ಕನ್ನಡ ಭಾಷೆಯ ಮೇಲಿನ ಪ್ರೀತಿ ಅಂತರಂಗದಿಂದ ಬರಬೇಕು : ಆರ್.ಜಿ.ಗುಂದಿ 

Source: sonews | By sub editor | Published on 31st January 2018, 6:36 PM | Coastal News |

ಕಾರವಾರ  : ಕನ್ನಡ ಭಾಷೆಯ ಮೇಲಿನ ಪ್ರೀತಿ ಅಂತರಂಗದಿಂದ ಬರಬೇಕು. ಒತ್ತಾಯಪೂರ್ವಕವಾಗಿ ಕನ್ನಡವನ್ನು ಹೆರುವಂತಾಗಬಾರದು ಎಂದು ಹಿರಿಯ ಸಾಹಿತಿ ಮತ್ತು ಯಕ್ಷಗಾನ ಕಲಾವಿದ ರಾಮಕೃಷ್ಣ ಜಿ.ಗುಂದಿ ಹೇಳಿದರು. 
 

ಅವರು ಬುಧವಾರ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಂವಾದ ಹಾಗೂ ಪಂಪ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಜೀನಿಯರ್, ಡಾಕ್ಟರ್, ವಕೀಲರಂತಹ ವೃತ್ತಿಪರರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಒಲವನ್ನು ಅಳವಡಿಸಬೇಕು. ಕನ್ನಡ ಸಾಹಿತ್ಯದತ್ತ ವೃತ್ತಿಪರರು ಪ್ರೀತಿ ತೋರಿದಾಗ ಸಹಜವಾಗಿ ಕನ್ನಡ ಭಾಷೆ ಬೆಳೆಯುತ್ತದೆ. ಇಂದು ವಿಶ್ವ ವಿದ್ಯಾಲಯಗಳು ಹಳೆಗನ್ನಡ ಕಲಿಸಲು ಆಸಕ್ತಿ ವಹಿಸುತ್ತಿಲ್ಲ. ಹಳೆಗನ್ನಡ ಕವನಗಳನ್ನು ಓದದೇ ಹೋದಾಗ ಕನ್ನಡ ಭಾಷೆಯ ಮೂಲ ಸೌಂದರ್ಯವನ್ನು ಅರಿಯಲು ಸಾದ್ಯವಾಗುವದಿಲ್ಲ  ಎಂದು ಹೇಳಿದರು. 

ಸಾಹಿತಿಯೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಉದ್ಘಾಟಿಸಿದ ಹಿರಿಯ ಸಾಹಿತಿ ಮೋಹನ ಹಬ್ಬು ಮಾತನಾಡಿ, ಆದುನಿಕ ಬದುಕಿನಲ್ಲಿ ಯುವ ಸಮುದಾಯದವರಿಗೆ ಸಾಕಷ್ಟು ದಂದ್ವಗಳಿವೆ. ಇಂತಹ ದಂದ್ವಗಳನ್ನು ಮತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯುವ ಸಮುದಾಯ ಓದುವದನ್ನು ಮತ್ತು ಬರೆಯುವ ಅಭ್ಯಾಸಮಾಡಿಕೊಳ್ಳಬೇಕು. ಒಳ್ಳೆಯ ಸಾಹಿತ್ಯ ಓದುವದರಿಂದ ವ್ಯಕ್ತಿಯ ಮನೋದರ್ಮ ಬದಲಾಗುತ್ತದೆ. ಸಾಹಿತ್ಯದ ಮೊರೆ ಹೋದಾಗ ವಿಶಾಲವಾದ ವಿಚಾರದಾರೆಗಳು ಹೊರಹೊಮ್ಮುತ್ತವೆ. ಯಾವುದೇ ಭಾಷೆಯ ಸಾಹಿತ್ಯವಾಗಲಿ ಅದನ್ನು ಓದಿ ಆಸ್ವಾಧಿಸಿದಾಗ ಮನಸ್ಸು ವಿಶಾಲಾಗುತ್ತದೆ. ಯುವ ಜನತೆ ಒಳ್ಳೆಯ ವಿಚಾರದಾರೆಗಳನ್ನು ಅಳವಡಿಸಿಕೊಂಡು ನಮ್ಮ ದೇಶದ ಆಚಾರ ವಿಚಾರ ಸಂಸ್ಕøತಿಗಳನ್ನು ಬೆಳಸಬೇಕು ಎಂದು ಹೇಳಿದರು. 

ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಕಲ್ಪನಾ ಕೆರವಡಿಕರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು. ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪ್ಪನಳ್ಳಿ ಆಶಯ ನುಡಿಗಳನ್ನಾಡಿದರು. ಸಂವಾದದಲ್ಲಿ ಗಂಗಾದರ ಕೊಡ್ಲಿಯವರ, ವಿಜಯಾ ಡಿ.ನಾಯ್ಕ, ದೀಪಕ ಕುಮಾರ ಶೈಣೆ, ನಾಗರೇಖಾ ಗಾಂವ್ಕರ್, ದ್ಯಾಮಣ್ಯ ಗುಡ್ಡಮ್ಮನವರ, ಗುರು ಬ್ಯಾಲ್ಯಾಳ, ಮಂಜುನಾಥ ಬೆಳವಡಿ, ಮಹಿಮಾ ಪೆಡ್ನೆಕರ, ಭಾವನಾ ಬಾಂದೇಕರ, ಮಹೇಶ್ವರಿ ನಾಯ್ಕ, ಗಜಾ ಸುರಂಗೇಕರ ಭಾಗವಹಿಸಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಫಾಲ್ಗುಣ ಗೌಡ ಅಚವೆ, ರೇಣುಕಾ ರಮಾನಂದ, ಕೃಷ್ಣಾನಂದ ಬಾಂದೇಕರ, ಸಿಂದು ಹೆಗಡೆ, ಕೃಷ್ಣಾ ನಾಯಕ, ಹಿಚ್ಚಡ, ತಿಲೊತ್ತಮೆ ಗೊಂಡ, ಭಟ್ಕಳ ಶ್ರೀದೇವಿ ಕೆರೆಮನೆ, ಭವ್ಯ ಯಲ್ಲಪುರ, ಅಕ್ಷತಾ ಕೃಷ್ಣಮೂರ್ತಿ, ಗಣೇಶ ಹೆಗಡೆ, ಹೊಸ್ಮನೆ ತಮ್ಮ ಕವನಗಳನ್ನು ವಾಚಿಸಿದರು. 

Read These Next

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...