ಕಲಿಕೆಗೆ ಸ್ವತಂತ್ರ ಪರಿಸರದ ಅವಶ್ಯಕತೆ ಇದೆ-ಪಿ.ಕೆ.ಪ್ರಕಾಶ

Source: sonews | By Staff Correspondent | Published on 22nd March 2018, 11:06 PM | Coastal News | Don't Miss |

ಕಾರವಾರ:ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಅದಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಕ್ಷಣ ಇಲಾಖೆಯು ಸಹ ಇದಕ್ಕಾಗಿ ಶ್ರಮಿಸುತ್ತಿದೆ. ಶಾಲೆಗಳ ಅಭಿವೃದ್ಧಿಗಾಗಿ ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳ ಹಾಗೂ ಸಮುದಾಯದವರ ಸಂಪೂರ್ಣ ಸಹಕಾರ ಅಗತ್ಯವಾಗಿದೆ. ಎಲ್ಲರ ಸಹಯೋಗದಿಂದ ಗುಣ ಮಟ್ಟದ ಶಿಕ್ಷಣ ಸಾಧ್ಯ. ಸರಕಾರಿ ಶಾಲೆಗಳಲ್ಲಿ ಮ್ಕಕಳಲ್ಲಿ ಉತ್ತಮವಾದ ಮೌಲ್ಯಗಳು ಬೇಳೆಯುತ್ತವೆ. ಕಲಿಕೆ ಅರಳಲು ಸ್ವತಂತ್ರ ಪರಿಸರದ ಅವಶ್ಯಕತೆ ಇದೆ. ಮಕ್ಕಳ ಶಾಶ್ವತ ಕಲಿಕೆಗಾಗಿ ಎಲ್ಲರು ಶ್ರಮಿಸೋಣ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಿ.ಕೆ.ಪ್ರಕಾಶರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಇನ್ನರ್‍ವ್ಹೀಲ್ ಕ್ಲಬ್ ಕಾರವಾರದವರು ಸದಾಶಿವಗಡದ ಸ.ಕಿ.ಪ್ರಾ.ಕ.ಶಾಲೆ ನಾಗಫೊಂಡ ನಂ-1 ರಲ್ಲಿ ಹಮ್ಮಿಕೊಂಡ ನಲಿಕಲಿ ಮಕ್ಕಳಿಗಾಗಿ ಕುಳಿತುಕೊಳ್ಳಲು ಮಿನಿ ಟೇಬಲ್ ಹಾಗೂ ಮಿನಿ ಕುರ್ಚಿಗಳನ್ನು ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಲೆಗೆ ಅವುಗಳನ್ನು ವಿತರಿಸುತ್ತಾ ಮಾತನಾಡಿದರು. ಜೊತೆಗೆ ಮಹಿಳೆಯರೂ ಸಹ ಈ ರೀತಿ ಮುಂದೆ ಬರುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಇನ್ನರ್‍ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಯಾದ ಸುಶೀಲಾ ಗಾಂವ್ಕಾರ್‍ರವರು ಮಾತನಾಡಿ ಬಡ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗಳಲ್ಲಿ ಅವರ ಕಲಿಕೆಗೆ ಸಹಕರಿಸುವುದು ನಮ್ಮ ಕ್ಲಬ್‍ನ ಧ್ಯೇಯವಾಗಿದೆ. ಇದಕ್ಕೆ ತಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು. ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ ರವರು ಮಾತನಾಡಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯವನ್ನು ಕೇಂದ್ರವಾಗಿಟ್ಟು ನಮ್ಮ ಕ್ಲಬ್ ವತಿಯಿಂದ ಅನೇಕ ಶಾಲೆಗಳಲ್ಲಿ ಉಚಿತ ರಕ್ತದ ಗುಂಪು ತಪಾಸಣೆ ಹಾಗೂ ನೋಟ್ ಬುಕ್‍ಗಳನ್ನು ನೀಡಿರುತ್ತೇವೆ ಎಂದು ಹೇಳಿದರು. ಲಯನ್ಸ್ ಕ್ಲಬ್ ಕಾರವಾರದ ಅಧ್ಯಕ್ಷರಾದ ಲ.ಅಲ್ತಾಫ್ ಶೇಖ್‍ರವರು ಮಾತನಾಡಿ ಶಾಲೆಯ ಮಕ್ಕಳಿಗೆ ಕಲಿಕೆಗೆ ಸಹಕಾರಿಯಾಗಲು ಸಹಕರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇನ್ನರ್‍ವ್ಹೀಲ್ ಕ್ಲಬ್‍ನ ಕಾರ್ಯದರ್ಶಿ ಭಾರತಿ ಸೈಲ್‍ರವರು ಮಾತನಾಡಿ ಅನೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಕ್ಲಬ್ ವತಿಯಿಂದ ನೆರವೇರಿಸಿಕೊಟ್ಟಿದ್ದು ಮುಂದೆಯೂ ಈ ರೀತಿಸೇವೆಯನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಫೈರೋಜಾ ಬೇಗಂ ಶೇಖ್‍ರವರು ಶಾಲೆಗೆ ನಲಿಕಲಿ ಮಕ್ಕಳಿಗಾಗಿ ಮೂರು ಮಿನಿ ಟೇಬಲ್ ಹಾಗೂ ಹನ್ನೆರಡು ಕುರ್ಚಿಗಳನ್ನು ಮತ್ತು ಇನ್ನರ್‍ವ್ಹೀಲ್ ಕ್ಲಬ್‍ನವರು ಎರಡು ಟೇಬಲ್ ಹಾಗೂ ನಾಲ್ಕು ಕುರ್ಚಿಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಆಝಾದ್ ಯುಥ್ ಕ್ಲಬ್‍ನ ಅಧ್ಯಕ್ಷ ಮೊಹಮ್ಮದ್ ಹಸನ್ ಶೇಖ್,   ಇನ್ನರ್‍ವ್ಹೀಲ್ ಕ್ಲಬ್‍ನ ಸದಸ್ಯರಾದ ನೇಹಾ ದೇಸಾಯಿ, ಜ್ಯೋತಿ ಶೆಟ್ಟಿಗಾರ್, ಸೋನಾ ಫರ್ನಾಂಡಿಸ್, ಅರ್ಚನಾ ಶೆಟ್ಟಿ, ಸುಷ್ಮಾ ಬಾಡ್ಕರ್ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್‍ರವರು ಸಂಘಟಿಸಿದ್ದರು ಪ್ರಾರಂಭದಲ್ಲಿ ಶಿಕ್ಷಕಿ ಫೈರೋಜಾ ಬೇಗಂ ಶೇಖ್‍ರವರು ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಮುಖ್ಯಾಧ್ಯಾಪಕಿ ಕಲ್ಪನಾ ಎನ್.ನಾಯ್ಕರವರು ವಂದಿಸಿದರು.       
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...