ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ ಕಾರವಾರ ಶೈಕ್ಷಣಿಕ ಜಿಲ್ಲೆ 88.12% ದ್ವೀತಿಯ ಸ್ಥಾನ

Source: sonews | By sub editor | Published on 7th May 2018, 7:00 PM | Coastal News | State News | Don't Miss |

ಕಾರವಾರ : ಕಳೆದ ಮಾರ್ಚ-ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್,ಎಸ್,ಎಲ್,ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಕಾರವಾರ ಶೈಕ್ಷಣಿಕ ಜಿಲ್ಲೆ ಶೇಕಡಾ 88.12% ಪ್ರತಿಶತದೊಂದಿಗೆ ರಾಜ್ಯದಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ. 
 

ಜಿಲ್ಲೆಯಲ್ಲಿ 8942 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 7880 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುತ್ತಾರೆ. 4425 ಬಾಲಕರು ಪರೀಕ್ಷೆಗೆ ಕುಳಿತುಕೊಂಡು ಶೇ,84.67% ರಂತೆ ಒಟ್ಟು 3747 ಬಾಲಕರು ಉತ್ತಿರ್ಣರಾಗಿದ್ದಾರೆ. 4517 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿ ಶೇ.91.49% ರಂತೆ ಒಟ್ಟು 4133 ವಿದ್ಯಾರ್ಥಿನಿಯರು ಉತ್ತಿರ್ಣರಾಗುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 
 

ಜಿಲ್ಲೆಯಲ್ಲಿ ಕಾರವಾರ ತಾಲೂಕು 89.75% ಪ್ರತಿಶತದೊಂದಿಗೆ ಪ್ರಥಮ ಸ್ಥಾನ, 89.27% ಪ್ರತಿಶತದೊಂದಿಗೆ ಹೊನ್ನಾವರ ತಾಲೂಕು ದ್ವೀತಿಯ, 88.53% ಪ್ರತಿಶತದೊಂದಿಗೆ ಕುಮಟಾ ತಾಲೂಕು ತೃತಿಯ ಸ್ಥಾನ ಪಡೆದುಕೊಂಡಿವೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಪಿ.ಕೆ ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    
 

Read These Next