ಪ್ರಕೃತಿ ವಿಕೋಪದಡಿ ರೂ.54.07 ಲಕ್ಷ ಪರಿಹಾರ ವಿತರಣೆ: ಡಿಸಿ ನಕುಲ್

Source: sonews | By sub editor | Published on 23rd June 2018, 8:38 PM | Coastal News | State News | Don't Miss |

ಕಾರವಾರ :ಪ್ರಕೃತಿ ವಿಕೋಪ ಮತ್ತು ಪ್ರವಾಹಕ್ಕಾಗಿ ಜಿಲ್ಲಾದ್ಯಂತ ಈವರೆಗೆ 54.07 ಲಕ್ಷ ರೂ. ಸಂತ್ರಸ್ಥರಿಗೆ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಏಪ್ರಿಲ್ 1ರಿಂದ ಈವರೆಗೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದು ತಲಾ ನಾಲ್ಕು ಲಕ್ಷ ರೂಪಾಯಿಯಂತೆ 12 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಅಲ್ಲದೆ, ಜಿಲ್ಲಾದ್ಯಂತ ಒಟ್ಟು 25 ಜಾನುವಾರುಗಳು ಮೃತಪಟ್ಟಿದ್ದು ರೂ. 7.16 ಲಕ್ಷ ಸೇರಿ ಒಟ್ಟು 54.07 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಮಳೆಯಿಂದಾಗಿ ಜಿಲ್ಲಾದ್ಯಂತ 270 ಮನೆಗಳು ಬಿದ್ದಿದ್ದು 56.23 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಅಲ್ಲದೆ, 138 ಪ್ರಕರಣಗಳಿಗೆ ಮಂಜೂರಾಗಿದ್ದು ಅದರಲ್ಲಿ 109 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ ಬಾಕಿ 23 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ವಿತರಣೆಗೆ ಬಾಕಿ ಇದೆ ಎಂದು ಅವರು ಹೇಳಿದರು.

ಅತೀವೃಷ್ಟಿಯಿಂದ ಜಿಲ್ಲಾದ್ಯಂತ 50.91 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು 154 ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿದ್ದು 61 ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. ಇತ್ಯರ್ಥವಾಗಬೇಕಿರುವ ಪ್ರಕರಣ ಸಂಬಂಧ ಪರಿಹಾರ ವಿತರಣೆಗೆ ಈಗಾಗಲೇ ಎಲ್ಲ ತಹಸೀಲ್ದಾರ್ ಅವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಷಯ ಪತ್ತೆ ಆಂದೋಲನ: ಆರೋಗ್ಯಾಧಿಕಾರಿ ಖುದ್ದು ಮೇಲ್ವಿಚಾರಣೆಗೆ ಡಿಸಿ ಸೂಚನೆ

ಕಾರವಾರ: ಜುಲೈ2ರಿಂದ 13ರವರೆಗೆ ನಡೆಯುವ ಸಕ್ರಿಯ ಕ್ಷಯ ಪತ್ತೆ ಆಂದೋಲನವನ್ನು ಆರೋಗ್ಯಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಬೇಕೆಂದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಕ್ರಿಯ ಕ್ಷಯ ಪತ್ತೆ ಆಂದೋಲನ ಪೂರ್ವಭಾವಿ ಸಮನ್ವಯ ಸಭೆ ಮತ್ತು ಟಿಬು ಸ್ಟೇಕ್‍ಹೋಲ್ಡರ್ಸ್ ಸಭೆ ಅಧ್ಯಕ್ಷತೆ ವಹಿಸಿ ಅವರು, ಇದು ಬಹುಮುಖ್ಯ ಆಂದೋಲನವಾಗಿದ್ದು ತಂಡಗಳಿಗೆ ಜವಾಬ್ದಾರಿ ನೀಡಿದರೆ ಸಾಲದು ಆರೋಗ್ಯಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಿ ಆಂದೋಲನ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಅಲ್ಲದೆ, ಈಗಾಗಲೇ ಗುರುತಿಸಿರುವ ಕ್ಷಯ ಪ್ರಕರಣಗಳ ಸಂಶಯಾಸ್ಪದ ಪ್ರದೇಶಗಳಿಗೆ ಪ್ರತಿ ಮನೆಗೆ ಭೇಟಿ ನೀಡುವ ತಂಡವನ್ನು ಸರಿಯಾಗಿ ತರಬೇತಿಗೊಳಿಸಬೇಕು ಹಾಗೂ ಕ್ಷಯ ರೋಗ ಲಕ್ಷಣಗಳು ಪತ್ತೆಯಾದ ಕೂಡಲೆ ಅವರಿಗೆ ಶುಶ್ರೂಷೆ ಆರಂಭಿಸಬೇಕು ಎಂದು ಅವರು ತಿಳಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ 2018 ಮಾರ್ಚ್ 16ರ ಅಧಿಸೂಚನೆಯಂತೆ ಖಾಸಗಿಯಾಗಿ ವೈದ್ಯಕೀಯ ಸೇವೆ ಮಾಡುವ ಕ್ಲಿನಿಕ್, ಆಸ್ಪತ್ರೆ ಹಾಗೂ ಔಷಧ ಮಳಿಗೆಗಳು ಕ್ಷಯ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹಾಗೂ ಕ್ಷಯ ರೋಗದ ಔಷಧಗಳನ್ನು ಖರೀದಿಸಲು ಬರುವ ಪ್ರಕರಣಗಳು ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಒಂದೊಮ್ಮೆ ಪ್ರಕರಣಗಳನ್ನು ದಾಖಲಿಸದೇ ಇರುವ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯಾಧಿಕಾರಿಗಳು ಪರಿಶೀಲಿಸಬೇಕು ಎಂದೂ ಜಿಲ್ಲಾಧಿಕಾರಿಯವರು ತಿಳಿಸಿದರು.

ಕ್ಷಯ ಪತ್ತೆ ಆಂದೋಲನ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮಹಬಲೇಶ್ವರ ಹೆಗಡೆ ಅವರು, ಜಿಲ್ಲಾದ್ಯಂತ ಮೊದಲ ಹಂತದಲ್ಲಿ 463 ಪ್ರದೇಶಗಳಲ್ಲಿ ಆಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು 2,02,248 ಜನರಿಗೆ ಕ್ಷಯರೋಗ ಕುರಿತು ಮಾಹಿತಿ ನೀಡುವ ಹಾಗೂ ರೋಗ ಲಕ್ಷಣಗಳ ಬಗ್ಗೆ ತಪಾಸಣೆ ಸಡೆಸುವ ಗುರು ಹೊಂದಲಾಗಿದೆ. ಪ್ರತಿ ತಂಡದಲ್ಲಿ ಆರೋಗ್ಯ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆ ಇರುವ 358 ತಂಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನು ಹೆಚ್ಚಿನ ತಪಾಸಣೆಗಾಗಿ ತಾಲೂಕು ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಕ್ಷ್ಮ ದರ್ಶಕ ಕೇಂದ್ರಗಳಿಗೆ ಕಫ ಪರೀಕ್ಷಗೆ ಕಳಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಗುರುತಿಸಲಾಗಿರುವ 463 ಪ್ರದೇಶಗಳಿಗೆ ತಂಡ ಮನೆ ಮನೆ ಭೇಟಿ ಮಾಡಿ ಕ್ಷಯರೋಗದ ಮಾಹಿತಿ ನೀಡಲಿದೆ ಹಾಗೂ ಕ್ಷಯ ತಪಾಸಣೆಗೊಳಪಡಿಸಲಿದೆ. ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮೇಲ್ವಿಚಾರಕರು ಈ ಆಂದೋಲನದ ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎರಡು ವಾರಕ್ಕಿಂತ ಹೆಚ್ಚು ಅವಧಿಯಲ್ಲಿ ಕೆಮ್ಮು, ಕಫ, ಜ್ವರ ಇದ್ದಲ್ಲಿ ಅಥವಾ ದೇಹದ ತೂಕ ಕಡಿಮೆಯಾಗಿರುವುದು, ಹಸಿವಾಗದಿರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ಅಂತಹವರು ಆಂದೋಲದ ತಂಡ ಬಂದಾಗ ಸೂಕ್ತ ರೀತಿಯಲ್ಲಿ ಸಹಕರಿಸಬೇಕು. ಅಲ್ಲದೆ, ಈ ಲಕ್ಷಣಗಳು ಇದ್ದಲ್ಲಿ ಖುದ್ದು ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೊಳಪಟ್ಟು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕೆಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಅಶೋಕ್‍ಕುಮಾರ್ ಜಿ.ಎನ್., ಜಿಲ್ಲಾ ಸರ್ಜನ್ ಶಿವಾನಂದ ಕಡತಳಕರ್, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಾಣಾಧಿಕಾರಿ ಕ್ಯಾಪ್ಟನ್ ಡಾ.ರಮೇಶ್‍ರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ, ಆರ್‍ಸಿಎಸ್.ಅಧಿಕಾರಿ ಡಾ.ಶರದ್‍ನಾಯ್ಕ್, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಶಂಕರರಾವ್ ಮತ್ತಿತರರು ಉಪಸ್ಥಿತರು.
 

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...