64ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮದಿಪು ತುಳು ಚಿತ್ರ ಪ್ರದರ್ಶನ

Source: sonews | By Staff Correspondent | Published on 19th November 2017, 7:21 PM | Coastal News |

ಕಾರವಾರ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ನಾಲ್ಕನೇ ಚಿತ್ರ ತುಳು ಭಾಷೆಯ ಮದಿಪು ದಿನಾಂಕ 20-11-2017ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ತುಳು ನಾಡಿನ ಭೂತದ ಕೋಲ ಆಚರಣೆ ಪ್ರಧಾನವಾಗಿಸಿಕೊಂಡು ಚಿತ್ರೀಕರಿಸಲಾದ ಮದಿಪು ಚಿತ್ರದಲ್ಲಿ ನಿರ್ದೇಶಕ ಚೇತನ್ ಮುಂಡಾಡಿ ಧರ್ಮ ಸಹಿಷ್ಣುತೆ ಹಾಗೂ ಮಾನವೀಯ ಸಂಬಂಧಗಳ ಎಳೆಯನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ.
2017 ಮಾರ್ಚ್‍ನಲ್ಲಿ ತೆರೆಗೆ ಬಂದ ಮದಿಪು ಚಿತ್ರವನ್ನು ಸಂದೀಪ್‍ಕುಮಾರ್ ನಂದಳಿಕೆ ನಿರ್ಮಿಸಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ ಹಾಗೂ ವಿ. ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸರ್ದಾರ್ ಸತ್ಯ, ಎಂ.ಕೆ.ಮಠ, ಸೀತಾ ಕೋಟೆ, ಸುಜಾತಾ ಶೆಟ್ಟಿ ತಾರಗಣದಲ್ಲಿದ್ದಾರೆ.
64ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ತುಳು ಭಾಷಾ ಚಿತ್ರ ಹಾಗೂ ಕರ್ನಾಟಕ ರಾಜ್ಯದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗಳು ಚಿತ್ರಕ್ಕೆ ಸಂದಿವೆ. ಚಿತ್ರಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜುನ ಚಿತ್ರ ಮಂದಿರಕ್ಕೆ ಆಗಮಿಸಿ ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಕೋರಿದ್ದಾರೆ.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...