ಯಲ್ಲಾಪುರ ಸಾರಿಗೆ ಘಟಕದಿಂದ ನೂತನ ಸಾರಿಗೆ ಸೇವೆ ಪ್ರಾರಂಭ

Source: sonews | By sub editor | Published on 19th February 2018, 11:40 PM | Coastal News | Don't Miss |

ಕಾರವಾರ: ಯಲ್ಲಾಪುರ ಸಾರಿಗೆ ಘಟಕದಿಂದ ಯಲ್ಲಾಪುರ-ಮಂಗಳೂರು- ದೇರಳಕಟ್ಟೆ ಗೆ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆ ಪ್ರಾರಂಭಿಸಲಾಗಿದೆ. 

ಈ ಸಾರಿಗೆಯು ಯಲ್ಲಾಪುರದಿಂದ ಶಿರಸಿ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ದೇರಳಕಟ್ಟೆಗೆ ಸಂಚರಿಸುತ್ತದೆ.. ಪ್ರತಿ ದಿನ ರಾತ್ರಿ 8 ಗಂಟೆಗೆ ಯಲ್ಲಾಪುರದಿಂದ ಹೊರಟು ಬೆಳಗ್ಗೆ 4.45 ಕ್ಕೆ ದೇರಳಕಟ್ಟೆ ತಲುಪುವುದು ಹಾಗೂ ದೇರಳಕಟ್ಟೆಯಿಂದ ರಾತ್ರಿ 9.15 ಕ್ಕೆ ನಿರ್ಗಮಿಸಿ ಬೆಳಗ್ಗೆ 6.15 ಕ್ಕೆ ಯಲ್ಲಾಪುರ ತಲುಪಲಿದೆ ಎಂದು ವಾ.ಕ.ರ.ಸಾ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅರ್ಜಿ ಆಹ್ವಾನ 
ಕಾರವಾರ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿ ಸಲ್ಲಿಸಲು ಮಾರ್ಚ 18 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಬಯಸುವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿರಬೇಕು. 18 ರಿಂದ 60 ವರ್ಷ ವಯೋಮಾನದೊಳಗಿರಬೇಕು. 

ಅರ್ಜಿ ನಮೂನೆಯನ್ನು ಜಿಲ್ಲಾ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕಛೇರಿಯಿಂದ ಪಡೆದು ಜಾತಿ ಪ್ರಮಾಣ ಪತ್ರ, ಬ್ಯಾಂಕ ಪಾಸ್ ಬುಕ್, ರೇಶನ್ ಕಾರ್ಡ ಆಧಾರ ಕಾರ್ಡ, ಆಧಾಯ ಪತ್ರ, ಫೋಟೊ, ಇತ್ಯಾದಿ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ,  ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃಧ್ಧಿ ನಿಗಮ ನಿಯಮಿತ ಹಳೆ ಜಿಲ್ಲಾ ಪಂಚಾಯತ್ ಕಟ್ಟಡ, ತಹಶಿಲ್ದಾರ ಕಚೇರಿ ಹಿಂಬಾಗ ಕಾರವಾರ ಇಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಟ್ಟದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ತಾಲೂಕು ಮಟ್ಟದಲ್ಲಿ ನಿಗಮದ ತಾಲೂಕು ಮಟ್ಟದಲ್ಲಿ ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ದೂರವಾಣಿ ಸಂಖ್ಯೆ, 083382-226903 ಸಂಪರ್ಕಿಸಬಹುದು.   

ಅಹವಾಲು ಸ್ವೀಕಾರ ದಿನಾಂಕ ಬದಲು
ಕಾರವಾರ: ಕರ್ನಾಟಕ ಲೋಕಾಯುಕ್ತ, ಕಾರವಾರ ಘಟಕದ ಪೊಲೀಸ್ ಅಧಿಕಾರಿಗಳು ಫೆ. 21 ರಂದು ಕುಮಟಾದಲ್ಲಿ ಸಾರ್ವಜನಿಕರಿಂದ ಅಹವಾಲು ದಿನಾಂಕವನ್ನು ರದ್ದುಗೊಳಿಸಿ, ಫೆ. 23 ರಂದು ಬೆಳಗ್ಗೆ  11 ರಿಂದ 12-30 ಗಂಟೆಯವರೆಗೆ ಕುಮಟಾ ಪ್ರವಾಸಿ ಮಂದಿರಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಕಾರವಾರ ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


 

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...