ಇತರೆ ಕಾಯಿದೆಗಳಂತೆ ಶಕ್ತಿಯುತವಾಗಿದ್ದು ಗ್ರಾಹಕರು ಮೋಸ ಹೋದಾಗ ಗ್ರಾಹಕರ ಹಿತರಕ್ಷಣಾ ಕಾಯಿದೆ ಅನ್ವಯ ಪರಿಹಾರ ಪಡೆಯಬಹುದು. ಗ್ರಾಹಕರು ಜಾಗೃತರಾಗಿ ಕಾಯಿದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ  ಹೇಳಿದರು.

ಅವರು ಬುಧವಾರ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,   ಗ್ರಾಹಕರು ಮೋಸ ಹೊದಾಗ ದೂರನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕೆಂಬ ಗೊಂದಲಗಳಿಂದ ದೂರನ್ನು ಸಲ್ಲಿಸುವದಿಲ್ಲ. ಗ್ರಾಹಕ ವೇದಿಕೆಯು ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಶೇ. ೯೦ ರಷ್ಟು ಗ್ರಾಹಕರ ಪರವಾಗಿ ಪ್ರತಿಕ್ರಿಯಿಸುತ್ತದೆ ಗ್ರಾಹಕ ಹಿತರಕ್ಷಣಾ ಕಾಯಿದೆ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿಯಾಗಬೇಕಿದೆ ಎಂದು ಹೇಳಿದರು. 

ಗ್ರಾಹಕ ಜಾಗೃತಿ ಕುರಿತು ಉಪನ್ಯಾಸ ನೀಡಿದ ದಿವೇಕರ್ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಕೇಶವ ಭಟ್  ಅವರು ಮಾತನಾಡಿ, ಇಂದಿನ ಮಾರುಕಟ್ಟೆ ಡಿಜಿಟಲ್ ಮಾರುಕಟ್ಟೆಯಾಗಿ, ಆನ್ ಲೈನ್ ವ್ಯವಹಾರ ಮಾಡಲು ಯುವ ಜನರು ಉತ್ಸುಕರಾಗಿರುತ್ತಾರೆ. ಇಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ಮೋಸ ಹೊದ ನಿದರ್ಶನಗಳಿವೆ. ಆದ್ದರಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರು ಜಾಗೃತರಾಗಿರುವದು ಅವಶ್ಯಕಾಗಿರುತ್ತದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಗ್ರಾಹಕರೆ ಪ್ರಭುಗಳು.  ಗ್ರಾಹಕರು ಜಾಗೃತರಾದಾಗ ವ್ಯಾಪಾರಿಗಳು ಅವರಿಗೆ ಮೋಸ ಮಾಡಲು ಸಾದ್ಯವಾಗುವದಿಲ್ಲ. ಗ್ರಾಹಕರು ಎಚ್ಚರವಾಗಿರುವದನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಯಿಂದ ತೂಕ ಮತ್ತು ಅಳತೆಗಳ ವಸ್ತು ಪ್ರದರ್ಶನವನ್ನು  ಪ್ರದರ್ಶಿಸಲಾಯಿತು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾವ್ಯ ಇಲಾಖೆಯ ಉಪನಿರ್ದೇಶಕ ಬಿ.ರಘುನಾಥ ಸ್ವಾಗತಿಸಿದರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್.ವಿ.ಬಾಸ್ಕರ ರಾವ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ್ ವಿ.ಎಮ್.ಹೆಗಡೆ  ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಉದಯ ಎನ್ ನಾಯ್ಕ ಉಪಸ್ಥಿರಿದ್ದರು. 


ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ  ಮಾರ್ಚ ೨೫ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.                              

ಮಾ.೨೫ ರಂದು ಮದ್ಯಾಹ್ನ ೨ ಗಂಟೆಗೆ ಹಳಿಯಾಳ ಆಗಮಿಸಿ, ಸಾರ್ವಜನಿಕ ಮತ್ತು ಅಧಿಕಾರಿಗಳನ್ನು ಬೇಟಿ ಮಾಡುವರು. ಮದ್ಯಾಹ್ನ ೩ ರಿಂದ.೪.೩೦ ವರೆಗೆ  ಹಳಿಯಾಳ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡುವರು. ಸಂಜೆ ೫ ಗಂಟೆಗೆ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮ Uಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ಪ್ರತಿಬಂದ ಅದಿನಿಯಮ ೧೯೮೯ರಡಿ ಅನುಷ್ಟಾನಗೊಳಿಸುವ ವಿಚಾರ ಸಂಕೀರಣದಲ್ಲಿ ಪಾಲ್ಗೊಳ್ಳುವರು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕಿರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ ೭ ಗಂಟೆಗೆ ಅಲ್ಲೊಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು. ನಂತರ ಹಳಿಯಾಳ ವಾಸ್ತವ್ಯ. ಮಾ.೨೬ ರಂದು ಬೆಳಗ್ಗೆ  ೮ ಗಂಟೆಗೆ  ಹಳಿಯಾಳದಿಂದ ನಿರ್ಗಮಿಸಿ ಹುಬ್ಬಳ್ಳಿಗೆ ಹೊರಡುವರು.

                  ಉದ್ಯೋಗ ಖಾತ್ರಿ ದೂರುಗಳ ವಿಚಾರಣೆ 
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಕುರಿತು ಬಂದ  ದೂರುಗಳ ವಿಚಾರಣೆಯನ್ನು ಮಾರ್ಚ ೨೧ ರಂದು ಜೋಯಿಡಾ ತಾಲೂಕು ಪಂಚಾಯತ ಕಚೇರಿಯಲ್ಲಿ  ಪ್ರಭಾರಿ ಒಂಬುಡ್ಸಮನ್ ಡಾ.ಎ.ಜೆ..ದುಮಾಳೆ ಅವರು ನಡೆಸಿದರು.
ಇದೇ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಪ್ರಧಾನಿ  ಗ್ರಾಮ ಪಂಚಾಯತ್ ವಿರುದ್ದ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ವಿರಣೆಯನ್ನು ಪಿ.ಡಿ.ಒ ಹಾಗೂ ದೂರುದಾರರ ಲಿಖಿತ್ ಹಾಗೂ ಮೌಖಿಕವಾದ ವಾದವನ್ನು ಆಲಿಸಿ ಪ್ರಕರಣವನ್ನು ಆದೇಶಕ್ಕಾಗಿ ಕಾಯ್ದಿರಿಸಿದರು.  
ಮಾರ್ಚ ೨೨ ರಂದು ಕಾರವಾರ ಜಿಲ್ಲಾ ಪಂಚಾಯತದಲ್ಲಿ ಅಂಕೋಲಾ ತಾಲೂಕಿನ ಶೇಟಗೇರಿ ಗ್ರಾಮ ಪಂಚಾಯತ್ ವಿರುದ್ದ ದೂರಿನ ವಿಚಾರಣೆ ನಡೆಸಿ ದೂರುದಾರ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿ.ಡಿ.ಒ ವಾದವನ್ನು ಆಲಿಸಿ ಪ್ರಕರಣದ ತನಿಖೆಯನ್ನು ಜಿಲ್ಲಾ ಗುಣನಿಯಂತ್ರಣ ಇವರಿಂದ ತಾಂತ್ರಿಕ್ ವರದಿಯನ್ನು ಪಡೆಯಲು ಆದೇಶಿಸಿದರು. ಮತ್ತು ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್‌ದ ದೂರಿನ ಕುರಿತು ದೂರುದಾರರು ಗೈರು ಹಾಜರಾಗಿದ್ದರು. ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೌಖಿಕ ವಾದವನ್ನು ಆಲಿಸಿ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಯಿತು. 
ಗ್ರಾಮೀಣ ಕೂಲಿಕಾರರಿಗೆ ಅಗತ್ಯ ಉದ್ಯೋಗ ನೀಡಿವದರೊಂದಿಗೆ ಗುಣಮಟ್ಟ ಕಾಯ್ದುಕೊಂಡು ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಂದು ಪ್ರಬಾರಿ ಓಂಬುಡ್ಸಮನ್ ತಿಳಿಸಿದರು.

ಆಧಾರ ಸಂಖ್ಯೆ ಕಡ್ಡಾಯ 
ಕಾರವಾರ: ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟಕರ ಮರುಪಾವತಿ ಯೋಜನೆಯಡಿ ಸಹಾಯಧನ ಪಡೆಯಲು ದೋಣಿಗಳ ಮಾಲಿಕರು ಆಧಾರ ಸಂಖ್ಯೆ ಹೊಂದಿರುವದು ಕಡ್ಡಾಯಗೊಳಿಸಲಾಗಿದ್ದು ಮಾರ್ಚ ಅಂತ್ಯದೊಳಗಾಗಿ ಇಲಾಖೆಯ ಡೀಸೆಲ್ ಸಹಾಯಧನ ತಂತ್ರಾಂಶದಲ್ಲಿ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು, ಮತ್ತು ಎಲ್ಲಾ ದೋಣಿ ಮಾಲಿಕರು ಸಂಂಧಪಟ್ಟ ತಾಲೂಕಗಳ ಮೀನುಗಾರಿಕಾ ಸಹಾಯಕ ನಿರ್ದೇಶಕರು(ಶ್ರೇ-೨) ಕಛೇರಿಯಲ್ಲಿ ತಕ್ಷಣವೇ ಆಧಾರ ಸಂಖ್ಯೆಯನ್ನು ನೀಡುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...