ಬಂದೂಕು ಪರವಾನಗೆ ನವೀಕರಣ ನವೀಕರಣ ವಿಶೇಷ ಆಂದೋಲನ (ಉ.ಕ.ಜಿಲ್ಲಾ ಸಂಕ್ಷಿಪ್ತ ಸುದ್ದಿಗಳು)

Source: sonews | By Staff Correspondent | Published on 21st June 2018, 6:33 PM | Coastal News | Don't Miss |

ಬಂದೂಕು ಪರವಾನಗೆ ನವೀಕರಣ
ಕಾರವಾರ: ಜಿಲ್ಲೆಯ ಯಲ್ಲಾಪುರ ಮತ್ತು ಭಟ್ಕಳ ತಹಶೀಲ್ದಾರ ಕಾರ್ಯಾಲಯದಲ್ಲಿ ಆಯುಧ ಅನುಜ್ಞಪ್ತಿ ನವೀಕರಣ ವಿಶೇಷ ಆಂದೋಲನವನ್ನು ಜೂನ್ 28 ಮತ್ತು 29 ರಂದು ಹಮ್ಮಿಕೊಳ್ಳಲಾಗಿದೆ. 

ಭಾರತೀಯ ಆಯುಧ ಕಾಯ್ದೆ 1959 ಮತ್ತು ಭಾರತೀಯ ಅಧಿನಿಯಮ 2016 ರನ್ವಯ ಆಯುಧ ಅನುಜ್ಞಪ್ತಿ ನವೀಕರಣ ಕೋರಿ ಅರ್ಜಿಗಳು ಬರುತ್ತಿರುವ ಹಿನ್ನಲೆಯಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಆಂದೋಲನ ಮಾಡುತ್ತಿದ್ದು  ಮುಂದಿನ ಮೂರು ತಿಂಗಳಲ್ಲಿ ಅವಧಿ ಅಂತ್ಯವಾಗಲಿರುವ ಬೆಳೆ ಮತ್ತು ಸ್ವರಕ್ಷಣೆ ಆಯುಧ ಅನುಜ್ಞಪ್ತಿದಾರರು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ತಮ್ಮ ಆಯುಧ ಪರವಾನಿಗೆ ನವೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಯಲ್ಲಾಪುರ ತಹಶೀಲ್ದಾರ ಕಾರ್ಯಾಲಯದಲ್ಲಿ ಜೂನ್ 28 ಮತ್ತು ಭಟ್ಕಳ ತಹಶೀಲ್ದಾರ ಕಾರ್ಯಾಲಯದಲ್ಲಿ ಜೂನ್ 29 ಬೆಳಗ್ಗೆ 10 ರಿಂದ ಮದ್ಯಾಹ್ನ 1.30 ರವರೆಗೆ ಆಂದೋಲನ ನಡೆಯಲಿದ್ದು ಅನುಜ್ಞಪ್ತಿದಾರರು ಆಯಾ ತಹಶೀಲ್ದಾರ ಕಚೇರಿಯಲ್ಲಿ ಸಿಗಲಿರುವ ನಿಗದಿತ ನಮೂನೆ ಎ-3 ನಲ್ಲಿ ಅರ್ಜಿ, ಎ-4 ನಲ್ಲಿ ಪೊಲೀಸ್ ವರದಿ, ಎಸ್-3 ನಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಲೆಕ್ಕ ಶಿರ್ಷಿಕೆ 005500104000 ನೇದಕ್ಕೆ ಸರಕಾರಿ ಶುಲ್ಕ 1500 ರೂ ಗಳನ್ನು ಜಮಾ ಮಾಡಿ ಚಲನ ಮೂಲ ಪ್ರತಿ ಮತ್ತು ಪಹಣಿಯೊಂದಿಗೆ ಸಂಬಂಧಿತ ತಹಶೀಲ್ದಾರ ಕಚೇರಿಯಲ್ಲಿ ಸಲ್ಲಿಸಿ ಸ್ಥಳದಲ್ಲಿಯೇ ಬಂದೂಕು ಪರವಾನಗೆ ನವೀಕರಣ ಮಾಡಿಕೊಳ್ಳಬಹುದಾಗಿದೆ.

 

ತರಬೇತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ 2018-19 ನೇ ಸಾಲಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 

ತರಬೇತಿಯನ್ನು ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ 4 ವರ್ಷದವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುವುದು. 

ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿ ಜೂನ್ 30 ರೊಳಗಾಗಿ ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್‍ನ್ನು www.backwardclasses.kar.nic.in ಹಾಗೂ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ: 08382-226588 ಸಂಪರ್ಕಿಸಬಹುದಾಗಿರುತ್ತದೆ. 

ಆನ್‍ಲೈನ್ ಅರ್ಜಿ ಆಹ್ವಾನ
ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸಾಮಾನ್ಯ ಹಾಗೂ ಮಾದರಿ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ1, 2ಎ, 2ಬಿ, 3ಎ, 3ಬಿ ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2018-19 ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಬಯಸುವವರು ಇಲಾಖಾ ವೆಬ್‍ಸೈಟ್ www.backwardclassess.kar.nic.in ನ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾಗಿರುತ್ತದೆ. 
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ [email protected] ಗೆ ಹಾಗೂ [email protected]    ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :08382-226588 ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದು ಕೊರತೆ ದೂರು ಸ್ವೀಕಾರ
ಕಾರವಾರ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ನವದೆಹಲಿ ಇವರು ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ ಮತ್ತು ಕುಂದುಕೊರತೆಗಳ ಬಗ್ಗೆ ಜುಲ್ಲೈ 26 ಮತ್ತು 27  ರಂದು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣೆ ಸಭೆಯನ್ನು ನಡೆಸುವರು

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರುಗಳಿದ್ದಲ್ಲಿ ತಮ್ಮ ದೂರುಗಳನ್ನು ರಿಜಿಸ್ಟ್ರಾರ್  ರಾಷ್ಟ್ರೀಯ  ಮಾನವ ಹಕ್ಕುಗಳ ಆಯೋಗ, ಮಾನವ ಅಧಿಕಾರ ಭವನ, ಬ್ಲಾಕ್ -ಸಿ, ನವ ದೆಹಲಿ-110023. ವಿಳಾಸಕ್ಕೆ ನೊಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಜೂನ್ 30 ರೊಳಗಾಗಿ ತಲುಪುವಂತೆ ಕಳುಹಿಸಿ ಕೊಡಬೇಕು.

ದೂರುದಾರರು ದೂರುಗಳ್ನು ಆಯೋಗದ ಇ-ಮೇಲ್ ವಿಳಾಸ [email protected] ಗೆ ಅಥವಾ ಫ್ಯಾಕ್ಸ್ ನಂ.011-24651334 ಮೂಲಕ ಸಹ ಕಳುಹಿಸಬಹುದಾಗಿದೆ. ದೂರುಗದಾರರು ಸಂಕರ್ಪಕ್ಕಾಗಿ ತಮ್ಮ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸವನ್ನು ನಮೂದಿಸುವುದು. ವಿಚಾರಣೆಗೆ ಅರ್ಹವೆಂದು ಕಂಡು ಬಂದ ದೂರುಗಳನ್ನು ಸಾರ್ವಜನಿಕ ವಿಚಾರಣೆಗೆ ತೆಗೆದುಕೊಳ್ಳಲಾಗುವುದು. 

  
ಗುತ್ತಿಗೆ  ವಾಹನ ರದ್ದು
ಕಾರವಾರ ಟೆಂಡರ್ ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ  ಜಿಲ್ಲಾ ಪಂಚಾಯತದ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ  ಪ್ರಸನ್ನ ಕೇಶವ ನಾಯ್ಕ ಎಂಬುವವರಿಂದ ಪಡೆದಿದ್ದ ವಾಹನದ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ನೀಡಿ ತಿಳಿಸಿದ್ದಾರೆ. 

ಜಿಪಂ ಮುಖ್ಯ ಯೋಜನಾಧಿಕಾರಿಗೆ ಕಚೇರಿಯ ಅಧೀಕೃತ ಕೆಲಸ ಕಾರ್ಯಗಳ ಸಲುವಾಗಿ ಕೋಡಿಬಾಗದ ಪ್ರಸನ್ನ ಕೇಶವ ನಾಯ್ಕ ಎಂಬುವವರ ವಾಹನವನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿತ್ತು. ಆದರೆ ವಾಹನದ ಮಾಲೀಕರು ಕಚೇರಿಗೆ ಅಗತ್ಯವಿರುವ ವೇಳೆಯಲ್ಲಿ  ವಾಹನವನ್ನು ಒದಗಿಸದಿರುವುದು, ಕಚೇರಿಯ ಕೆಲಸ ಹೊರತುಪಡಿಸಿ ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳಿಗೆ ವಾಹನವನ್ನು ಬಳಸಿರುವುದು ಸ್ಪಷ್ಟವಾಗಿದೆ. 

ಈ ಹಿಂದೆಯೂ ವಾಹನದ ಮಾಲೀಕರಿಗೆ ಈ ಕುರಿತು ಮೌಖಿಕವಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ವಾಹನ ಮಾಲೀಕರು ತಮ್ಮ ತಪ್ಪನ್ನು ತಿದ್ದಿಕೊಂಡಿಲ್ಲ. ವಾಹನ ಹಾಗೂ ಚಾಲಕರು ಬಾಡಿಗೆ ಅವಧಿಯ ಎಲ್ಲಾ ದಿನದಲ್ಲಿ  ಕಚೇರಿಯ ಉಪಯೋಗಕ್ಕೆ  ಲಭ್ಯರಿರಬೇಕು, ಉತ್ತಮ ಗುಣ ನಡತೆ ಶುಚಿತ್ವ ಹಾಗೂ ಸಮಯ ಪಾಲನೆ ಮಾಡಬೇಕು ಎಂದು ವಾಹನವನ್ನು ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಷರತ್ತು ವಿಧಿಸಲಾಗಿತ್ತು. ಈ ಷರತ್ತುಗಳು ಉಲ್ಲಂಘನೆಯಾಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ  ಗುತ್ತಿಗೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...