ಮಹಾತ್ಮರ ಆದರ್ಶಗಳು ಇಂದಿನ ಪ್ರಸ್ತುತ: ಅಭಿಜಿನ್

Source: sonews | By Staff Correspondent | Published on 2nd September 2018, 10:28 PM | Coastal News |

ಕಾರವಾರ: ಮಹಾತ್ಮರ ಆದರ್ಶಗಳು ಇಂದಿನ ಪೀಳಿಗೆಗೆ ಅತ್ಯಂತ ಪ್ರಸ್ತುತ ಎಂದು ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್ ಅಭಿಪ್ರಾಯಪಟ್ಟಿದ್ದಾರೆ.
    
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    
ಶ್ರೀಕೃಷ್ಣ ಸೇರಿದಂತೆ ಇತಿಹಾಸ, ಪುರಾಣಗಳಲ್ಲಿ ಬರುವ ಹಲವಾರು ಮಹಾತ್ಮರು ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯ ಎಂದು ಹೇಳಿದರು.
    
ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೆಟ್ಟ ವಾತಾವರಣ ಸೃಷ್ಟಿಯಾಗಿದೆ. ಮನುಷ್ಯ ಸಂಬಂಧಗಳು ಇಲ್ಲವಾಗಿವೆ. ಮಾನವೀಯ ಮೌಲ್ಯಗಳು ಕುಸಿದಿವೆ. ಅಧರ್ಮ ತಾಂಡವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಪುರುಷರ, ಮಹಾಪುರುಷರ ಆದರ್ಶಗಳು ಅಗತ್ಯವಿದೆ. ಇಂದಿನ ಪೀಳಿಗೆ ಅಂತಹ ಮಹಾಕಾವ್ಯಗಳ ಪಾತ್ರಗಳಲ್ಲಿ ಬರುವ ಉತ್ತಮ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
    
ಶ್ರೀಕೃಷ್ಣ ಜಯಂತಿ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಗಣೇಶ್ ಬಿಸ್ಟಣ್ಣನವರ್, ಶ್ರೀಕೃಷ್ಣ ಕೇವಲ ಪಾತ್ರವಾಗಿ ಕಾಣುವುದಿಲ್ಲ. ಮನುಕುಲದ ದಿವ್ಯ ಬೆಳಕು ಎಂದರು.
    
ಶ್ರೀಕೃಷ್ಣ ಹುಟ್ಟಿನಿಂದಲೇ ಜಗತ್ತಿನ ಕತ್ತಲೆಯನ್ನು ಸರಿಸುತ್ತಾ ಬೆಳೆದರು. ಹಾಲುಗಲ್ಲದ ಹಸುಳೆಯಲ್ಲಿ ರಾಕ್ಷಸಿ ಪೊತನೆಯ ಸಂಹಾರದಿಂದ ಹಿಡಿದು ಅಧರ್ಮದ ಹಾದಿ ಹಿಡಿದ ಮಾವ ಕಂಸ ಸೇರಿದಂತೆ ಸಮಾಜಕ್ಕೆ ಕಂಟಕವಾಗಿದ್ದ ಎಲ್ಲರನ್ನು ಸಂಹರಿಸಿದರು. ಕೆಲವೊಮ್ಮೆ ಶ್ರೀಕೃಷ್ಣನ ಪ್ರಭಾವವೂ ಧರ್ಮ ಸಂಸ್ಥಾಪನೆಗೆ ಕಾರಣವಾಗಿವೆ. ಇಂದಿಗೂ ನಾವು ಆ ಪ್ರಭೆಯನ್ನು ಕಣಬಹುದಾಗಿದೆ ಎಂದು ಹೇಳಿದರು.
    
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಉಪಸ್ಥಿತರಿದ್ದರು.
 

Read These Next