ಕಾರವಾರ: ಜಿಲ್ಲಾ ಉಸ್ತುವರಿ ಸಚಿವರ ಜಿಲ್ಲಾ ಪ್ರವಾಸ

Source: sonews | By Staff Correspondent | Published on 22nd March 2018, 11:09 PM | Coastal News |

ಕಾರವಾರ: ಬೃಹತ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಮತ್ತು ಜಿಲ್ಲಾ ಉಸ್ತುವರಿ ಸಚಿವ ಆರ್. ವಿ ದೇಶಪಾಂಡೆ ರವರು ಮಾರ್ಚ 24 ಮತ್ತು 25 ರಂದು ಜಿಲ್ಲೆಯಲ್ಲಿ  ಪ್ರವಾಸ ಕೈಗೊಳ್ಳಲಿದ್ದಾರೆ.
ಮಾರ್ಚ 24 ರಂದು ಬೆಳಗ್ಗೆ 11 ಕ್ಕೆ ಹಳಿಯಾಳದಲ್ಲಿ ಪುರಸಭೆಯ ನೂತನ ಕಟ್ಡಡ ಉದ್ಘಾಟನೆ ಮತ್ತು ಟೌನ್ ಹಾಲ್ ಅಡಿಗಲ್ಲು ಸಮಾರಂಭ, ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ, ಆಶ್ರಯ ಯೋಜನೆಯಡಿಯ ಪಟ್ಟಾ ವಿತರಣೆ ಮತ್ತು ಇತರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ಹಿರಿಯ ಕುಸ್ತಿ ಪಟುಗಳಿಗೆ ಕುಸ್ತಿ ಮಾಶಾಸನ ವಿತರಣೆ ಸಮಾರಂಭದಲ್ಲಿ ಭಾಗವಹಿಸುವರು.  ಮದ್ಯಾಹ್ನ 12.30 ಕ್ಕೆ ಕಾಕರಗಲ್ಲಿಯಲ್ಲಿನೂತನವಾಗಿ ಮಂಜೂರಾದ ಮಸೀದಿಯ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 2.15 ಕ್ಕೆ ಕಾಳಿನದಿಯಿಂದ ಹಳಿಯಾಳದ ಕೆರೆ ಮತ್ತು ಬಾಂದಾರುಗಳಿಗೆ ನೀರು ತುಂಬುವ ಯೋಜನೆಯ ಪರಿಶೀಲನೆ ಸಭೆಯಲ್ಲಿ ಪಾಲ್ಗೂಳುವರು. ಸಂಜೆ 4 ಗಂಟೆಗೆ ಚವ್ಹಾಣಪ್ಲಾಟ್‍ನಲ್ಲಿ ನೂತನವಾಗಿ ನಿರ್ಮಿಸಿಲಾದ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಮಂಗಳವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಹಾಗೂ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಚಾಉನೆ ನೀಡುವರು. ಸಂಜೆ 6.30 ಕ್ಕೆ ದಾಂಡೇಲಿಯಲ್ಲಿ ಸ್ಥಾಪಿಸಲಾದ ಕರ್ನಾಟಕ ಒನ್ ಸೆಂಟರ್ ಉದ್ಘಾಟನೆ ಹಾಗೂ ನಗರ ಸಭೆಯ ಸಂಕೀರ್ಣದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು ಮತ್ತು  ರಾತ್ರಿ 7.30 ಕ್ಕೆ ಒಳಾಂಗಣ ಕ್ರೀಡಾಂಗಣ ಸಮುಚ್ಚಯಯದಲ್ಲಿ ರಸ್ತೆ ಕಾಮಗಾರಿ, ಶೌಚಾಲಯ ನಿರ್ಮಾಣ ಹಾಗೂ ಎಲ್, ಇ, ಡಿ ದೀಪಗಳ ಅಳವಡಿಕೆ ಕಾಮಗಾರಿಗಳಿಗೆ  ಚಾಲನೆ ನೀಡುವರು.

ಮಾರ್ಚ 25 ರಂದು ಬೆಳಗ್ಗೆ 8 ಕ್ಕೆ ಹಳಿಯಾಳದಲ್ಲಿ ಸಾರ್ವಜನಿಕ ಸಭೆ ನೆಡೆಸುವರು. 9.30 ಕ್ಕೆ ದಾಂಡೇಲಿಯಲ್ಲಿ ನಾಡಕಚೇರಿಯ ಅಡಿಗಲ್ಲು ಸಮಾರಂಭ ಹಾಗೂ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.30 ಕ್ಕೆ ಬೈಲ್‍ಪಾರ್ ಗ್ರಾಮದಲ್ಲಿ ಮೇಲ್ಮಟ್ಟದ ಜಲಗಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 12 ಕ್ಕೆ ದಾಂಡೇಲಿಯಲ್ಲಿ ಮಾಸ್ಕೇರಿ ನಾಯಕÀ ರವರ ಬರೆದ ದಾಂಡೇಲಿ ಬಾಗಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 2 ಗಂಟೆಗೆ ಸಾರ್ವಜನಿಕ ಸಭೆ ನೆಡೆಸುವರು. ಮದ್ಯಾಹ್ನ 3 ಗಂಟೆಗೆ ಆಜಾದ ನಗರದಲ್ಲಿ ನೂತನವಾಗಿ ಮಂಜೂರಾದ ಅಂಬೇಡ್ಕರ್ ಭವನದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಕ್ಕೆ ರಾಮನಗರದಲ್ಲಿ ನೂತನವಾಗಿ ನಿರ್ಮಿಸಿಲಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಾಗೂ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡುವರು. 5.30 ಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಉ.ಕ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಸ್ಥಳೀಯ ಶಿಲ್ಪಿಗಳಿಗೆ ಹಾಗೂ ಪ್ರವಾಸಿಗರ ಅನುಕೂಲವಾಗಲು ಮಾರುಕಟ್ಟೆ ಯಾರ್ಡ, ಗೋಡೌನ, ರೂರಲ್ ಹಾತ್ ಮತ್ತು ಮಾರುಕಟ್ಟೆ ಮೌಲಸೌಕರ್ಯ ನಿರ್ಮಿಸಿಸುವ ಕಾಮಗಾರಿಗಳಿಗೆ ಚಾಲನೆ ನೀಡುವರು. ಮತ್ತು ಸಂಜೆ 6.30 ಕ್ಕೆ ರಾಮನಗರದಲ್ಲಿ ಸುಪಾ ಸೊಸೈಟಿಯ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...