ಮೆಟ್ರಿಕ ನಂತರದ  ಬಾಲಕಿಯರ  ವಸತಿ ನಿಲಯಕ್ಕೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನ

Source: sonews | By Staff Correspondent | Published on 19th June 2018, 6:22 PM | Coastal News |

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ  ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ 2018-19ನೇ ಸಾಲಿಗಾಗಿ ಪ್ರವೇಶ ಬಯಸುವ ಮೆಟ್ರಿಕ್ ನಂತರದ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಇಂಜಿನಿಯರಿಂಗ್, ಐ.ಟಿ.ಐಇತ್ಯಾದಿ ಕೋರ್ಸುಗಳನ್ನು ಓದುತ್ತಿರುವ  ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ  ಕಛೇರಿ , ತೆಲಿರಾಮಜಿ ರಸ್ತೆ, ಇಂಡಿಯನ್ ಓವರಸಿಸ್ ಬ್ಯಾಂಕ್ ಮೇಲೆ , 2ನೇ ಮಹಡಿ, ಕಾರವಾರ ಹಾಗೂ ತಾಲ್ಲೂಕಾ ಅಲ್ಪಸಂಖ್ಯಾತರ  ವಿಸ್ತರಣಾಧಿಕಾರಿಗಳ ಕಛೇರಿ, ಕಾರವಾರ ರವರಿಂದ ಉಚಿತವಾಗಿ ಪಡೆಯಬಹುದು ಭರ್ತಿ ಮಾಡಿದ  ಅರ್ಜಿಗಳನ್ನು ಜುಲೈ 20 ರ ಒಳಗಾಗಿ ಸಂಬಂದ ಪಟ್ಟ ತಾಲೂಕಿನ ವಿಸ್ತರಣಾಧಿಕಾರಿಗಳ ಕಛೇರಿಗೆ ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...