ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಸರಕಾರಿ ಯೋಜನೆಗಳ ಅರಿವು ಮೂಡಿಸಿ : ಎಸ್.ಎಸ್.ನಕುಲ್ 

Source: sonews | By Staff Correspondent | Published on 5th July 2018, 7:21 PM | Coastal News | Don't Miss |

ಕಾರವಾರ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ ಅಲ್ಪ ಸಂಖ್ಯಾತರರಿಗಿರುವ ಸೌಲಭ್ಯಗಳ ಕುರಿತು ಅಲ್ಪಸಂಖ್ಯಾತ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು. 

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಪ ಸಂಖ್ಯಾತರಿಗಾಗಿ ಸರಕಾರದಿಂದ ಇರುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಜನರಲ್ಲಿ ಮಾಹಿತಿ ಕಡಿಮೆ ಇದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಇಲಾಖೆ ಪ್ರತಿ ಮಾಹೆ ಎರಡು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಅಲ್ಪಸಂಖ್ಯಾತ ಜನರಲ್ಲಿ ಜಾಗೃತಿಯಾಗಬೇಕು.  ಅರಿವು ಮಾಹಿತಿ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದೆ ಬಾಗಿಲು ಮುಚ್ಚಿವೆ ಎಂಬ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಇಲಾಖೆ ಅವುಗಳತ್ತ ಗಮನ ಹರಿಸಿ  ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು  ಎಂದು ಸೂಚಿಸಿದರು. 

ಜಿಲ್ಲಾ ಅಲ್ಪಸಂಖ್ಯಾತರ  ಕಲ್ಯಾಣ ಅಧಿಕಾರಿ ಗುಡ್ಡಪ್ಪ ಮಾತನಾಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಂದ ವಿವಿಧ ಯೋಜನೆಗಳಡಿ ಪ್ರಯೋಜನೆ ಕೋರಿ ಅರ್ಜಿ ಬಂದಲ್ಲಿ ಆದ್ಯತೆಯ ಮೇಲೆ ಅವರಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುವುದು. ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ 221 ಅಲ್ಪಸಂಕ್ಯಾತರ ಮಕ್ಕಳಿಗೆ ಮಂಜೂರಾತಿ ನೀಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಮುರಾರ್ಜಿ ದೇಶಾಯಿ ವಸತಿ ಶಾಲೆಯಲ್ಲಿ ಒಟ್ಟು 168 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ, ಹಾಗೂ ಕಾರವಾರ ಮತ್ತು ಶಿರಸಿ ತಾಲೂಕಿನ 50 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2018-19ನೇ ಸಾಲಿಗೆ 2 ಜನ ಕಾನೂನು ಪದವಿಧರರು ತರಬೇತಿ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದಾರೆ 2018-19 ನೇ ಸಾಲಿನ ಎಲ್ಲಾ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ.100 ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
     
ಸಭೆಯಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.

ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ
ಕಾರವಾರ : ರಾಜ್ಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿ ವತಿಯಿಂದ ಕನ್ನಡ, ಆಂಗ್ಲ ಅಥವಾ ಭಾರತೀಯ ಇತರೆ ಭಾಷೆಗಳ ಗ್ರಂಥಗಳ ಆಯ್ಕೆಗೆ ಲೇಖಕರು, ಪ್ರಕಾಶಕರು ಹಾಗೂ ಪ್ರಕಾಶನ ಸಂಸ್ಥೆಗಳಿಂದ ಆರ್ಜಿ ಆಹ್ವಾನಿಸಲಾಗಿದೆ.
2018 ಜನವರಿ 1ರಿಂದ 2018 ಜೂನ್ 30ರೊಳಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಪುಸ್ತಕಗಳು ಆಯ್ಕೆಗೆ ಅರ್ಹವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ www.karnatakapubliclibrary.gov.in ಅಥವಾ ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ (ಉ.ಕ) ಮುಖ್ಯ ಕಚೇರಿಯಲ್ಲಿ ಪಡೆದು ಸಲ್ಲಿಸಬಹುದಾಗಿದೆ. ನಿಬಂಧನೆಗಳು ಹಾಗೂ ಪೂರ್ಣ ಮಾಹಿತಿಗಾಗಿ ಸದರಿ ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ ಎಂದು ಉಪ ನಿರ್ದೇಶಕರು ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    
 
   

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...