ಮಕ್ಕಳು ಒಳ್ಳೆಯ ಅಭ್ಯಾಸಗಳಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು-ರಾಜೇಶ್ ವೆರ್ಣೇಕರ್

Source: sonews | By Staff Correspondent | Published on 23rd November 2017, 3:49 PM | Coastal News | Don't Miss |

ಕಾರವಾರ: ಮಕ್ಕಳು ದೇಶದ ಭವಿಷ್ಯ. ದೈನಂದಿನ ಜೀವನದಲ್ಲಿ ಮಕ್ಕಳು ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡು ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವ್ಯಯಕ್ತಿಕ ಸ್ವಚ್ಛತೆಯ ಜೊತೆಗೆ ಸುತ್ತ ಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಡುವುದನ್ನು ರೂಢಿಸಿಕೊಳ್ಳವುದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬಹುದು ಜೊತೆಗೆ ಒಗ್ಗಟ್ಟಿನಿಂದ ಬಾಳಬೇಕು. ಎಂದು ರೋಟರಿ ಕ್ಲಬ್ ಕಾರವಾರದ ಅಧ್ಯಕ್ಷರಾದ ರಾಜೇಶ್ ವೆರ್ಣೆಕರ್ ರವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ ಹಾಗೂ ರೋಟರಿ ಕ್ಲಬ್ ಕಾರವಾರದವರು ಸಂಯುಕ್ತವಾಗಿ ಸ.ಕಿ.ಪ್ರಾ.ಕ.ಶಾಲೆ ನಾಗಫೊಂಡ ನಂ-1 ಸದಾಶಿವಗಡದಲ್ಲಿ ಹಮ್ಮಿಕೊಂಡ ಉಚಿತ ದಂತ ತಪಾಸಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. 
  ಅಧ್ಯಕ್ಷತೆಯನ್ನು ವಹಿಸಿದ್ಧ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರೂ ಹಾಗೂ ಲಯನ್ಸ್ ಕ್ಲಬ್‍ನ ಕಾರ್ಯದರ್ಶಿಗಳೂ ಆಗಿರುವ ಇಬ್ರಾಹಿಂ ಕಲ್ಲೂರ್‍ರವರು ಮಾತನಾಡಿ ಸ್ವಚ್ಛತೆಯನ್ನು ಶಾಲಾ ಹಂತಗಳಿಂದಲೇ ಪ್ರಾರಂಭಿಸುವುದರಿಂದ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಬಾಲ್ಯದಿಂದಲೇ ಅರಿವು ಮೂಡುತ್ತದೆ. ಮೊದಲು ವ್ಯಯಕ್ತಿಕ ಸ್ವಚ್ಛತೆ ನಂತರ ಸುತ್ತಮುತ್ತಲಿನ ಸ್ವಚ್ಛತೆ ಮಾಡುವುದರಿಂದ ದೇಶವನ್ನೇ ಸ್ವಚ್ಛವಾಗಿಡಲು ಸಾದ್ಯ. ಎಲ್ಲರೂ ಒಂದು ಗೂಡಿ ಇಂತಹ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್‍ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‍ನ ಸದಸ್ಯರೂ ಹಾಗೂ ದಂತ ವ್ಯೆದ್ಯರೂ ಆದ ಡಾ|| ಸಮೀರ್ ಕುಮಾರ್ ನಾಯಕರವರು ಹಲ್ಲಿನ ಕಾರ್ಯ, ಉಪಯೋಗ ಹಾಗೂ ಸಂರಕ್ಷಣೆಯ ಬಗ್ಗೆ ವಿವರವಾಗಿ ತಿಳಿಸಿದರು ಜೊತೆಗೆ ಎಲ್ಲಾ ಮಕ್ಕಳಿಗೂ ಉಚಿತವಾಗಿ ಹಲ್ಲಿನ ತಪಾಸಣೆಯನ್ನು ಮಾಡಿ ಹಲ್ಲು ಸ್ವಚ್ಛಮಾಡುವ ವಿಧಾನವನ್ನು ತೋರಿಸಿ ಕೋಲ್ಗೇಟನ್ನು ಪೇಸ್ಟನ್ನು ನೀಡಿದರು. 
  ಪ್ರಾರಂಭದಲ್ಲಿ ಶಿಕ್ಷಕಿ ಫೈರೋಜಾ ಬೇಗಂ ಶೇಖ್ ರವರು ಎಲ್ಲರನ್ನು ಸ್ವಾಗತಿಸಿದರು. ರೊ.ಎಲ್.ಎಸ್.ಫರ್ನಾಂಡಿಸ್‍ರವರು ಕಾರ್ಯಕ್ರಮವನ್ನು ನಿರೂಪಿಸಿದರು. ರೋಟರಿ ಕ್ಲಬ್‍ನ ಕಾರ್ಯದರ್ಶಿ ರೊ.ಸಾತಪ್ಪ ತಾಡೇಲ್‍ರವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಆಝಾದ್ ಯುಥ್ ಕ್ಲಬ್‍ನ ಅಧ್ಯಕ್ಷರಾದ ಮೊಹಮ್ಮದ್ ಹಸನ್ ಶೇಖ್, ಅರ್ಪಿತಾ ನಾಯಕ, ಎಸ್.ಡಿ.ಎಮ್.ಸಿ.ಯ ಲಕ್ಷ್ಮೀ ಪಿ.ಗೌಡ ಉಪಸ್ಥಿತರಿದ್ದರು.      
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...