ಅಂಚೆ ಸಾಂಸ್ಕøತಿಕ ಸಮ್ಮೇಳನ; ಗೋಡೆಗಳು ನಾಟಕಕ್ಕೆ ಪ್ರಥಮ ಸ್ಥಾನ

Source: sonews | By Staff Correspondent | Published on 14th January 2018, 5:51 PM | Coastal News |

ಕಾರವಾರ: ಅಂಚೆ ಇಲಾಖೆ ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಈಚೆಗೆ ಏರ್ಪಡಿಸಿದ್ದ 32ನೆಯ ಅಖಿಲ ಭಾರತ ಅಂಚೆ ಸಾಂಸ್ಕøತಿಕ ಸಮ್ಮೇಳನದ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರದರ್ಶಿಸಿದ `ಗೋಡೆಗಳು’ ನಾಟಕಕ್ಕೆ ಪ್ರಥಮ ಸ್ಥಾನ ದೊರೆತಿದೆ. ಮಹಾರಾಷ್ಟ್ರ ತಂಡಕ್ಕೆ ದ್ವಿತೀಯ ಹಾಗೂ ಕೇರಳ ತಂಡಕ್ಕೆ ತೃತೀಯ ಸ್ಥಾನ ದೊರೆತಿದೆ. ಕೆ.ಆರ್. ಪ್ರಕಾಶ ರಚಿಸಿದ ನಾಟಕವನ್ನು ಮಾನಸಾ ಹೆಗಡೆ ನಿರ್ದೇಶಿಸಿದ್ದರು. 
ವರ್ಗ, ಜಾತಿ, ವಿಚಾರಗಳ ಹೆಸರಲ್ಲಿ ನಮ್ಮ ಸುತ್ತ ನಾವೇ ಕಟ್ಟಿಕೊಳ್ಳುವ ಗೋಡೆಗಳು ಒಟ್ಟಿಗೇ ಬದುಕುವ ಮನುಷ್ಯರನ್ನೂ ಸಹ ಅಪರಿಚಿತರನ್ನಾಗಿಸುತ್ತವೆ. ಇಂಥ ಗೋಡೆಗಳಿಲ್ಲದಿದ್ದಲ್ಲಿ ಬದುಕು ಬಹು ಸುಲಭ ಎಂಬ ಸಂದೇಶ ಹೊತ್ತ ನಾಟಕಕ್ಕೆ ಉತ್ತಮ ನಾಟಕ ಬಹುಮಾನದೊಟ್ಟಿಗೆ ಕೆ. ಆರ್. ಪ್ರಕಾಶ್‍ಗೆ ಉತ್ತಮ ಕೃತಿ ಬಹುಮಾನ, ಮಾನಸಾ ಹೆಗಡೆ ಅವರಿಗೆ ಉತ್ತಮ ನಿರ್ದೇಶನ ಹಾಗೂ ನಟನೆಗಾಗಿ ಬಹುಮಾನ ಲಭಿಸಿದೆ. ಓಡಿಸ್ಸಿ ಕಲಾವಿದೆ ಪದ್ಮಶ್ರೀ ಅರುಣಾ ಮೊಹಾಂತಿ ಬಹುಮಾನ ವಿತರಿಸಿದರು. 
ನಾಟಕದಲ್ಲಿ ಬೆಂಗಳೂರಿನ ವಿದುಷಿ ರೂಪಶ್ರೀ ಕೆ.ಬಿ., ಹೇಮಂತಕುಮಾರ್ ಬಿ.ಆರ್., ಉಮಾ ಬಿ.ಎನ್, ಭಾಸ್ಕರ ಕೆ.ಬಿ., ಜಿ.ವಿ.ಸುಮಾ, ಕಾರವಾರದ ಬಾಲ ಮಂದಿರ ಶಾಲೆಯ ವಿದ್ಯಾರ್ಥಿ ಕೆ.ಪಿ.ಮೃಣಾಲ, ಮಾನಸಾ ಹೆಗಡೆ ಹಾಗೂ ಕೆ.ಆರ್.ಪ್ರಕಾಶ ಅಭಿನಯಿಸಿದ್ದರು. ಶಿರಸಿಯ ಲಕ್ಷ್ಮೀನಾರಾಯಣ ಕೊಡಿಯಾ ಹಾಗೂ ಉದಯ ಪ್ರಭು ಬೆಳಕು ನಿರ್ವಹಿಸಿದರು. ಪಲ್ಲವಿ ಕೊಡಿಯಾ ಶಿರಸಿ, ಗಿರೀಶ್ ಆರ್. ಮೈಸೂರು, ಆದಿತ್ಯ ಬಿ.ಕೆ.ಬೆಂಗಳೂರು ಹಾಗೂ ಚಂದ್ರಶೇಖರ ಆರ್.(ಮೃದಂಗ) ಸಂಗೀತ ನಿರ್ವಹಿಸಿದ್ದರು. ರಂಗ ಸಜ್ಜಿಕೆಯಲ್ಲಿ ಲಕ್ಷ್ಮೀನಾರಾಯಣ ಸ್ವಾಮಿ, ರವಿಶಂಕರ ಬೆಂಗಳೂರು, ಚಂದ್ರಸ್ವಾಮಿ ಬೆಂಗಳೂರು, ದಾಕ್ಷಾಯಿಣಿ ಕೊಡಿಯಾ ಶಿರಸಿ, ಸಾವಿತ್ರಿ ಪ್ರಭು ಶಿರಸಿ ಹಾಗೂ ಮಂಜುಳಾ ಬೆಂಗಳೂರು ಸಹಕರಿಸಿದರು. 
ರೂಪಶ್ರೀ ಕೆ.ಬಿ.ವ್ಯವಸ್ಥಾಪಕರಾಗಿದ್ದ ಕರ್ನಾಟಕ ತಂಡಕ್ಕೆ ನಾಟಕದ ಪರ್ಯಾಯ ಫಲಕದ ಜೊತೆ ಇಪ್ಪತ್ತಕ್ಕೂ ಹೆಚ್ಚು ಬಹುಮಾನಗಳು ದೊರೆತು ಸಮಗ್ರ ವೀರಾಗ್ರಣಿಯ ಫಲಕ ಸಹ ದೊರೆತಿದೆ. ತಂಡದ ಸಾಧನೆಗೆ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ ವರ್ಮ ಹಾಗೂ ಕಾರವಾರ ಅಂಚೆ ವಿಭಾಗದ ಅಧೀಕ್ಷಕರಾದ ಶ್ರೀ ಜಿ. ವಿಶ್ವನಾಥ ಸಂತಸ ವ್ಯಕ್ತ ಪಡಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...