ಮುಂಬೈ ಮತ್ತು ಕುಚುವೇಲಿಗೆ ನಡುವೆ ವಿಶೇಷ ರೈಲು; ಪ್ರಯಾಣಿಕರಿಗೆ ದೀಪಾವಳಿ ಕೊಡುಗೆ

Source: sonews | By sub editor | Published on 8th October 2017, 12:01 AM | Coastal News | State News | National News | Don't Miss |

ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಮುಂಬೈ ಮತ್ತು ಕುಚುವೇಲಿಗೆ ನಡುವೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ರೈಲು ಸಂಖ್ಯೆ ೦೧೦೭೯ ವಿಶೇಷ ರೈಲು ಮಂಗಳವಾರ ದಿನಾಂಕ ೧೭-೧೦-೨೦೧೭ ಮತ್ತು ೨೪-೧೦-೨೦೧೭ರಂದು ರಾತ್ರಿ ೧೨.೨೦ಕ್ಕೆ ಮುಂಬೈ ಸಿ‌ಎಸ್‌ಎಂಟಿಯಿಂದ ಹೊರಟು ಮರುದಿನ ಬೆಳಿಗ್ಗೆ ೯ಕ್ಕೆ ಕುಚುವೇಲಿ ತಲುಪಲಿದೆ.
ರೈಲು ಸಂಖ್ಯೆ ೦೧೦೮೦ ಕುಚುವೇಲಿಯಿಂದ ಬುಧವಾರ ದಿನಾಂಕ ೧೮-೧೦-೨೦೧೭ ಮತ್ತು ೨೫-೧೦-೨೦೧೭ರಂದು ಮಧ್ಯಾಹ್ನ ೧೨ಕ್ಕೆ ಹೊರಟು ಮುಂಬೈಗೆ ರಾತ್ರಿ ೧೦.೧೫ಕ್ಕೆ ತಲುಪಲಿದೆ.
ಮುಂಬಯಿ ಮತ್ತು ಕೊಚುವೆಲಿ ನಡುವಿನ ಪ್ರಯಾಣದಲ್ಲಿ ದಾದರ್, ಥಾನೆ, ರೋಹ, ಖೇಡಾ, ಚಿಪ್ಲುನ, ಸಂಗಮೇಶ್ವರ ರೋಡ, ರತ್ನಗಿರಿ, ಕಂಕವಲಿ, ಕುಡ್ಲ, ತಿವಿಮ್, ಮಡಗಾಂವ, ಕಾರವಾರ, ಕುಮಟಾ, ಭಟ್ಕಳ, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು, ಕಾಸರಗೋಡ, ಕನ್ನೂರು, ಥಾಲಸ್ಸೇರಿ, ಕೊಝಿಕ್ಕೊಡೆ, ತಿರೂರು, ಶೊರನೂರು, ತ್ರೀಸೂರ, ಎರ‍್ನಾಕೂಲಮ್ ಪಟ್ಟಣ, ಕೊಟ್ಟಾಯಮ್, ತಿರುವಲಮ್, ಚೆಂಗಾನೂರು,ಕಯಾಂಕುಲಮ್ ಮತ್ತು ಕೊಲ್ಲಮ್  ಮಾರ್ಗದ ಸ್ಥಳಗಳಲ್ಲಿ ನಿಲುಗಡೆಗೊಳ್ಳಲಿವೆ ಎಂದು ಕೊಂಕಣ್ ರೈಲು ಸಾರ್ವಜನಿಕ ಸಂಪರ್ಕ ಮುಖ್ಯ ಅಧಿಕಾರಿ ಎಲ್.ಕೆ ವರ್ಮಾ ತಿಳಿಸಿದ್ದಾರೆ. 

Read These Next

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗಕ್ಕೆ 16,955 ಹೆಕ್ಟೇರ್ ಬೆಳೆ ಹಾನಿ: ಶಶಿಕಾಂತ್ ಕೋಟಿಮನಿ

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀವೃಷ್ಠಿ, ಪ್ರವಾಹ ಹಾಗೂ ಕೊಳೆರೋಗಕ್ಕೆ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...