ಕಡಲಾಳದಲ್ಲಿ ಸಹಸ್ರಮಾನ ಮತದಾರ

Source: sonews | By Staff Correspondent | Published on 18th March 2018, 12:49 AM | Coastal News | State News | Don't Miss |

ಉತ್ತರ ಕನ್ನಡ ಜಿಲ್ಲಾಡಳಿತದಿಂದ ಹೊಸ ಮತದಾರರಿಗೆ ಸ್ಕೂಬಾ ಡೈವಿಂಗ್ ಆಕರ್ಷಣೆ

ಕಾರವಾರ : ಜನವರಿ 1, 2000ನೇ  ಇಸವಿಯಲ್ಲಿ ಜನಿÀಸಿದ ಸಹಸ್ರಮಾನ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಾರವಾರ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
  

ಶನಿವಾರ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಹಸ್ರಮಾನ ಮತದಾರರಿಗೆ ಮತದಾರ ಚೀಟಿ ವಿತರಿಸುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸಲು ವಿನೂತನ ಸಂದೇಶ ನೀಡಿದರು.
    

ಬೆಳ್ಳಂಬೆಳಗ್ಗೆ ಕಾಳಿ ಸೇತುವೆ ಸಮೀಪದ ದೇವಭಾಗ್ ರೆಸಾರ್ಟ್ ತರಬೇತಿ ಕೇಂದ್ರದಿಂದ ಅಂದಾಜು 20 ಕಿಲೋ ಮೀಟರ್ ದೂರದ ದೇವಬಾಗ ಸಮುದ್ರ ದ್ವೀಪ ಲೈಟ್‍ಹೌಸ್‍ಗೆ ತೆರಳಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರ ನೇತೃತ್ವದಲ್ಲಿ ಸಹಸ್ರಮಾನ ಮತದಾರ ತಂಡ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡಿತು.
    

ಕಡಲಾಳದಲ್ಲಿ ಸಹಸ್ರಮಾನ ಮತದಾರರಿಗೆ ಮತದಾರ ಚೀಟಿ ವಿತರಿಸಲು ಸಿದ್ಧಗೊಳಿಸಿದ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರು ಸಹಸ್ರಮಾನದ ಮತದಾರರಾದ ಕಾರವಾರ ತಾಲೂಕಿನ ಕಿನ್ನರದ ಅಕ್ಷಯ್ ವಿಲಾಸ ಗೋವೇಕರ್, ಸದಶಿವಗಡದ ಪೂನಂ ರವಿ ಗಜನೀಕರ್, ಭಟ್ಕಳ ತಾಲೂಕು ಕಾಯ್ಕಿಣಿಯ ದೀಕ್ಷಾ ಮುಕುಂದ ಮಡಿವಾಳ ಹಾಗೂ ಕಾರವಾರದ ಐಶ್ವರ್ಯ ಅವರಿಗೆ ಮತದಾರರ ಚೀಟಿ ವಿತರಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ವಿನೂತನ ಸಂದೇಶ ನೀಡಿದರು.
    

ನಂತರ ಸದಾಶಿವಗಡ ಜಂಗಲ್‍ಲಾಡ್ಚ್ ರೆಸಾರ್ಟ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಪ್ರತಿ ಮತವೂ ಒಂದು ಹನಿ ನೀರಿನಂತೆ ಇದ್ದು,  ಪ್ರತಿ ಮತವೂ ಅಮೂಲ್ಯ ಮತವಾಗಿರುರುತ್ತದೆ ಎಂದು ಹೇಳಿದರು. 

ಮತದಾನಕ್ಕೆ ಅರ್ಹರಾದ ಪ್ರತಿಯೊಬ್ಬ ಮತದಾರರನ್ನು ಗುರುತಿಸಿ ಅವರನ್ನು ಮತದಾನ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 2000 ಜನೇವರಿ 1 ರಂದು ಜನಿಸಿದವರನ್ನು ಮಿಲೇನಿಯಮ್ ಮತದಾರರು ಎಂದು ಗುತಿಸಲಾಗಿದೆ. ಇಂತಹ ಮಿಲೇನಿಯಮ್ ಮತದಾರರು ಜಿಲ್ಲೆಯಲ್ಲಿ 13 ಜನ ಇರುವರು. ಉ.ಕ.ಜಿಲ್ಲೆಯಲ್ಲಿ ಒಟ್ಟೂ 1134513 ಮತದಾರರು ಇರುವರು. ಇದರಲ್ಲಿ 574532 ಪುರುಷ ಮತ್ತು 559981 ಮಹಿಳಾ ಹಾಗೂ 13612 ವಿಕಲಚೇತನ ಮತದಾರರು ಇದ್ದಾರೆ.  362 ಮತದಾರು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. 1434 ಮತಗಟ್ಟೆಗಳಿವೆ ಎಂದು ವಿವರಿಸಿದರು. 
 

ಇದೇ ಸಂದರ್ಭದಲ್ಲಿ ವಿಕಲಚೇತನ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೆರವು ಎಂಬ ಬಿತ್ತಿ ಪತ್ರವನ್ನು ಜಿಲ್ಲಾಧೀಕಾರಿ ಮತ್ತು ಸಿಇಒ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ ಉಪಸ್ಥಿತರಿದ್ದರು. 
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...