ಪಕ್ಷದ ಸಂಘಟನೆಗೆ ಒತ್ತು ಕೊಡಿ- ಮರಿತಿಬ್ಬೇಗೌಡಾ

Source: sonews | By Staff Correspondent | Published on 18th July 2017, 11:07 PM | Coastal News | Don't Miss |

ಕಾರವಾರ ಅಂಕೊಲಾ ಜೆ.ಡಿ.ಎಸ್. ಕಾರ್ಯಕರ್ತರ ಸಭೆ ಕಾರವಾರದಲ್ಲಿ ಜಿಲ್ಲಾಧ್ಯಕ್ಷರಾದ ಬಿ. ಆರ್. ನಾಯ್ಕರವರ ಅಧ್ಯಕ್ಷತೆಯಲ್ಲಿ ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಜೆ.ಡಿ.ಎಸ್. ಪಕ್ಷದ ಜಿಲ್ಲಾ ವೀಕ್ಷಕರಾದ ಮರಿತಿಬ್ಬೇಗೌಡಾ ಸಮ್ಮುಖದಲ್ಲಿ ನಡೆಯಿತು.  

ಸಭೆಯಲ್ಲಿ ಮಾತನಾಡಿದ, ವೀಕ್ಷಕರಾದ ಮರಿತಿಬ್ಬೇಗೌಡಾರವರು ಕಾರವಾರ ಅಂಕೋಲಾ ಕ್ಷೇತ್ರ ಎಲ್ಲಾ ಕಾರ್ಯರ್ತರು, ಮುಖಂಡರು ಒಟ್ಟಾಗಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಮುಂಬರುವ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಕೈಬಲಪಡಿಸಲು ಮುಂದಾಗಬೇಕು. ಕಾರಣ ಈಗಿಂದಲೇ ಬೂತ್ ಮಟ್ಟದಿಂದ ಸಂಘಟನೆಯ ಕಾರ್ಯವನ್ನು ಕೈಗೊಳ್ಳುವುದು ಅವಶ್ಯವಿದೆ ಎಂದು ಕಿಮಿಮಾತನ್ನು ಹೇಳಿದರು.

ಅದೇ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪುರುಷೋತ್ತಮ ಸಾವಂತರು ನಮ್ಮ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ಒಂದಿಲ್ಲೊಂದು ಸಮಸ್ಸೆಗಳು ಉದ್ಭವಿಸಿ ಪಕ್ಷಕ್ಕೆ ಹಿನ್ನಡೆಯಾಗಿದೆ.  ಅನೇಕ ನಿಷ್ಠಾವಂತ ಕಾರ್ಯಕರ್ತರು ಇದರಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದಾರೆ.  ಅಲ್ಲದೇ ಈ ಕ್ಷೇತ್ರಕ್ಕೆ ರಾಜ್ಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದರಿಂದ ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.  ಅಂಕೋಲಾ ಕಾರವಾರ ಕ್ಷೇತ್ರದ ಮತದಾರ ಬಂಧುಗಳು ಹೆಚ್.ಡಿ.ಕುಮಾರಸ್ವಾಮಿ ಒಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಆಶೆ ವ್ಯಕ್ತಪಡಿಸುತ್ತಿದ್ದು ಕೂಡಲೇ ಈ ಕ್ಷೇತ್ರಕ್ಕೆ ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಯನ್ನು ಘೋಷಿಸಿ ಮುಂದಿನ ಸಂಘಟನೆಗೆ ಅನುವುಮಾಡಿಕೊಡಬೇಕೆಂದು ಸಾವಂತರವರು ವಿನಂತಿಸಿದರು.  ಒಂದು ವಾರದ ಅವಧಿಯೊಳಗೆ ಸಂಬಂಧಪಟ್ಟ ಮುಖಂಡರೊಂದಿಗೆ ಸಮಾಲೋಚಿಸಿ ಅಭ್ಯರ್ಥಿ ಘೋಷಣೆ ಮಾಡುವುದಾಗಿ, ಸಧ್ಯ ಸಾವಂತರ ಮುಂದಾಳತ್ವದಲ್ಲಿ ಸಂಘಟನೆಯನ್ನು ಮುಂದುವರಿಸಬೇಕೆಂದು ಕಾರ್ಯಕರ್ತರಿಗೆ ವೀಕ್ಷಕರಾದ ಮರಿತಿಬ್ಬೇಗೌಡಾರವರು ತಿಳಿಹೇಳಿದರು.  ಈ ಸಭೆಯಲ್ಲಿ ಕಾರವಾರ ಅಂಕೋಲಾ ತಾಲೂಕಿನ ಅಧ್ಯಕ್ಷರಾದ ಅಜೀತ ಪೋಕಳೆ ಮತ್ತು ಕೆ.ಜಿ.ನಾಯ್ಕ ಅಲ್ಲದೇ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಗಜು ನಾಯ್ಕ, ಮಂಜುನಾಥ ನಾಯ್ಕ, ಖಲೀಲುಲ್ಲಾ ಸರ್, ಪಿ.ಎಂ.ಕುವಾಳೇಕರ, ರಮೇಶ ನಾಗೇಕರ, ಪ್ರದೀಪ ಶೇಜವಾಡಕರ, ಶಂಕರ ಬೊಬ್ರುಕರ, ಘನಶ್ಯಾಮ ಗುನಗಿ, ಥಾಕು ದುರ್ಗೇಕರ, ರಾಜೇಶ ಕೋಡಾರಕರ, ರೋಹೀದಾಸ ಉಳವಿ, ಶ್ರೀಮತಿ ಅಮೇನಾ, ಪಾಂಡುರಂಗ ನಾಯ್ಕ, ಸಂದೀಪ ಬಂಟ್, ಅರುಣ ನಾಯ್ಕ ಮತ್ತು ನರಸಿಂಹ ಭಾಗವತ ಇನ್ನಿತರರು ಉಪಸ್ಥಿತರಿದ್ದರು.  
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...