ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಆಹ್ವಾನ

Source: sonews | By Staff Correspondent | Published on 26th June 2018, 8:07 PM | Coastal News | Don't Miss |

ಕಾರವಾರ : : ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ   ಅರಿವು  ಶೈಕ್ಷಣಿಕ ಸಾಲ   ಯೋಜನೆಯಡಿ  ಬೆಸ್ತ, ಕಬ್ಬಲಿ ಕೋಲಿ,   ಗಂಗಾಮತ, ಮೊಗವೀರ, ಮತ್ತು ಇದರ  ಉಪಜಾತಿಗಳಿಗೆ  ಸೇರಿದ ವರ್ಗ-1ರಲ್ಲಿ  ಬರುವ   ವಿದ್ಯಾರ್ಥಿಗಳ   ವ್ಯಾಸಂಗಕ್ಕೆ   ಗರಿಷ್ಠ 1 ಲಕ್ಷದವರೆಗೆ  ಶೇಕಡಾ 2% ರ ಬಡ್ಡಿ ದರದಲ್ಲಿ ಸಾಲ  ಮಂಜೂರು  ಮಾಡಲಾಗುವುದು.

ವಿದ್ಯಾರ್ಥಿಗಳು ಸಿ.ಇ.ಟಿ ಮೂಲಕ ಅಥವಾ ಮೆರಿಟ್ ಆಧಾರದ ಮೇಲೆ ಸೀಟು ಪಡೆದು ಬಿ.ಇ, ಎಂ.ಬಿ.ಬಿ.ಎಸ್ ,ಬಿ.ಡಿ.ಎಸ್  ಇತ್ಯಾದಿ  ಕೋರ್ಸುಗಳಲ್ಲಿ  ವ್ಯಾಸಂಗ  ಮಾಡಬೇಕು, ವಿದ್ಯಾರ್ಥಿಗಳ  ಕುಟುಂಬದ  ವಾರ್ಷಿಕ  ವರಮಾನ  ರೂ. 3.5 ಲಕ್ಷಗಳ  ಮಿತಿಯಲ್ಲಿರಬೇಕು 
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು,  ವಿದ್ಯಾರ್ಥಿಗಳು   ಸ್ವ -ವಿವರಗಳನ್ನೊಳಗೊಂಡ  ಅರ್ಜಿಯನ್ನು  ಅಗತ್ಯ ದಾಖಲೆಗಳೊಂದಿಗೆ  ವಿದ್ಯಾರ್ಥಿಯ ಹೆಸರು ,ವಾಸಸ್ಥಳ, ವಿಳಾಸ ,ದೂರವಾಣಿ, ವ್ಯಾಸಂಗ ಮಾಡುವ ಕೋರ್ಸ, ಈಗ ವ್ಯಾಸಂಗ ಮಾಡುವ ಕಾಲೇಜಿನಿಂದ ವ್ಯಾಸಂಗದ ದೃಡಿಕರಣ, ಸಿ.ಇ.ಟಿ  ಎಡ್ಮಿಶನ್  ಆರ್ಡರ ಪ್ರತಿ, ಜಾತಿ ಮತ್ತು ಆದಾಯ ,ಎಸ್.ಎಸ್.ಎಲ್.ಸಿ ಅಂಕ ಪಟ್ಟಿ, ಬಾವಚಿತ್ರ, ಬ್ಯಾಂಕ ಪಾಸ ಪುಸ್ತಕದ ಪ್ರತಿ.  ಇತ್ಯಾದಿಗಳೊಂದಿಗೆ,  ಜಿಲ್ಲಾ  ವ್ಯವಸ್ಥಾಪಕರು,  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ  ಅಭಿವೃದ್ಧಿ ನಿಗಮ, ಹೈ ಚರ್ಚ ಹತ್ತಿರ, ಕಾರವಾರ ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :08382-223229 ಸಂಪರ್ಕಿಸುವಂತೆ ಜಿಲ್ಲಾ ವ್ಯವಸ್ಥಾಪಕ ಡಿ.ಡಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...