ಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ  

Source: sonews | By Staff Correspondent | Published on 18th November 2017, 1:24 AM | Coastal News | Don't Miss |

ಕಾರವಾರ: ಪೌರ ಕಾರ್ಮಿಕರ ಜೀವನದಾರಿತ ಅಮರಾವತಿ ಕನ್ನಡ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸುತ್ತಿರುವದು ಪೌರಕಾರ್ಮಿಕರ ಸಮಸ್ಯೆಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಸಹಕಾರಿಯಾಗುತ್ತದೆ ಎಂದು ಕಾರವಾರ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಿ.ರಮೇಶಬಾಬು ಅಭಿಪ್ರಾಯ ವ್ಯಕ್ತಪಡಿಸಿದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ  ಜಿಲ್ಲಾಡಳಿತ ಸಹಯೋಗದಲ್ಲಿ  ನಗರದ ಅರ್ಜುನ ಚಿತ್ರಮಂದಿರದಲ್ಲಿ ಇಂದಿನಿಂದ ನವ್ಹಂಬರ 23 ರವರೆಗೆ ಆಯೋಜಿಸಲಾಗಿರುವ ಚಿತ್ರೋತ್ಸವ ಸಪ್ತಾಹಕ್ಕೆ   ಚಾಲನೆ ನೀಡಿ ಮಾತನಾಡಿ ಎಲ್ಲ ಪೌರಕಾರ್ಮಿಕರು ಉಚಿತವಾಗಿ ಪ್ರದರ್ಶಿಸಲಾಗುತ್ತಿರುವ ಚಲನಚಿತ್ರಗಳನ್ನು ನೋಡಿ ಆನಂದ ಪಡೆಯಬೇಕೆಂದು ಹೇಳಿದರು. 
 
ಕಾರವಾರ ನಗರಸಭೆ ಪೌರಾಯುಕ್ತ ಎಸ್.ಯೊಗೇಶ್ವರ ಮಾತನಾಡಿ ಕಾರವಾರದ ನಾಲ್ಕು ಜನ ಪೌರಕಾರ್ಮಿಕರು ವಿದೇಶಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಪೌರಕಾರ್ಮಿಕರ ಕುರಿತ ಚಿತ್ರ ಪ್ರದರ್ಶಿಸುತ್ತಿರುವದು ಸಂತೋಷಕರ ಸಂಗತಿ. ಒಂದು ವಾರದವರೆಗೆ ಉಚಿತವಾಗಿ ಪ್ರದರ್ಶನಗೊಳ್ಳುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ವೀಕ್ಷಿಸುವ ಸುವರ್ಣಾವಕಾಶವನ್ನು  ಶಾಲಾ ಕಾಲೇಜು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. 
 
ಅಮರಾವತಿ ಕನ್ನಡ ಚಲನಚಿತ್ರದ ಸಹಾಯಕ ನಿರ್ದೇಶಕ ಶಾಮ ಸುಂದರ ಮಾತನಾಡಿ ಸೀನಿಮಾ ಅಭಿವ್ಯಕ್ತಿ ಹೊರಹಾಕುವ ಒಂದು ಮಾದ್ಯಮವಾಗಿದೆ. ಒಂದು ನಗರ ಸುಂದರ ಕಾಣಲು ಅಲ್ಲಿ ಪೌರಕಾರ್ಮಿಕರ ಶ್ರಮವಿರುತ್ತದೆ. ಪೌರಕಾರ್ಮಿಕರ ಕುರಿತ ಅಮರಾವತಿ ಚಿತ್ರವನ್ನು ನೋಡುವ ಅವಕಾಶವನ್ನು ನಗರದ ಜನತೆ ಪಡೆದುಕೊಳ್ಳಿ ಎಂದು ಹೇಳಿದರು. 
 
ಕಾರ್ಯಕ್ರಮದಕಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಂತರಾಜು. ಜಿ. ಮಾತನಾಡಿ ಪ್ರಶಸ್ತಿ ವಿಜೇತ  ಚಲನಚಿತ್ರಗಳಾದ ಕಿರಿಕ್ ಪಾರ್ಟಿ, ರಾಮ ರಾಮ ರೇ, ಮದಿಪು(ತುಳು) ಯೂ ಟರ್ನ, ಅಲ್ಲಮ, ಮಾರಿಕೊಂಡವರು ಚಿತ್ರಗಳನ್ನು ವೀಕ್ಷಿಸಲು ಚಿತ್ರೋತ್ಸವ ಸಪ್ತಾಹ  ಉತ್ತಮ ಅವಕಾಶವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು. 

             ನ.22 ರಂದು ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಸಭೆ 
ಕಾರವಾರ: ನವ್ಹಂಬರ 22 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಪಂಚಾಯ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ ನಡೆಯಲಿದೆ ಎಂದು ಕಾರವಾರ ತಾಲೂಕು ಪಂಚಾಯತ್  ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
                                   ಅರ್ಜಿ ಆಹ್ವಾನ 
ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಾಧ್ಯಪಕರು 4, ಸಹಪ್ರಾಧ್ಯಪಕರು 5, ಸಹಾಯಕ ಪ್ರಾಧ್ಯಪಕರು 10, ಸೀನಿಯರ ರೆಸಿಡೆಂಟ 16, ಸಿ.ಎಂ ಓ ಕಮ್ ರೆಸಿಡೆಂಟ್ 02, ಜೂನಿಯರ ರೆಸಿಡೆಂಟ 27, ಟ್ಯೂಟರ್ 17 ಹುದ್ದೆಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
  
ಆಸಕ್ತ ಎಂ.ಬಿ.ಬಿ.ಎಸ್./ಎಂ.ಎಸ್./ ಎಂ.ಡಿ. ಅಥವಾ ಡಿ.ಎನ್.ಬಿ ವೈದ್ಯರು ಸಂಸ್ಥೆಯ ತಿebsiಣe ನಲ್ಲಿ ಪ್ರಕಟಿಸಲಾದ ಅರ್ಜಿಯ ನಮೂನೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಿ ನವ್ಹಂಬರ 25 ರಂದು ಜರುಗಲಿರುವ ನೇರ ಸಂದರ್ಶನಕ್ಕೆ ಹಾಜರಾಬಹುದು. ಹೆಚ್ಚಿನ ವಿವರಗಳನ್ನು www.kimskarwar.kar.nic.in ನಿಂದ ಪಡೆದುಕೊಳ್ಳಬಹುದಾಗಿದೆ. ಜೂನಿಯರ್ ರೆಸಿಡೆಂಟ್ (27 ಹುದ್ದೆಗಳು) & ಟ್ಯೂಟರ್ಸ್ (17 ಹುದ್ದೆಗಳು) ಅಭ್ಯರ್ಥಿಗಳು ಯಾವುದೇ ಕೆಲಸದ ದಿನ ಕಚೇರಿ ವೇಳೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...