ಮಾರ್ಚ ೨೮ ರಂದು  ಮದ್ಯ ಮಾರಾಟ ನಿಷೇದ

Source: S O News service | By Staff Correspondent | Published on 27th March 2017, 6:13 PM | Coastal News | Don't Miss |

ಕಾರವಾರ   : ಉತ್ತರ ಕನ್ನಡ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮ/ಶೋಭ ಯಾತ್ರೆ ನಡೆಸುತ್ತಿರುವದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ವೈನಶಾಪ್ ಮತ್ತು ಬಾರ್, ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ. 
ಮಾರ್ಚ ೨೮ ರಂದು  ಬೆಳಗ್ಗೆ ೬ ಗಂಟೆಯಿಂದ  ಮದ್ಯರಾತ್ರಿಯವರೆಗೆ ಯಲ್ಲಾಪುರ ಪಟ್ಟಣ, ಶಿರಸಿ ನಗರ ಹಾಗೂ ಶಿರಸಿ ಎನ್.ಎಮ್.ಪೋಲೀಸ್ ಠಾಣಾ ವ್ಯಾಪ್ತಿ, ಮತ್ತು ಕುಮಟಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ.  ಸಿದ್ದಾಪುರ, ಹಳಿಯಾಳ, ಜೋಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಅಂಕೋಲಾ ತಾಲೂಕುಗಳಲ್ಲಿ, ಹಾಗೂ ಮಾರ್ಚ ೨೯  ರಂದು ಬೆಳಗ್ಗೆ ೬ ಗಂಟೆಯಿಂದ ಮದ್ಯರಾತ್ರಿಯವರೆಗೆ ಯಲ್ಲಾಪುರ ತಾಲೂಕಿನ  ಕಿರವತ್ತಿ ಗ್ರಾಮ, ಯಲ್ಲಾಪುರ ಪಟ್ಟಣ, ಸಿದ್ದಾಪುರ ತಾಲೂಕು ವ್ಯಾಪ್ತಿ ಮತ್ತು ಬನವಾಸಿ ಶಹರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...