ಕಾರವಾರ: ಉ.ಕ.ಜಿಲ್ಲೆಯ ಮೂವರ ಮೇಲೆ ಗೂಂಡಾ ಕಾಯ್ದೆ

Source: sonews | By Staff Correspondent | Published on 9th February 2018, 5:42 PM | Coastal News | State News | Don't Miss |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರೂಡಿಗತವಾಗಿ ಸಮಾಜ ಘಾತುಕ ಅಪರಾಧಗಳನ್ನು ಮಾಡುತ್ತಿದ್ದ 3 ಜನರ ವಿರುದ್ಧ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಕಾರವಾರ ರವರು ಗೂಂಡಾ ಕಾನೂನಿನಡಿ ಕ್ರಮ ಜರುಗಿಸಿದ ಕುರಿತು.

1)    ಹೊಸಬು ಮಾಬ್ಲೇಶ್ವರ ಗೌಡ, 54 ವರ್ಷ,  ಬಿಜ್ಜೂರು ಗೋಕರ್ಣ
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಾಂಜಾ ಮಾದಕ ವಸ್ತುವಿನ ಮಾರಾಟದಿಂದ ಯುವ ಪಿಳಿಗೆಯು ಹಾಳಾಗುತ್ತಿರುವುದನ್ನು ಮನಗಂಡು ಈಗಾಗಲೇ ವಿಶೇಷ ಡ್ರೈವ್ ಮಾಡಿ 32 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. 

ಮುಖ್ಯವಾಗಿ ಗೋಕರ್ಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿದ್ದು 2007 ರಿಂದ 2017 ರವರೆಗೆ ಒಟ್ಟು   34 ಮಾದಕ ವಸ್ತು ಸಾಗಾಟ ಮಾರಾಟ  ಪ್ರಕರಣಗಳು ಪತ್ತೆಯಾಗಿರುತ್ತದೆ. ಗೋಕರ್ಣವು ಧಾರ್ಮಿಕವಾಗಿ ಅತಿ ಪ್ರಮುಖವಾಗಿದ್ದು  ಅಲ್ಲದೇ ಅಪಾರ ಸಂಖ್ಯೆಯ  ಪ್ರವಾಸಿಗರು  ಮುಖ್ಯವಾಗಿ ವಿದೇಶಿಯವರು ಆಗಮಿಸುತ್ತಿದ್ದು ಪ್ರವಾಸಿಗರ ಹಿತ ದೃಷ್ಟಿಯಿಂದ ಮಾದಕ ವಸ್ತು ಮಾರಾಟ ತಡೆ ಮಾಡಲಾಗುತ್ತಿದೆ.

ಈಗಾಗಲೇ  ಕಳೆದ 10 ವರ್ಷಗಳಿಂದ ಗೋಕರ್ಣದ ಹೊಸಬು ಮಾಬ್ಲೇಶ್ವರ ಗೌಡ ಇತನ ವಿರುದ್ಧ  ಎನ್.ಡಿ.ಪಿ.ಎಸ್. ಕಾಯಿದೆ -1985 ಹಾಗೂ ಇನ್ನುಳಿದ ಕಾನೂನಿನಡಿ ಒಟ್ಟೂ 10 ದಾಖಲಾಗಿರುತ್ತವೆ. ಹಾಗೂ 2017 ನೇ ಸಾಲಿನಲ್ಲಿ ಮಾದಕ ದ್ರವ್ಯ ಮಾರಾಟ ಕುರಿತಾಗಿ 02 ಪ್ರಕರಣ ದಾಖಲಾಗಿರುತ್ತವೆ. ಹಾಗೂ 01  ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಶಿಕ್ಷೆಯೂ ಆಗಿರುತ್ತದೆ.  

ಇತನ ಕಾನೂನು ಬಾಹಿರ ಸಮಾಜ ಘಾತಕ ಕೃತ್ಯಗಳನ್ನು ನಿಯಂತ್ರಿಸುವ ಸಂಬಂಧವಾಗಿ ಈತನ ಮೇಲೆ ಗೂಂಡಾ ಕಾನೂನಿನಡಿ ಕ್ರಮ ಜರುಗಿಸಲಾಗಿದೆ.
    
2)    ಸುರೇಶ ರಾಮಪ್ಪ ಜಿಂಗಾಡೆ, 52 ವರ್ಷ, ಹಾಳದಕಟ್ಟಾ, ಸಿದ್ದಾಪುರ
ಸಿದ್ದಾಪುರ ತಾಲೂಕಿನಲ್ಲಿ ಮಟಕಾ ಜೂಗಾರಾಟವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಿದ್ದು, ಪ್ರಕರಣ ದಾಖಲಿಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಹಲ್ಲೆ ಮಾಡಿದ ಪ್ರಕರಣಗಳು ಇತನ ಮೇಲೆ ದಾಖಲಾಗಿರುತ್ತದೆ. ಸಿದ್ದಾಪುರ ತಾಲೂಕಿನಲ್ಲಿ ಮದ್ಯಮ ವರ್ಗದ ಮತ್ತು ಕೂಲಿಕಾರ ಜನರು ಮಟಕ ಜೂಗಾರಾಟ ಹೆಸರಿನಿಂದ ಹಾಳಾಗುತ್ತಿದ್ದು,  ಈಗಾಗಲೇ ಆತನ ಮೇಲೆ 17 ಮಟಕಾ ಜೂಗಾರಾಟದ ಮತ್ತು ಇತರ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುತ್ತದೆ. 

ಇತನ ಕಾನೂನು ಬಾಹಿರ ಸಮಾಜ ಘಾತಕ ಕೃತ್ಯಗಳನ್ನು ನಿಯಂತ್ರಿಸುವ ಸಂಬಂಧವಾಗಿ ಈತನ ಮೇಲೆ ಗೂಂಡಾ ಕಾನೂನಿನಡಿ ಕ್ರಮ ಜರುಗಿಸಲಾಗಿದೆ.

3)    ಬಡೆಸಾಬ ಹುಸೇನ ಸಾಬ ಕಕ್ಕೇರಿ, 43 ವರ್ಷ, ಸಾ|| ತಟ್ಟಿಗೇರಿ ಹಳಿಯಾಳ
ಹಳಿಯಾಳ ತಾಲೂಕಿನಲ್ಲಿ ನಿರಂತರವಾಗಿ ಗಲಾಟೆ, ದೊಂಬಿ, ಹಾಗೂ ಅಕ್ರಮವಾಗಿ ಬಡ ನಿರಕ್ಷರ ಜನರಿಗೆ ತಪ್ಪು ಮಾಹಿತಿಯನ್ನು ನೀಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಇತನ ಮೇಲೆ ಈಗಾಗಲೇ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಮುಖ್ಯವಾಗಿ  ದೊಂಬಿ, ಮಹಿಳೆಯರ ಮೇಲೆ 

ದೌರ್ಜನ್ಯ, ಜೀವ ಬೆದರಿಕೆ, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ವನ್ಯ ಜೀವಿ ಕಾನೂನಿನಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಫಿರ್ಯಾಧಿದಾರರಿಗೆ 
ಹಾಗೂ ಸಾಕ್ಷಿದಾರರಿಗೆ ವಿಚಾರಣೆ ಪೂರ್ವ ಹೆದರಿಸಿ ಸಾಕ್ಷಿ ಹೇಳದಂತೆ ಮಾಡಿದ ದೂರುಗಳು ಬಂದಿರುತ್ತದೆ. 

ಈ ಮೂರು ಪ್ರಕರಣಗಳನ್ನು ಪರಿಶೀಲಿಸಿದ ಶ್ರೀ ವಿನಾಯಕ್ ಪಾಟೀಲ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಉ.ಕ. ಕಾರವಾರ, ರವರು ಈ ಸಮಾಜ ಘಾತುಕ ವ್ಯಕ್ತಿಗಳ ಅಪರಾಧ ಕೃತ್ಯಗಳ ಮೇಲೆ  ನಿಯಂತ್ರಣ ಇಡುವ ಸಂಬಂಧವಾಗಿ ಗೂಂಡಾ ಕಾನೂನಿನಡಿ ಕ್ರಮ ಜರುಗಿಸುವ ಅವಶ್ಯಕತೆ ಕಂಡುಬಂದಿದ್ದರಿಂದ ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಢಾಧಿಕಾರಿಗಳು ಉ,.ಕ. ಕಾರವಾರ ರವರಿಗೆ ಪ್ರಸ್ಥಾವನೆಯನ್ನು ಸಲ್ಲಿಸಿದ್ದರು.

ಶ್ರೀ ಎಸ್.ಎಸ್. ನಕುಲ ಐ.ಎ.ಎಸ್, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಢಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ವಿಚಾರಣೆ ನಡೆಸಿ ದಿನಾಂಕ 08-02-2018 ರಿಂದ ಮೂರು ತಿಂಗಳ ವರೆಗೆ ಬಂಧನದ ಆದೇಶವನ್ನು ಹೊರಡಿಸಿ ಜಿಲ್ಲಾ ಕಾರಾಗೃಹ ಕಾರವಾರದಲ್ಲಿ ಬಂದನದಲ್ಲಿಡುವ ಕುರಿತು ಆದೇಶಿಸಿರುತ್ತಾರೆ.

 .
 ಸಾರ್ವಜನಿಕ ಸಂಪರ್ಕಾಧಿಕಾರಿ,
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ,
 ಉತ್ತರ ಕನ್ನಡ ಜಿಲ್ಲೆ, ಕಾರವಾರ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...