ಮೌಲಾನ ಅಝಾದ್ ಮಾದರಿ ಶಾಲೆಗೆ ಅರ್ಜಿ ಆಹ್ವಾನ

Source: sonews | By sub editor | Published on 9th May 2018, 6:22 PM | Coastal News |


ಕಾರವಾರ: ಜಿಲ್ಲೆಯ  ಕುಮಟಾ,  ಹಳಿಯಾಳ , ಮುಂಡಗೋಡ ಮತ್ತು ಭಟ್ಕಳ ತಾಲೂಕುಗಳಲ್ಲಿ 2018-19ನೇ ಸಾಲಿಗೆ ಮೌಲಾನಾ ಆಜಾದ ಮಾದರಿ  ಶಾಲೆಯನ್ನು ಆಂಗ್ಲ  ಭಾಷೆಯಲ್ಲಿ ಪ್ರಾರಂಭಿಸಲಾಗುತ್ತಿದ್ದು 6ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ  ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
 

ಶಾಲೆಯ ತರಗತಿಯ ಸಂಖ್ಯಾಬಲ 60 ಕ್ಕೆ ಸಿಮಿತಗೊಳಿಸಲಾಗಿದೆ. ಆಂಗ್ಲ ಮಾಧ್ಯಮ  ಶಾಲೆಯಾಗಿದ್ದು ವಸತಿ ಶಾಲೆಯಾಗಿರುವುದಿಲ್ಲ. ವಿದ್ಯಾರ್ಥಿಗಳ  ದಾಖಲಾತಿಯಲ್ಲಿ ಶೇ. 75% ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ , ಕ್ರಿಶ್ಚಿಯನ್ , ಜೈನ್ ,ಬೌದ್ಧ , ಸಿಖ್ & ಪಾರ್ಸಿ  ವಿದ್ಯಾರ್ಥಿಗಳಿಗೆ  ಹಾಗೂ ಶೇ 25% ಪ.ಜಾ, ಪ.ಪಂ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವದು, ಹಾಗೂ ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ 50% ಮಿಸಲಿರಿಸಲಾಗುವುದು. ಪೌರ ಕಾರ್ಮಿಕರ, ವಿಧವೆಯರ ಮಕ್ಕಳಿಗೆ ಹಾಗೂ ಅನಾಥ , ಅಂಗವಿಕಲ ಮಕ್ಕಳಿಗೆ ಶೇ 3% ರಷ್ಟು ಮಿಸಲಾತಿ ವಿರುತ್ತದೆ. 
       

ಆಸಕ್ತ ವಿದ್ಯಾರ್ಥಿಗಳ ಪಾಲಕರು ಜೂನ 1 ರವರೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಶಾಲೆಯಲ್ಲಿ ಮಧ್ಯಾನದ ಊಟ(ಮಿಡ್-ಡೇ-ಮೀಲ್ಸ್), ಸಮವಸ್ತ್ರ, ಶೂ , ಸಾಕ್ಸ್ , ಬೆಲ್ಟ್ , ಪಠ್ಯ ಪುಸ್ತಕ , ಆಟದ ಸಾಮಗ್ರಿಗಳು ಹಾಗೂ ಇತ್ಯಾದಿ ಸೌಲಭ್ಯಗಳು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. 
 

ಪ್ರವೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತÀರ ಕಲ್ಯಾಣ ಅಧಿಕಾರಿಗಳನ್ನು ಕಛೇರಿ ಹಾಗೂ ತಾಲೂಕಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಂದ ಮಾಹಿತಿ ಪಡೆಯಬಹುದಾಗಿದೆ. ಸಂಪರ್ಕಿಬೇಕಾದ ದೂರವಾಣಿ ಸಂಖ್ಯೆಗಳು  ಕುಮಟಾ : 08386-222000, ಮೊ: 9113935347 , ಮುಂಡಗೋಡ : 08301-222232 ,                     ಭಟ್ಕಳ : 08385-224945 ಹಳಿಯಾಳ : 08284-220499 , ಜಿಲ್ಲಾ ಕಛೇರಿ ಕಾರವಾರ, ಸಂಖ್ಯೆ:08382-220336                         

Read These Next

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...